ಮಂಗಳೂರು(ಸೆ.24): ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಸೋಮವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಒಂದೇ ಸಮನೆ ಬಿಡದೆ ಸುರಿದ ಉತ್ತರ ನಕ್ಷತ್ರದ ಮಳೆಗೆ ದರ್ಪಣ ತೀರ್ಥ ನದಿ ಪ್ರವಾಹದಿಂದ ತುಂಬಿ ಹರಿಯಿತು.

ದರ್ಪಣ ತೀರ್ಥ ನದಿಯಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ನೀರು ಆದಿಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣ ಪ್ರವೇಶಿಸಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ದರ್ಪಣ ತೀರ್ಥ ನದಿ ತಟದಲ್ಲಿ ನಿರ್ಮಿಸಿದ್ದ ಗೋಪುರ ಮುಕ್ಕಾಲು ಭಾಗ ಮುಳುಗಿತು. ಕುಕ್ಕೆಸುಬ್ರಹ್ಮಣ್ಯದಿಂದ ಆದಿಸುಬ್ರಹ್ಮಣ್ಯ ಸಂಪರ್ಕಿಸುವ ಸೇತುವೆ ಮುಳುಗಡೆಗೊಂಡಿತು. ದರ್ಪಣತೀರ್ಥ ನದಿ ನೀರು ಆದಿಸುಬ್ರಹ್ಮಣ್ಯ ಉದ್ಯಾನವನಕ್ಕೆ ನುಗ್ಗಿತ್ತು. ಎರಡು ಗಂಟೆಗಳ ಕಾಲ ಭಾರಿ ಮಳೆ ಸುರಿದಿದೆ. ಮಳೆ ನಿಂತ ತಕ್ಷಣ ಪ್ರವಾಹ ಕಡಿಮೆಯಾಗಿದೆ.

ಯೂತ್ ಕಾಂಗ್ರೆಸ್ ಕಾರ್ಯದರ್ಶಿಯಿಂದ ಗುಂಡು, ಶೂಟೌಟ್‌ಗೆ ಕಾರಣವಾಯ್ತಾ ವಾಟ್ಸಪ್ ಸ್ಟೇಟಸ್..?

ದರ್ಪಣತೀರ್ಥದಲ್ಲಿ ಮಾತ್ರ ನೀರು:

ಉತ್ತರದ ಮಳೆಗೆ ಪ್ರತಿವರ್ಷ ದರ್ಪಣ ತೀರ್ಥ ನದಿಯಲ್ಲಿ ಮಾತ್ರ ನೀರು ತುಂಬಿ ಹರಿಯುತ್ತದೆ. ಈ ಮಳೆಗೆ ಕುಮಾರಧಾರ ನದಿ ಪ್ರವಾಹದಿಂದ ಕೂಡಿರುವುದಿಲ್ಲ. ಸೋಮವಾರ ಪ್ರತಿವರ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ ಮಳೆ ಸುರಿಯಿತು. ದರ್ಪಣ ತೀರ್ಥದ ಪ್ರವಾಹ ಅಧಿಕವಾಗಿ ವಸತಿಗೃಹ, ಮನೆ, ಕೃಷಿ ತೋಟ, ಅಂಗಡಿಗಳಿಗೆ ನೀರು ನುಗ್ಗಿದೆ. ಸಂಜೆ ತನಕ ಬಿಸಿಲಿದ್ದು, ಏಕಾಏಕಿ ಸುರಿದ ಮಳೆಗೆ ಅನಿರೀಕ್ಷಿತ ಪ್ರವಾಹದಿಂದ ಜನರಲ್ಲಿ ಆತಂಕ ಮೂಡಿಸಿತು.

ಮಂಗಳೂರು: ಕ್ಯಾನ್ಸರ್ ಸಂತ್ರಸ್ತೆಯರಿಗಾಗಿ ಕೇಶ ದಾನ ಮಾಡಿದ ವಿದ್ಯಾರ್ಥಿನಿ

ದೇವರಗದ್ದೆ ರಸ್ತೆ ಬಂದ್‌:

ಮಳೆ ಕಾರಣದಿಂದ ಆದಿಸುಬ್ರಹ್ಮಣ್ಯ ರಸ್ತೆಯು ಸಂಪೂರ್ಣ ನೀರಿನಿಂದ ಆವೃತ್ತವಾಗಿತ್ತು. ಅಲ್ಲದೆ ಇಲ್ಲಿನ ಅಂಗಡಿ, ಹೋಟೆಲ್‌ಗಳಿಗೆ ನೀರು ನುಗ್ಗಿತ್ತು. ದರ್ಪಣ ತೀರ್ಥ ನದಿಯಲ್ಲಿ ಪ್ರವಾಹ ಬಂದುದರಿಂದ ದೇವರಗದ್ದೆ ರಸ್ತೆಯಲ್ಲಿ ಪ್ರವಾಹ ಹರಿದು ಸಂಚಾರ ಸ್ಥಗಿತಗೊಂಡಿತ್ತು.

ಇಂದು, ನಾಳೆ ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ:

ಹವಾಮಾನ ಮುನ್ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ ಮುಂದಿನ 24 ಗಂಟೆಗಳ ಕಾಲ ಸಮುದ್ರವು ಪ್ರಕ್ಷುಬ್ಧವಾಗುವ ಸಂಭವನೀಯತೆ ಇದೆ. ಆದ್ದರಿಂದ ಸೆ.23ರಿಂದ 25ರವರೆಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳದಂತೆ ಎಲ್ಲ ಮೀನುಗಾರರಿಗೆ ಮೀನುಗಾರಿಕಾ ಉಪನಿರ್ದೇಶಕರು ಮುನ್ನೆಚ್ಚರಿಕೆ ನೀಡಿದ್ದಾರೆ.