Asianet Suvarna News Asianet Suvarna News

ವಿಜಯಪುರ ಜಿಲ್ಲೆಯಲ್ಲಿ ಮೇಘಸ್ಫೋಟ: ಹಳ್ಳದಂತಾದ ರಸ್ತೆಗಳು, ಜನರು ಕಂಗಾಲು.!

ಮುದ್ದೇಬಿಹಾಳ ತಾಲೂಕಿನಲ್ಲಿ ಮೇಘಸ್ಫೋಟಗೊಂಡಿದ್ದು, ಜನರು ಪರದಾಡಿದ ಘಟನೆ ನಡೆದಿವೆ.

Heavy Rain in Vijayapura District grg
Author
Bengaluru, First Published Aug 3, 2022, 10:34 PM IST

ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌

ವಿಜಯಪುರ(ಆ.03):  ಕಳೆದ ಎರಡು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು, ಹಲವೆಡೆ ಉತ್ತಮ ಮಳೆಯಾಗಿದ್ದರೆ, ಕೆಲವೆಡೆ ಭಾರಿ ಮಳೆಯಾಗಿದೆ. ಅದ್ರಲ್ಲೂ ಮುದ್ದೇಬಿಹಾಳ ತಾಲೂಕಿನಲ್ಲಿ ಮೇಘಸ್ಫೋಟಗೊಂಡಿದ್ದು, ಜನರು ಪರದಾಡಿದ ಘಟನೆ ನಡೆದಿವೆ. ಇತ್ತ ದೇವರಹಿಪ್ಪರಗಿ ವ್ಯಾಪ್ತಿಯಲ್ಲಿ ಸಿಡಿಲಿಗೆ ಮಹಿಳೆ ಬಲಿಯಾಗಿದ್ದಾಳೆ. ಜಿಲ್ಲೆಯಾಧ್ಯಂತ ಮಳೆಯಾಗಿದೆ. ಆದ್ರೆ ಮುದ್ದೇಬಿಹಾಳ ಪಟ್ಟಣ ಹಾಗೂ ನಾಲ್ವತವಾಡ ಪಟ್ಟಣದಲ್ಲಿ ಮೇಘಸ್ಪೋಟವಾಗಿದೆ. ಮಧ್ಯಾಹ್ನದ ವೇಳೆ ಸುರಿದ ಭಾರೀ ಮಳೆ ಜನರನ್ನ ಕಂಗೆಡುವಂತೆ ಮಾಡಿತು. ಮುದ್ದೇಬಿಹಾಳ ಪಟ್ಟಣದ ಅಂಗಡಿ ಮುಂಗಟ್ಟುಗಳಿಗೆ ಮಳೆ ನೀರು ನುಗ್ಗಿ ಜನರು ಪರದಾಡುವಂತಾಯ್ತ. ರಸ್ತೆ ಬದಿಯಲ್ಲಿ ಹಳ್ಳದಂತೆ ಮಳೆ ನೀರು ಹರಿದಿದೆ. ಅದ್ರಲ್ಲು ಮುದ್ದೇಬಿಹಾಳ ಪಟ್ಟಣ ಹೊರವಲಯದಲ್ಲಿ ರಸ್ತೆಯಲ್ಲಿ ಹೊರಟಿದ್ದ ಗೂಡ್ಸ್‌ ವಾಹನವೇ ಮಳೆಯಲ್ಲಿ ಅರ್ಧದಷ್ಟು ಮುಳುಗಿ ವಾಹನ ಸವಾರ ಪರದಾಟ ನಡೆಸಿದ ಘಟನೆ ನಡೆದಿದೆ.

