ಮಂಡ್ಯ [ಆ.26]: ಜಿಲ್ಲೆಯ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ಕರೆಯಬೇಕು . ರೈತರ ಕಬ್ಬು ಅರೆಯಲು ಸಕ್ಕರೆ ಕಾರ್ಖಾನೆ ಆರಂಭ ಮಾಡಬೇಕು ಎಂದು ಮಾಜಿ ಸಚಿವ ಪುಟ್ಟರಾಜು ಆಗ್ರಹಿಸಿದರು.

ಮಂಡ್ಯದಲ್ಲಿ ಮಾತನಾಡಿದ ಪುಟ್ಟರಾಜು ಶೀಘ್ರ ರಾಜ್ಯ ಸರ್ಕಾರ ತಮ್ಮ ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಿ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು. 

ನಾಯಕರಿಂದ ನಿರ್ಧಾರ : ಹಿಂದೆ ಮೈತ್ರಿಯಲ್ಲಿ ಸರ್ಕಾರ ರಚಿಸಿದ್ದ JDS - ಕಾಂಗ್ರೆಸ್ ಮೈತ್ರಿ ಈಗ ಮುಂದುವರಿಸಬೇಕೆ ಬೇಡವೇ ಎನ್ನುವುದನ್ನು ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ದೇವೇಗೌಡ-ಸಿದ್ದರಾಮಯ್ಯ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸುತ್ತಾರೆ ಎಂದು ಪುಟ್ಟರಾಜು ಹೇಳಿದರು.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೈತ್ರಿ ಬಗ್ಗೆ ಯಾರ್ಯಾರೋ ಮಾತನಾಡಿ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಮಾಜಿ ಜೆಡಿಎಸ್ ನಾಯಕರಾದ ಚೆಲುರಾಯಸ್ವಾಮಿ, ಜಮೀರ್ ಅಹಮದ್ ಗೆ ಪುಟ್ಟರಾಜು ಟಾಂಗ್ ನೀಡಿದ್ದಾರೆ. 

ಚಲುವರಾಯಸ್ವಾಮಿ ಅವರು  ಸಿದ್ದರಾಮಯ್ಯ ಅಥವಾ ಯಡಿಯೂರಪ್ಪ ಇಬ್ಬರಲ್ಲಿ ಯಾರ ಬೆನ್ನಿಗೆ ನಿಂತಿದ್ದಾರೋ ಗೊತ್ತಿಲ್ಲ. ಕುಮಾರಸ್ವಾಮಿ ಟೋಪಿ ಹಾಕಿದ್ದಾರೆಂದು ಹೇಳುವ ಚಲುವರಾಯಸ್ವಾಮಿಯೇ ಟೋಪಿಹಾಕುವುದನ್ನು ಹೇಳಿಕೊಟ್ಟಿದ್ದು ಎಂದರು.