Asianet Suvarna News Asianet Suvarna News

Bengaluru ನಿಲ್ಲದ ವರುಣನ ಆರ್ಭಟ, ಹೊಳೆಯಂತಾಗಿವೆ ರಸ್ತೆಗಳು, ವಾಹನ ಸವಾರರ ಪರದಾಟ

  • ಬೆಂಗಳೂರಿನಲ್ಲಿ ಗುರುವಾರ ಸುರಿದ ಭಾರೀ ಮಳೆಯಿಂದ ಭಾರೀ ಪ್ರಮಾಣದಲ್ಲಿ ಹಾನಿ
  • ವೆಸ್ಟ್ ಝೋನ್‌ನಲ್ಲಿ ಹೆಚ್ಚು ಮಳೆ ದಾಖಲಾಗಿದ್ದು ವಾಹನ ಸವಾರರು ಸಾರ್ವಜನಿಕರು ಪರದಾಡುವಂತಾಗಿದೆ
Heavy Rain lashes in Many parts of Bengaluru snr
Author
Bengaluru, First Published Oct 15, 2021, 11:16 AM IST
  • Facebook
  • Twitter
  • Whatsapp

 ಬೆಂಗಳೂರು (ಅ.15):   ಬೆಂಗಳೂರಿನಲ್ಲಿ (Bengaluru) ಗುರುವಾರ ಸುರಿದ ಭಾರೀ ಮಳೆಯಿಂದ (Heavy Rain) ಭಾರೀ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ವೆಸ್ಟ್ ಝೋನ್‌ನಲ್ಲಿ (West zone) ಹೆಚ್ಚು ಮಳೆ ದಾಖಲಾಗಿದ್ದು ವಾಹನ  (vehicle) ಸವಾರರು ಸಾರ್ವಜನಿಕರು ಪರದಾಡುವಂತಾಗಿದೆ. ರಸ್ತೆಗಳು (Road) ಕೆರೆಯಂತಾಗಿದ್ದು, ಹಲವು ಮನೆಗಳಿಗೂ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದೆ.  

ಲಕ್ಷ್ಮೀ ನಾರಾಯಣಪುರ, ಬಸವೇಶ್ವರ ನಗರ, ಗಾಯತ್ರಿನಗರದಲ್ಲಿ ಮನೆಗೆ ಮಳೆ ನೀರು ನುಗ್ಗಿದ್ದು, ಆರ್ ಆರ್ ನಗರದ ಐಡಿಯಲ್ಸ್ ಹೋಮ್, ಅಕ್ಕಮಹಾದೇವಿ ಮಂಟಪ, ಪೀಣ್ಯಾ (Peenya) 4 ನೇ ಹಂತದಲ್ಲಿ ಮನೆಗಳಿಗೂ ವರುಣನ ಅಬ್ಬರ ಬಿಸಿ ತೀವ್ರವಾಗಿ ತಟ್ಟಿದೆ.  ದಾಸರಹಳ್ಳಿಯಲ್ಲಿ ಅತೀ ಹೆಚ್ಚು ಮಳೆ ದಾಖಲಾಗಿದ್ದು,  ಚಕ್ಕಚಂದ್ರ ಲೇಕ್, ಗುಂಡಪ್ಪ ಲೇಔಟ್, ರಾಯಲ್ ಎನ್‌ಕ್ಲೇವ್, ಬಿಟಿಎಸ್ ಲೇಔಟ್‌ನಲ್ಲಿ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ.  

ಮೈಸೂರು : 5 ದಿನ ಮಳೆಯ ಮುನ್ಸೂಚನೆ

ನಿನ್ನೆ ರಾತ್ರಿಯಿಡಿ ಸುರಿದ ಮಳೆಯಿಂದ ರಸ್ತೆಗಳಲ್ಲಿ ನೀರು (water) ನಿಂತಿದ್ದು, ಸಂಪೂರ್ಣ ಕೆರೆಯಂತಾಗಿವೆ.  ಇದರಿಂದ ವಾಹನ‌ ಸವಾರರು ಸಂಚರಿಸಲಾಗದೇ ಪರದಾಡುವಂತಾಯಿತು.  

ಮಧ್ಯ ರಾತ್ರಿಯಿಂದ ಧಾರಕಾರವಾಗಿ ಸುರಿದ ಮಳೆಯಿಂದ ರಿಚ್ಮಂಡ್ ರಸ್ತೆಯು (Richmond Road) ಸಂಪೂರ್ಣ ಜಲಾವೃತವಾಗಿದೆ.  ಮಳೆಯಿಂದ ಬೆಂಗಳೂರಲ್ಲಿ ಹಲವೆಡೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ.