ಸತತ 4 ಗಂಟೆ ಸುರಿದ ಮಳೆ

ಮುದ್ದೇಬಿಹಾಳ ಪಟ್ಟಣ ಹಾಗೂ ನಾಲ್ವವತವಾಡದಲ್ಲಿ ಸತತ 4 ಗಂಟೆಗಳ ಕಾಲ ಮಳೆ ಸುರಿದಿದೆ ಎನ್ನಲಾಗಿದೆ. ಸತತವಾಗಿ ರಭಸದಿಂದ ಸುರಿದ ಮಳೆಯಿಂದಾಗಿ ರಸ್ತೆಗಳೆಲ್ಲ ಹಳ್ಳದಂತೆ ಭಾಸವಾದವು. ಇನ್ನು ರಸ್ತೆ ಬದಿಗೆ ನಿಂತಿದ್ದ ಬೈಕ್‌, ಇತರೆ ವಾಹನಗಳು ಮಳೆ ನೀರಲ್ಲಿ ಮುಳುಗಿವೆ. ಅಂಗಡಿ ಮುಂಗಟ್ಟುಗಳಿಗೆ ಮಳೆ ನೀರು ನುಗ್ಗಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ದಿಢೀರ್‌ ಮೇಘಸ್ಪೋಟದಿಂದ ಜನರು ಪರಾಟ ನಡೆಸಿದ್ದಾರೆ.

Vijayapura: ಡೋಣಿ ನದಿಯಲ್ಲಿ ಭಾರಿ ಪ್ರವಾಹ: ಸೇತುವೆ ಮುಳುಗಡೆಯಾಗಿ ಪ್ರಯಾಣಿಕರ ಪರದಾಟ

ಕ್ಲಿನಿಕ್‌ಗೆ ಹೊಕ್ ಮಳೆ ನೀರು, ರೋಗಿಗಳ ಪರದಾಟ

ನಾಲ್ವತವಾಡ ಪಟ್ಟಣದಾಧ್ಯಂತ ಧಾರಾಕಾರ ಮಳೆಯಾಗಿದೆ. ಸತತವಾಗಿ ಸುರಿದ ಮಳೆಯಿಂದಾಗಿ ಪಟ್ಟಣದಲ್ಲಿ ಕೆಲ ಪ್ರದೇಶಗಳು ಕೆರೆಯಂತೆ ಕಂಡು ಬಂದವು. ಇನ್ನು ಪಟ್ಟಣದ ಡಾ. ಗಂಗನಗೌಡ ಅವರಿಗೆ ಸೇರಿದ ಅಶ್ವೀನಿ ಕ್ಲೀನಿಕ್‌ ಗೆ ಮಳೆ ನೀರು ಹೊಕ್ಕು ಕ್ಲಿನಿಕ್‌ ಬಂದ ರೋಗಿಗಳು ನೀರಲ್ಲೆ ಕುಳಿತ ಘಟನೆಯು ನಡೆದಿದೆ. ಮಳೆಯಿಂದಾಗಿ ರೋಗಿಗಳ ಪರದಾಡಿದ್ದಾರೆ.

ಶಾಸಕ ಎ ಎಸ್‌ ಪಾಟೀಲ್‌ ನಡಹಳ್ಳಿ ದೌಡು

ಮುದ್ದೇಬಿಹಾಳ ತಾಲೂಕಿನಲ್ಲಿ ಮೇಘಸ್ಪೋಟದಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಯ್ತು. ಮಳೆಯಲ್ಲೆ ಮನೆಯಿಂದ ದೌಡಾಯಿಸಿದ ಮುದ್ದೇಬಿಹಾಳ ಶಾಸಕ ಎ ಎಸ್‌ ಪಾಟೀಲ್‌ ನಡಹಳ್ಳಿ ಜನರಿಗೆ ಸ್ಪಂದಿಸಿದರು. ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿದ ಹಾನಿಯ ಬಗ್ಗೆ ಮಾಹಿತಿಗಳನ್ನ ಪಡೆದುಕೊಂಡರು. ಏಕಾಏಕಿ ನೀರು ನುಗ್ಗಿದ್ದರಿಂದ ಪಟ್ಟಣದ ಹಲವು ಬಡಾವಣೆಗಳಲ್ಲಿ ಜನರು ಕಂಗಾಲಾಗಿದ್ದರು. ಅಲ್ಲಿಯು ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ನೆರವಿನ ಭರವಸೆ ನೀಡಿದರು.

ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ ನಡಹಳ್ಳಿ

ಇನ್ನು ಅಧಿಕಾರಿಗಳಿಗು ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವಂತೆ ನಡಹಳ್ಳಿ ಸೂಚನೆ ನೀಡಿದ್ದಾರೆ. ಮುದ್ದೇಬಿಹಾಳ ಪಟ್ಟಣ, ನಾಲ್ವತವಾಡ ಸೇರಿದಂತೆ ಮುದ್ದೇಬಿಹಾಳ ಕ್ಷೇತ್ರದ ಹಲವೆಡೆ ಉಂಟಾದ ಮಳೆ ಹಾನಿಗಳ ಬಗ್ಗೆ ಮಾಹಿತಿ ಪಡೆದು ತಕ್ಷಣವೇ ಜನರ ನೆರವಿಗೆ ಹೋಗಬೇಕೆಂದು  ಶಾಸಕ ನಡಹಳ್ಳಿ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ನನಸಾಗಲಿದೆ ವಿಜಯಪುರ ಜಿಲ್ಲೆಯ ಜನರ ವಿಮಾನ ನಿಲ್ದಾಣದ ಕನಸು

ಸಿಡಿಲು ಬಡಿದು ಮಹಿಳೆ, ಜಾನುವಾರು ಬಲಿ

ಒಂದು ಕಡೆಗೆ ಮಳೆ ಅಬ್ಬರಿಸಿದ್ರೆ, ಇನ್ನೊಂದೆಡೆ ಸಿಡಿಲಿಗೆ ಮಹಿಳೆ ಬಲಿಯಾಗಿದ್ದಾಳೆ. ದೇವರಹಿಪ್ಪರಗಿ ತಾಲೂಕಿನ ಹುಣಸ್ಯಾಳ ಗ್ರಾಮದ ಹೊರವಲಯದಲ್ಲಿ 55 ವರ್ಷದ ಜೈನೂಬಿ ಸಿಪಾಯಿ ಎನ್ನುವ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾಳೆ. ಜೊತೆಗೆ ಒಂದು ಎಮ್ಮೆಯು ಸಾವನ್ನಪ್ಪಿದೆ. ಜಮೀನಿನಲ್ಲಿ ಎಮ್ಮೆ ಮೇಯಿಸುತ್ತಿದ್ದ ವೇಳೆ ಮಳೆ ಶುರುವಾಗಿದೆ. ಮಳೆಯಿಂದ ತಪ್ಪಿಸಿಕೊಳ್ಳಲು ಅಲ್ಲೆ ಇದ್ದ ಮರದ ಆಸರೆ ಪಡೆದಿದ್ದಾಳೆ. ಈ ವೇಳೆ ಸಿಡಿಲು ಬಡಿದು ಜೈನೂಬಿ ಸಾವನ್ನಪ್ಪಿದ್ದಾಳೆ. ಎಮ್ಮೆಯು ಸ್ಥಳದಲ್ಲೆ ಸಾವನ್ನಪ್ಪಿದೆ. ಕಲಕೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯ ಹಲವೆಡೆ ಆಸ್ತಿಪಾಸ್ತಿ ಹಾನಿ

ಈ ಮಧ್ಯೆ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಯಿಂದಾಗಿ ಇಂಡಿ, ಬಬಲೇಶ್ವರ ಮತ್ತು ವಿಜಯಪುರ ತಾಲೂಕುಗಳಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಇಂಡಿ ತಾಲೂಕಿನ ಬಳ್ಳೋಳ್ಳಿ ಗ್ರಾಮದಲ್ಲಿ 3 ಪಕ್ಕಾ ಮನೆಗಳು ಭಾಗಷಃ ಕುಸಿದಿವೆ. ಬಬಲೇಶ್ವರ ತಾಲೂಕಿನ ಎರಡು ಕಚ್ಚಾ ಮನೆಗಳು ಭಾಗಷಃ ಕುಸಿದಿವೆ. ಅಲ್ಲದೇ, ವಿಜಯಪುರ ತಾಲೂಕಿನಲ್ಲಿ ಮದಭಾವಿ ತಾಂಡಾದಲ್ಲಿ ಒಂದು ಮನೆಗೆ ಹಾನಿಯಾಗಿರುವುದು ಪ್ರಾಥಮಿಕ ವರದಿಯಲ್ಲಿ ಮಾಹಿತಿ ನೀಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾಹಿತಿ ನೀಡಿದ್ದಾರೆ.

ಇನ್ನು ವಿಜಯಪುರ ಜಿಲ್ಲೆಯ ನಾನಾ ಕಡೆ ಎಷ್ಟೆಷ್ಟು ಮಳೆ ಸುರಿದಿದೆ ಅನ್ನೋದರ ವಿವರ ಇಲ್ಲಿದೆ ನೋಡಿ.. !

1) ವಿಜಯಪುರ ತಾಲೂಕು
ವಿಜಯಪುರ ನಗರ- 3.60 ಮಿಮಿ
ನಾಗಠಾಣ- 10.20 ಮಿಮಿ
ಭೂತ್ನಾಳ- 16.20 ಮಿಮಿ
ಹಿಟ್ನಳ್ಳಿ- 16.80 ಮಿಮಿ
ಕುಮಟಗಿ- 8.60 ಮಿಮಿ
2) ಬಬಲೇಶ್ವರ ತಾಲೂಕು
ಮಮದಾಪುರ-  8.80 ಮಿಮಿ
ಬಬಲೇಶ್ವರ-    3.60 ಮಿಮಿ
3) ತಿಕೋಟಾ ತಾಲೂಕು
ತಿಕೋಟಾ- 21.80 ಮಿಮಿ
ಕನ್ನೂರ- 8.10 ಮಿಮಿ
4) ಬಸವನ ಬಾಗೇವಾಡಿ ತಾಲೂಕು
ಬಸವನ ಬಾಗೇವಾಡಿ- 29.70 ಮಿಮಿ
ಮನಗೂಳಿ- 28.30 ಮಿಮಿ
ಹೂವಿನ ಹಿಪ್ಪರಗಿ- 12.80 ಮಿಮಿ
5) ನಿಡಗುಂದಿ ತಾಲೂಕು
ಆಲಮಟ್ಟಿ- 12 ಮಿಮಿ
ಅರೆಶಂಕರ- 9.50 ಮಿಮಿ
6) ಕೊಲ್ಹಾರ ತಾಲೂಕು
ಕೊಲ್ಹಾರ- 00 ಮಿಮಿ
ಮಟ್ಟಿಹಾಳ- 13 ಮಿಮಿ
7) ಮುದ್ದೇಬಿಹಾಳ ತಾಲೂಕು
ಮುದ್ದೇಬಿಹಾಳ- 8.40 ಮಿಮಿ
ನಾಲತವಾಡ- 17.30 ಮಿಮಿ
8) ತಾಳಿಕೋಟೆ ತಾಲೂಕು
ತಾಳಿಕೋಟೆ- 6.40 ಮಿಮಿ
ಡವಳಗಿ- 6 ಮಿಮಿ
9) ಇಂಡಿ ತಾಲೂಕು
ಇಂಡಿ- 49.8 ಮಿಮಿ
ನಾದ ಬಿಕೆ- 1.40 ಮಿಮಿ
ಅಗರಖೇಡ- 39.20 ಮಿಮಿ
ಹೊರ್ತಿ- 20.40 ಮಿಮಿ
ಹಲಸಂಗಿ- 84 ಮಿಮಿ
10) ಚಡಚಣ ತಾಲೂಕು
ಚಡಚಣ- 6 ಮಿಮಿ
ಝಳಕಿ- 37.40 ಮಿಮಿ
11) ಸಿಂದಗಿ ತಾಲೂಕು
ಆಲಮೇಲ- 3.80 ಮಿಮಿ
ರಾಮನಳ್ಳಿ- 8.2 ಮಿಮಿ
12) ದೇವರ ಹಿಪ್ಪರಗಿ ತಾಲೂಕು
ದೇವರ ಹಿಪ್ಪರಗಿ- 7 ಮಿಮಿ
ಕಡ್ಲೆವಾಡ ಪಿಸಿಎಚ್- 10 ಮಿಮಿ
 

Follow Us:
Download App:
  • android
  • ios