ಮಳೆ ಆಗದೇ ಇದ್ರೂ ಆಗಿದೆ ಎಂದು ಸಚಿವರಿಗೆ ತಪ್ಪು ಮಾಹಿತಿ ನೀಡಿದ ಕೃಷಿ ಅಧಿಕಾರಿಗಳು!

ಸರ್ಕಾರದ ಭಾಗವಾಗಿರುವ ಕೃಷಿ ಇಲಾಖೆಯ ಅಧಿಕಾರಿಗಳು ನೀಡಿರುವ ಮಳೆಯ ಮಾಹಿತಿ ಕುರಿತು ಅನುಮಾನ ಹಾಗೂ ಅಪನಂಬಿಕೆ ವ್ಯಕ್ತಪಡಿಸಿದ ಶಾಸಕರುಗಳು ಮಳೆ ಆಗದಿದ್ದರು ಸಹ ಮಳೆಯ ಮಾಪನ ಹೇಗೆ ದಾಖಲಾಗುತ್ತದೆ ಎಂಬ ಕುರಿತು ನಡೆಸಿದ ಚರ್ಚೆ ಸ್ವಾರಸ್ಯಕರವಾಗಿ ನಡೆಯಿತು.

Agriculture officials gave wrong information abt rains to minister rb timmapur at bagalkote rav

ಬಾಗಲಕೋಟೆ (ಜು.25) ಸರ್ಕಾರದ ಭಾಗವಾಗಿರುವ ಕೃಷಿ ಇಲಾಖೆಯ ಅಧಿಕಾರಿಗಳು ನೀಡಿರುವ ಮಳೆಯ ಮಾಹಿತಿ ಕುರಿತು ಅನುಮಾನ ಹಾಗೂ ಅಪನಂಬಿಕೆ ವ್ಯಕ್ತಪಡಿಸಿದ ಶಾಸಕರುಗಳು ಮಳೆ ಆಗದಿದ್ದರು ಸಹ ಮಳೆಯ ಮಾಪನ ಹೇಗೆ ದಾಖಲಾಗುತ್ತದೆ ಎಂಬ ಕುರಿತು ನಡೆಸಿದ ಚರ್ಚೆ ಸ್ವಾರಸ್ಯಕರವಾಗಿ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪ್ರಥಮ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ನೀಡಿದ ಮಳೆಯ ಮಾಹಿತಿ ಶಾಸಕರಾದ ಸಿದ್ದು ಸವದಿ, ಜೆ.ಟಿ.ಪಾಟೀಲ, ಹನುಮಂತ ನಿರಾಣಿ ಸೇರಿದಂತೆ ಹಲವರಿಗೆ ವಿಶ್ವಾಸವೇ ತರಲಿಲ್ಲ. ಬದಲಾಗಿ ಮಳೆ ಮಾಪನ ಕೇಂದ್ರದ ಮೇಲೆ ಸಂಶಯ ವ್ಯಕ್ತಪಡಿಸಿದರು.

ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ 213 ಕಡೆ ಮಳೆ ಮಾಪನ ಕೇಂದ್ರವನ್ನು ಅಳವಡಿಸಲಾಗಿದೆ. ಕಳೆದ ಎರಡು ತಿಂಗಳಿನ ಮಳೆಯ ಪ್ರಮಾಣ ವಿವರಿಸಲು ಮುಂದಾದಾಗ ವಾಡಿಕೆ ಮಳೆಯೇ ಆಗಿಲ್ಲ. ಹೀಗಿದ್ದರು ಸಹ ಮಳೆಯ ಕುರಿತು ನೀಡಿರುವ ಮಾಹಿತಿ ಸುಳ್ಳಾಗಿದೆ. ಇದನ್ನು ಗಮನಿಸಿದರೆ ಮಳೆಯ ಮಾಪನ ಕೇಂದ್ರದ ಸುಸ್ಥಿತಿಯ ಬಗ್ಗೆ ಅನುಮಾನ ಎಂದು ಶಾಸಕರುಗಳು ಹೇಳಿದಾಗ ಸಚಿವರು ಮಧ್ಯೆ ಪ್ರವೇಶಿಸಬೇಕಾಯಿತು.

ಬಿಜೆಪಿಗರಿಗೆ ಅಧಿಕಾರದ ಹಪಾಹಪಿ ಜಾಸ್ತಿ; ಅಡ್ಡದಾರಿ ಹಿಡಿದಾದ್ರೂ ಬರ್ತಾರೆ: ಸಚಿವ ತಿಮ್ಮಾಪುರ ಕಿಡಿ

ಬರಗಾಲ ಘೋಷಣೆಗೆ ಸಿದ್ಧತೆ ಮಾಡಿಕೊಳ್ಳಿ:

ಮೇ-ಜೂನ್‌ನಲ್ಲಿ ಮಳೆಯೆ ಆಗಿಲ್ಲ. ಜೊತೆಗೆ ಬಿತ್ತಿದ ಬಿತ್ತನೆ ಒಣಗಿದೆ. ಮುಂಗಾರು ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ ಎನ್ನುತ್ತಾರೆ. ಒಂದು ಹಳ್ಳ ತುಂಬಿಲ್ಲ, ಕೆರೆಗೆ ನೀರು ಬಂದಿಲ್ಲ ಇದು ಹೇಗೆ ಮಳೆ ಹೆಚ್ಚಾಗಿದೆ ಎಂದು ಶಾಸಕ ಮೇಟಿ ಹಾಗೂ ಸವದಿ ಅವರು ಪಟ್ಟು ಹಿಡಿದಾಗ ಕಳೆದ ನಾಲ್ಕು ದಿನಗಳಲ್ಲಿ ಉತ್ತಮ ಮಳೆಯಾಗಿದೆ ಎಂದು ಕೃಷಿ ಅಧಿಕಾರಿ ನೀಡಿದ ಸಮಜಾಯಿಸಿಗೂ ಸಹ ಸಮಾಧಾನವಾಗದ ಶಾಸಕರು ಮುಂಗಾರು ವಿಫಲವಾಗಿದೆ. ಬರಗಾಲ ಘೋಷಣೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರ ಹಾಗೂ ಅಧಿಕಾರಿಗಳ ಮಾತು ಆಲಿಸುತ್ತಾ ಕುಳಿತಿದ್ದ ಸಚಿವ ತಿಮ್ಮಾಪೂರ ಅವರು ಅಂತಿಮವಾಗಿ ಜಿಲ್ಲೆಯ ಎಲ್ಲ ಶಾಸಕರಿಗೆ ಪ್ರತಿನಿತ್ಯ ಅವರ ಮೊಬೈಲ್‌ಗೆ ಮಳೆ ಮಾಹಿತಿ ನೀಡಲು ಆದೇಶಿಸಿದರು.

ಕಠಿಣ ಕ್ರಮದ ಎಚ್ಚರಿಕೆ:

ಕಳಪೆ ಬೀಜ ಹಾಗೂ ಗೊಬ್ಬರ ಮತ್ತು ಕ್ರಿಮಿನಾಶಕ ಔಷಧಗಳ ಮಾರಾಟ ಮಾಡುವ ವ್ಯಾಪಾರಿಗಳ ವಿರುದ್ಧ ಕ್ರಮಕೈಗೊಂಡ ಕುರಿತು ಸಭೆಯಲ್ಲಿ ಶಾಸಕ ಜೆ.ಟಿ ಪಾಟೀಲ ಪ್ರಸ್ತಾಪಿಸಿದಾಗ ಅವರಿಗೆ ಹಲವು ಶಾಸಕರು ಧ್ವನಿಯಾದರು.

ಕಳೆದ ಎರಡು ವರ್ಷಗಳಲ್ಲಿ 42 ವ್ಯಾಪಾರಿಗಳ ಮೇಲೆ ಕ್ರಮಕೈಗೊಳ್ಳಲಾಗಿದೆ. 32 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಕೃಷಿ ಅಧಿಕಾರಿ ನೀಡಿದ ಮಾಹಿತಿಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು ಯಾರಿಗೆ ಯಾವ ಶಿಕ್ಷೆಯಾಗಿದೆ ಎಂದು ಪ್ರಶ್ನಿಸಿದರು. ಸಚಿವರಾದ ತಿಮ್ಮಾಪೂರ ಮಧ್ಯಪ್ರವೇಶಿಸಿ ಕಳಪೆ ಬೀಜ ಹಾಗೂ ಕ್ರಿಮಿನಾಶಕ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.