ಪೂರ್ವ ವಲಯ : ಇನ್ನು ಮಳೆಯಿಂದ ಪೂರ್ವ ವಲಯದಲ್ಲಿ ಯಾವುದೇ ರೀತಿಯ ಹಾನಿಯುಂಟಾಗಿಲ್ಲ. ದಕ್ಷಿಣ ವಲಯದಲ್ಲಿ ಮಳೆಯಿಂದ ಯಾವುದೇ ಅನಾಹುತ ಘಟಿಸಿಲ್ಲ

ಪಶ್ಚಿಮ ವಲಯದಲ್ಲಿ  3 ಕಡೆ ಮನೆಗಳಿಗೆ ನೀರು ನುಗ್ಗಿದ್ದು,  ಲಕ್ಷ್ಮೀನಾರಾಯಣ ಪುರ,  ಬಸವೇಶ್ವರ ನಗರ, ಗಾಯತ್ರಿ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ.

ಮುಳುಗಿದ ಅಂಡರ್ ಪಾಸ್ 

 ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಚಂದಾಪುರ ಬಳಿ ಇರುವ ರೈಲ್ವೇ ಅಂಡರ್ ಪಾಸ್ ನಲ್ಲಿ ಪ್ರತಿ ಬಾರಿ ಮಳೆ‌ ಬಂದ್ರೂ ವಾಹನಗಳು ಸಂಚರಿಸಲು ನಿರ್ಮಿಸಲಾದ ಅಂಡರ್ ಪಾಸ್ ನಲ್ಲಿ ವಾಹನಗಳು ಸಂಚರಿಸಲು ಆಗದ ರೀತಿಯಲ್ಲಿ ನೀರು ನಿಂತಿದೆ.  ಇನ್ನೂ ಮೂರ್ನಾಲಕ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಅಂಡರ್ ಪಾಸ್ ನಲ್ಲಿ ಯಾವುದೇ ವಾಹನಗಳು ಹೋಗಲು ಸಾದ್ಯವಾಗುತ್ತಿಲ್ಲ , ಈ ಮಧ್ಯೆ ಅಂಡರ್ ಪಾಸ್ ಕಥೆ ಅರಿಯದ ಕಾರು ಚಾಲಕನೊರ್ವ ಬಂದು‌ ನೀರಿನಲ್ಲೇ ಮುಳುಗಿ ಹೋಗಿರುವ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ,‌ಇನ್ನೂ ಹಲವರು ಈಗಾಗಲೇ ರೈಲ್ವೇ ಅಧಿಕಾರಿಗಳ‌ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಆರೆಂಜ್ ಅಲರ್ಟ್ ನೀಡಿದ ಹವಾಮಾನ ಇಲಾಖೆ

 

 ನಗರದಲ್ಲಿ ಮಳೆಯ (Rain) ಆರ್ಭಟ ಮುಂದುವರಿದಿದ್ದು ಗುರುವಾರ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ (Weather Department) ಎಚ್ಚರಿಕೆ ನೀಡಿತ್ತು. 

ಬೆಂಗಳೂರು (Bengaluru) ನಗರಕ್ಕೆ ಆರೆಂಜ್ ಅಲರ್ಟ್ (Orange Alert) ನೀಡಲಾಗಿದೆ.  ಬಂಗಾಳಕೊಲ್ಲಿ (Bay Of Bengal) ಅರಬ್ಬಿ ಸಮುದ್ರದಲ್ಲಿನ (Arabian Sea) ವಾಯುಭಾರ ಕುಸಿತ ಮೇಲ್ಮೈ ಸುಳಿಗಾಳಿ ಮತ್ತು ಕಡಿಮೆ ಒತ್ತಡಗಳ ಪ್ರಭಾವದಿಂದ ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ (Widespread rain) ಎಂದು ಹವಾಮಾನ ಇಲಾಖೆ  ತಿಳಿಸಿದೆ. 

 10 ಜಿಲ್ಲೆಗಳಿಗೆ ವರುಣಾಘಾತ : 2 ದಿನ ಭಾರೀ ಮಳೆ!

ಬುಧವಾರವು ನಗರದಲ್ಲಿ ಭರ್ಜರಿ ಮಳೆಯಾಗಿದೆ. ಹಗಲಲ್ಲಿ ಒಂದೆರಡು ಬಾರಿ ಸಾಧಾರಣ ಮಳೆಯಾಗಿದ್ದರೆ, ರಾತ್ರಿ ಮಳೆ ಬಿರುಸು ಪಡೆದುಕೊಂಡಿತು. ರಾಜರಾಜೇಶ್ವರಿ ನಗರ (Rajarajeshwari Nagar), ಬೆಂಗಳೂರು, ಪಶ್ಚಿಮ  ಮತ್ತು ದಕ್ಷಿಣ ಭಾಗದ ಕೆಲವೆಡೆ ಭರ್ಜರಿ ಮಳೆಯಾಗಿತ್ತು. ಗಾರ್ವೆಬಾವಿಪಾಳ್ಯ, ಎನ್‌ಜಿಆರ್‌ ಲೇ ಔಟ್‌ನಲ್ಲಿ ಮನೆಗಳಿಗೆ ನೀರು ನುಗ್ಗಿದೆ, ಯಲಹಂಕ ನ್ಯೂಟೌನ್‌ನಲ್ಲಿ (Yalahanka New Town)  ಮರದ ಕೊಂಬೆ ಬಿದ್ದಿರುವ ದೂರು ಬಂದಿದೆ ಎಂದು ಬಿಬಿಎಂಪಿ (BBMP) ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios