Asianet Suvarna News Asianet Suvarna News

ರಾಣಿಬೆನ್ನೂರಿನಲ್ಲಿ ಧಾರಾಕಾರ ಮಳೆ: ಸಿಡಿಲು ಬಡಿದು ವ್ಯಕ್ತಿ ಸಾವು

ಜಿಲ್ಲಾದ್ಯಂತ ಗುಡುಗು ಸಹಿತ ತುಂತುರು ಮಳೆ, ಸಿಡಿಲು ಬಡಿದು ವ್ಯಕ್ತಿ ಸಾವು| ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕಬೂದಿಹಾಳ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಸಾವು| ರಾಣಿಬೆನ್ನೂರು ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ  ಒಂದು ತಾಸಿಗೂ ಹೆಚ್ಚು ಕಾಲ ಭರ್ಜರಿ ಮಳೆ| ಏಕಾಏಕಿಯಾಗಿ ಮಳೆ ಸುರಿದಿದ್ದರಿಂದ ಜನಸಂಚಾರಕ್ಕೆ ತೊಂದರೆಯಾಯಿತು| 

Heavy Rain in Ranibennur: One Person Death
Author
Bengaluru, First Published Oct 2, 2019, 8:34 AM IST

ಹಾವೇರಿ(ಅ .2): ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕಬೂದಿಹಾಳ ಗ್ರಾಮದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿದ್ದು, ರಾಣಿಬೆನ್ನೂರು ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಂಗಳವಾರ ಒಂದು ತಾಸಿಗೂ ಹೆಚ್ಚು ಕಾಲ ಭರ್ಜರಿ ಮಳೆಯಾಗಿದೆ.

ಮಧ್ಯಾಹ್ನದ ತನಕವೂ ಜಿಲ್ಲೆಯಲ್ಲಿ ಬಿರು ಬಿಸಿಲು ಮನೆ ಮಾಡಿತ್ತಾದರೂ ಆ ಬಳಿಕ ಮೋಡ ಕವಿದು ಮಳೆಯಾಗಿದೆ. ರಾಣಿಬೆನ್ನೂರು ಪಟ್ಟಣದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅರ್ಧ ಗಂಟೆ ಕಾಲ ಭರ್ಜರಿ ಮಳೆ ಸುರಿದಿದೆ. ನಂತರ ಬಿಡುವು ನೀಡಿ ಸಂಜೆ ಮತ್ತೆ ಒಂದು ಗಂಟೆ ಕಾಲ ಮಳೆ ಸುರಿದಿದೆ. ಏಕಾಏಕಿಯಾಗಿ ಮಳೆ ಸುರಿದಿದ್ದರಿಂದ ಜನಸಂಚಾರಕ್ಕೆ ತೊಂದರೆಯಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಜಿಲ್ಲಾದ್ಯಂತ ಗುಡುಗು, ಮಿಂಚಿನ ಆರ್ಭಟ ಜೋರಾಗಿತ್ತು. ಹಿರೇಕೆರೂರು ತಾಲೂಕಿನ ಚಿಕ್ಕಬೂದಿಹಾಳ ಗ್ರಾಮದ ಗದಿಗೆಯ್ಯ ಹಿರೇಮಠ (62) ಎಂಬುವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಜಾನುವಾರುಗಳನ್ನು ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಅವರು ಮೃತಪಟ್ಟಿದ್ದಾರೆ. ಹಾವೇರಿ, ಬ್ಯಾಡಗಿ, ಹಾನಗಲ್ಲ ಭಾಗದಲ್ಲಿ ತುಂತುರು ಮಳೆಯಾಗಿದೆ. ಕೆಲವು ಭಾಗಗಳಲ್ಲಿ ಗುಡುಗು, ಮಿಂಚಿಗಷ್ಟೇ ಸೀಮಿತವಾಗಿತ್ತು.
 

Follow Us:
Download App:
  • android
  • ios