ಸದ್ದು ಮಾಡಿದ ಶೌಚಾಲಯಗಳ ಅಗತ್ಯತೆ:

ಪದವಿ ಹಂತದ ಕಾಲೇಜುಗಳಲ್ಲಿಯೇ ಶೌಚಾಲಯಗಳಿಲ್ಲ. ಇದರಿಂದ ಮಹಿಳೆಯರ ಶಿಕ್ಷಣದ ಮೇಲೆ ಮತ್ತು ಮಾನಸಿಕವಾಗಿ ಬಹಳಷ್ಟುತೊಂದರೆಯಾಗುತ್ತಿದೆ ಎಂದು ಉದಾಹರಣೆ ಸಮೇತ ಸಭೆಯ ಗಮನಕ್ಕೆ ತಂದ ಹುನಗುಂದದ ಶಾಸಕ ವಿಜಯಾನಂದ ಕಾಶಪ್ಪನವರ ಶೌಚಾಲಯಗಳ ಅಗತ್ಯತೆ ಕುರಿತು ಮಾತನಾಡಿದರು. ಶಾಸಕರ ಮಾತಿಗೆ ಮತ್ತಷ್ಟುಶಾಸಕರು ಬೆಂಬಲ ವ್ಯಕ್ತಪಡಿಸಿ ಜಿಲ್ಲೆಯಲ್ಲಿ ಶಾಲೆ ಕಾಲೇಜುಗಳಲ್ಲಿನ ಶೌಚಾಲಯಗಳ ಕೊರತೆ ಮತ್ತು ಶೌಚಾಲಗಳಿಲ್ಲದೆ ಮಕ್ಕಳು ಅನುಭವಿಸುತ್ತಿರುವ ತೊಂದರೆ ವಿವರಿಸಿದರು.

ಸಮಸ್ಯೆಯ ಗಂಭೀರತೆ ಅರ್ಥಮಾಡಿಕೊಂಡ ಸಚಿವ ಆರ್‌.ಬಿ.ತಿಮ್ಮಾಪೂರ ಬರುವ ಆರು ತಿಂಗಳಲ್ಲಿ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಲು ಸೂಚಿಸಿದರಲ್ಲದೆ ನರೇಗಾ ಯೋಜನೆ ಬಳಸಿಕೊಂಡು ಶೌಚಾಲಯಗಳ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಆದೇಶಿಸಿದರು.

ಕೊಡಗಿನ ಮಳೆಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಬೋಸರಾಜು ಭೇಟಿ

ಶಿಕ್ಷಕರ ವಿರುದ್ಧ ಕ್ರಮಕ್ಕೆ ಸೂಚನೆ:

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕೆಲವು ಶಿಕ್ಷಕರು ನೇರವಾಗಿ ರಾಜಕಾರಣದಲ್ಲಿ ಹಾಗೂ ಚುನಾವಣೆಯಲ್ಲಿ ಭಾಗಿಯಾಗಿದ್ದಾರೆ. ಅಂಥಹವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರೂ ಡಿಡಿಪಿಐ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಕಾಶಪ್ಪನವರ ಸಂಬಂಧಿÜಸಿದ ಅಧಿಕಾರಿಗಳಿಂದ ಸಮಜಾಯಿಸಿ ಕೇಳಿದರು. ಈ ಸಂದರ್ಭದಲ್ಲಿ ಅಧಿಾರಿ ನೀಡಿದ ಉತ್ತರಕ್ಕೆ ತೃಪ್ತರಾಗದ ಶಾಸಕರು ಶಿಸ್ತು ಕ್ರಮಕ್ಕೆ ಒತ್ತಾಯಿಸಿದಾಗ ಸಚಿವರು ಸಹ ಕ್ರಮಕೈಗೊಳ್ಳಲು ಸೂಚಿಸಿದರು.

Latest Videos
Follow Us:
Download App:
  • android
  • ios