ಕೋಲಾರ: ಭಾರೀ ಮಳೆ, ಗಾಳಿಗೆ ನೆಲಕಚ್ಚಿದ ಮಾವು, ತರಕಾರಿ!
ಜಿಲ್ಲೆಯಾದ್ಯಂತ ಮಂಗಳವಾರ ಸಂಜೆ 3 ಗಂಟೆಯಿಂದ ಸತತವಾಗಿ ಗುಡುಗು ಸಮೇತ ಮಳೆ ಆಭರ್ಟದಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಮನೆ ಬಿಟ್ಟು ಹೊರ ಬರದಂತಾಯಿತು.
ಕೋಲಾರ (ಮೇ.30) : ಜಿಲ್ಲೆಯಾದ್ಯಂತ ಮಂಗಳವಾರ ಸಂಜೆ 3 ಗಂಟೆಯಿಂದ ಸತತವಾಗಿ ಗುಡುಗು ಸಮೇತ ಮಳೆ ಆಭರ್ಟದಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಮನೆ ಬಿಟ್ಟು ಹೊರ ಬರದಂತಾಯಿತು.
ಪ್ರಾರಂಭದಲ್ಲಿ ಮೋಡಕವಿದ ವಾತಾವರಣ ಕಂಡು ಬಂತು. ಬಳಿಕ ಸುಮಾರು 3 ಗಂಟೆ ನಂತರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಆರ್ಭಟಿಸಿತು. 4 ಗಂಟೆ ನಂತರ ಕೋಲಾರ ನಗರದಲ್ಲಿ ಎಡಬಿಡದೆ ಮಳೆ ಸುರಿಯಲಾರಂಭಿಸಿತು. ಈ ವರ್ಷ ಮೊದಲ ದಿನ ಶಾಲೆಗಳಿಗೆ ತೆರಳಿದ್ದ ಮಕ್ಕಳು ಮನೆಗಳಿಗೆ ವಾಪಸ್ ಆಗಲು ಪರದಾಡಬೇಕಾಯಿತು. ರಾತ್ರಿ 7 ಗಂಟೆ ನಂತರವೂ ನಗರದಲ್ಲಿ ಮಳೆ ಮುಂದುವರೆದಿತ್ತು. ಬಿರುಗಾಳಿ, ಗುಡುಗು, ಮಿಂಚು ಆರ್ಭಟಗಳು ಹೆಚ್ಚಾದ ಕಾರಣ ಸಾರ್ವಜನಿಕರು ಬೀದಿಗೆ ಬರಲಿಲ್ಲ, ನಗರದಿಂದ ಸಂಜೆ ಊರುಗಳಿಗೆ ತೆರಳಬೆಕಾದವರು ಪರದಾಡುವಂತಾಯಿತು.
ರಾಜ್ಯದಲ್ಲಿದೆ ಏಷ್ಯಾದ ಅತಿದೊಡ್ಡ ಮಾವು ಮಾರುಕಟ್ಟೆ, ಆದರೆ ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲ!
ಮಾವು ಫಸಲಿಗೆ ಧಕ್ಕೆ
ಇನ್ನೇನು ಮಾರುಕಟ್ಟೆಪ್ರವೇಶ ಮಾಡಬೆಕಾಗಿದ್ದ ಮಾವು ಫಸಲು ಮತ್ತೆ ಮಣ್ಣು ಪಲಾಗಿದೆ. ಕಳೆದ ವಾರವಷ್ಟೇ ಮಳೆಯಿಂದ ನೆಲಕಚ್ಚಿದ್ದ ಮಾವು ಬೆಳೆಗಾರರು ಚೇತರಿಸಿಕೊಳ್ಳುವ ಮುನ್ನವೆ ಮಂಗಳವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಮಾರುಕಟ್ಟೆಗೆ ಪ್ರವೇಶ ಮಾಡಬೇಕಾಗಿರುವ ಮಾವು ನೆಲಕಚ್ಚುವಂತೆ ಆಗಿದೆ. ಮಾವಿನ ಋುತು ಆಗಿರುವುದರಿಂದ ತೋಟಗಳಿಂದ ಕಾಯಿಯನ್ನು ಕಿತ್ತು ಮಾರುಕಟ್ಟೆಗೆ ತರಲು ಅವ್ಯವಸ್ಥೆ ಉಂಟಾಗಿದೆ. ಪ್ರತಿ ದಿನವಸದಂತೆ ಮಂಗಳವಾರವೂ ಸಹ ತೋಟಗಳಲ್ಲಿ ಮಾವನ್ನು ಕಿತ್ತು ಸಂಜೆ ಮಾರುಕಟ್ಟೆಗೆ ಬರಬೇಕಾಗಿತ್ತು. ಸಂಜೆ ವೇಳೆಗೆ ಮಳೆ ಎಡೆಬಿಡದೆ ಸುರಿದ ಕಾರಣ ಕಿತ್ತ ಮಾವನ್ನು ಮಾರುಕಟ್ಟೆಗೆ ತರಲು ಸಾಧ್ಯವಾಗಲಿಲ್ಲ.
ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಳೆದ ವಾರವೆ ಟೊಮೆಟೋ ಮತ್ತು ತರಕಾರಿ ನೆಲಕಚ್ಚಿತ್ತು. ಮಂಗಳವಾರ ಸಂಜೆ ಸುರಿದ ಮಳೆ ಮತ್ತು ಬಿರುಗಾಳಿಯಿಂದ ಟಮೆಟೋ ಸಸಿಗಳು ನೆಲಕಚ್ಚುವಂತಾಗಿದೆ, ಟೊಮೆಟೋಗಾಗಿ ಹೂಳಲಾಗಿದ್ದ ಊರುಗೋಲುಗಳು ಮುರಿದು ಬಿದ್ದಿದ್ದು ಬೆಳೆಗೆ ಅಳವಡಿಸಿದ್ದ ಮಲ್ಚಿಂಗ್ ಪೇಪರ್ ಸಹಾ ಹರಿದು ಹೋಗಿ ರೈತರಿಗೆ ನಷ್ಟವಾಗಿದೆ.
ತಗ್ಗು ಪ್ರದೇÍಕ್ಕೆ ನುಗ್ಗಿದ ನೀರು
ಮಂಗಳವಾರ ಸಂಜೆ ಆರಂಭವಾದ ಜೋರು ಮಳೆಯಿಂದ ಕೋಲಾರದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು, ರಸ್ತೆಗಳಲ್ಲಿ ನೀರು ತುಂಬಿದ ಹಿನ್ನೆಲೆ ವಾಹನ ಸವಾರು ಪರದಾಡು ಪರಿಸ್ಥಿತಿ ನಿರ್ಮಾಣವಾಗಿತ್ತು.
Karnataka rains: ಮುಂಗಾರುಪೂರ್ವ ಮಳೆಗೆ 10 ಜಿಲ್ಲೆಗಳಲ್ಲಿ ಅಪಾರ ಬೆಳೆ ಹಾನಿ!
ಬಂಗಾರಪೇಟೆ ತಾಲೂಕಿನ ಮೂಗನಹಳ್ಳಿ ರಸ್ತೆಯಲ್ಲಿ ಬೃಹತ್ ಮರ ಹಾಗೂ ವಿದ್ಯುತ್ ಕಂಬವು ನೆಲಕ್ಕುಳಿದ ಹಿನ್ನಲೆಯಲ್ಲಿ ಸಾರ್ವಜನಿಕರ ಹಾಗೂ ದ್ವಿಚಕ್ರ ವಾಹನ ಸವಾರರು ಪರದಾಡಬೇಕಾಯಿತು. ಇನ್ನುಳಿದ್ದಂತೆ ಬೂದಿಕೋಟೆ ಬಳಿಯ ಹುನುಕುಳ ದೊಡ್ಡಿ ಬಳಿ ರಸ್ತೆಗೆ ಅಡ್ಡಲಾಗಿ ನೆಲಕ್ಕುರುಳಿದಿದ್ದು, ರೈತರ ಪಾಲಿ ಹೌಸ್ ಸೇರಿದಂತೆ ಶೀಟ್‌ಗಳು ಬಿರುಗಾಳಿಗೆ ಹಾರಿ ಹೋಗಿರುವುದು ಬಿಟ್ಟರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.