ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆ ಜು.28ರವರೆಗೆ ರೆಡ್‌ ಅಲರ್ಚ್‌ ಘೋಷಿಸಿದ ಜಿಲ್ಲಾಡಳಿತ ಗುರುವಾರ ಜು.27ರಂದು ಎಲ್ಲ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಆದೇಶಿಸಿದ್ದಾರೆ.

ಬೀದರ್‌ (ಜು.27) :  ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆ ಜು.28ರವರೆಗೆ ರೆಡ್‌ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ ಗುರುವಾರ ಜು.27ರಂದು ಎಲ್ಲ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಆದೇಶಿಸಿದ್ದಾರೆ.

ಬುಧವಾರ ಜಿಟಿ ಜಿಟಿ ಮಳೆಯಿದ್ದು, ಮೋಡ ಕವಿದ ವಾತಾವರಣ ಇದೆ. ಅಲ್ಲದೆ ಗುರುವಾರ ಹಾಗೂ ಶುಕ್ರವಾರ 100ರಿಂದ 130 ಮಿ.ಮೀ ಮಳೆಯಾಗುವ ಮುನ್ಸೂಚನೆ ಇದೆ. ಮನೆಯಿಂದ ಅನವಶ್ಯಕವಾಗಿ ಹೊರಗೆ ಬರದಂತೆ ಎಚ್ಚರಿಕೆ ನೀಡಿದ್ದು, ಜನ, ಜಾನುವಾರು ನದಿ ಪಾತ್ರದಲ್ಲಿ ಓಡಾಡದಂತೆ ಸಲಹೆ ನೀಡಲಾಗಿದೆ.

ಭಾರಿ ಮಳೆ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು ತಾಲೂಕುಮಟ್ಟದ, ಗ್ರಾಪಂ ಪಿಡಿಒಗಳಿಗೆ ಅಗತ್ಯ ಮನ್ನೆಚ್ಚರಿಕೆ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚಿಸಿದ್ದಾರೆ.

ರೆಡ್‌ ಅಲರ್ಟ್ ಇದ್ದರೂ ಕಲಬುರಗಿಯಲ್ಲಿ ಇಡೀ ದಿನ ಮಳೆ ಇಲ್ಲ!

ಶೇ.90ರಷ್ಟುಭರ್ತಿಯಾದ ಕಾರಂಜಾ ಜಲಾಶಯ:

ಒಟ್ಟು 7.691ಟಿಎಂಸಿ ಸಾಮರ್ಥ್ಯದ ಕಾರಂಜಾ ಜಲಾಶಯ 6.80ಟಿಎಂಸಿ ನೀರಿನಿಂಗ ಶೇ. 88.5ರಷ್ಟುಭರ್ತಿಯಾಗಿದೆ. ಜೂ.1ರಿಂದ ಇಲ್ಲಿಯವರೆಗೆ 2.23ಟಿಎಂಸಿ ನೀರು ಸಂಗ್ರಹವಾಗಿದ್ದು, ನಿತ್ಯ 5040 ಕ್ಯುಸೆಕ್‌ ನೀರು ಜಲಾಶಯ ಬಂದು ಸೇರುತ್ತಿದೆ.

ಜಲಾಶಯ ಭರ್ತಿಯಾಗುವ ಮಟ್ಟಕ್ಕೆ ಬರುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಎರಡು ಗೇಟ್‌ಗಳನ್ನು ತೆರೆದು 4350 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಬೀದರ್‌ ರಾಜ್ಯದಲ್ಲಿಯೇ ಅತೀ ಹೆಚ್ಚು ಮಳೆ ಕಂಡ ಜಿಲ್ಲೆ:

ರಾಜ್ಯದಲ್ಲಿಯೇ ಎರಡನೇ ಅತೀ ಹೆಚ್ಚು ಮಳೆಯನ್ನು ಹೊಂದಿರುವ ಬೀದರ್‌ ಜಿಲ್ಲೆಯು ನಿರಂತರ ಮಳೆಯಿಂದ ತತ್ತರಿಸಿದ್ದು, ವಾಡಿಕೆಯಂತೆ ಜೂ1ರಿಂದ ಜು.26ರ ವರೆಗೆ 267 ಮಿ.ಮೀ. ಮಳೆ ಆಗಬೇಕಿದ್ದದ್ದು 337 ಮಿ.ಮೀ ಮಳೆಯಾಗಿದೆ. ಆದ್ದರಿಂದ ಶೇ.26ರಷ್ಟುಹೆಚ್ಚು ಮಳೆಯನ್ನು ಹೊಂದಿ ಮುಂಗಾರು ಬಿತ್ತನೆ ಮಾಡಿರುವ ರೈತರ ಕಂಗಾಲಾಗುವಂತೆ ಮಾಡಿದೆ.

ಮಳೆ ಆಗದೇ ಇದ್ರೂ ಆಗಿದೆ ಎಂದು ಸಚಿವರಿಗೆ ತಪ್ಪು ಮಾಹಿತಿ ನೀಡಿದ ಕೃಷಿ ಅಧಿಕಾರಿಗಳು

ನೀರಿನಲ್ಲಿ ಕೊಚ್ಚಿ ಹೋದ ಯುವಕ, ಸ್ಥಳಕ್ಕೆ ಡಿಸಿ, ಎಸ್‌ಪಿ ಭೇಟಿ:

ಬಸವಕಲ್ಯಾಣ ತಾಲೂಕಿನ ಧನ್ನೂರ್‌ (ಆರ್‌) ಗ್ರಾಮದ ಯುವಕೋರ್ವ ಸೇತುವೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದರ ಹಿನ್ನೆಲೆ ಸ್ಥಳಕ್ಕೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಭೇಟಿ ನೀಡಿ ಪರಿಶೀಲಿಸಿದರು.