Asianet Suvarna News Asianet Suvarna News

Karnataka rains: ಮುಂಗಾರುಪೂರ್ವ ಮಳೆಗೆ 10 ಜಿಲ್ಲೆಗಳಲ್ಲಿ ಅಪಾರ ಬೆಳೆ ಹಾನಿ!

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮುಂಗಾರುಪೂರ್ವ ಮಳೆಯಬ್ಬರಕ್ಕೆ ದಾವಣಗೆರೆ ಸೇರಿ ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳ 8 ಸಾವಿರಕ್ಕೂ ಹೆಚ್ಚು ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕೋಲಾರವೊಂದರಲ್ಲಿ 7,100ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.

karnataka rain update Heavy crop damage in 10 districts due to pre-monsoon rains rav
Author
First Published May 23, 2023, 6:48 AM IST

ಬೆಂಗಳೂರು (ಮೇ.23) : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮುಂಗಾರುಪೂರ್ವ ಮಳೆಯಬ್ಬರಕ್ಕೆ ದಾವಣಗೆರೆ ಸೇರಿ ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳ 8 ಸಾವಿರಕ್ಕೂ ಹೆಚ್ಚು ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕೋಲಾರವೊಂದರಲ್ಲಿ 7,100ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ರಾಜ್ಯದ ಹಲವೆಡೆ ಎರಡ್ಮೂರು ದಿನಗಳಿಂದ ಬಿರುಗಾಳಿ, ಆಲಿಕಲ್ಲು ಸಹಿತ ಉತ್ತಮ ಮಳೆಯಾಗುತ್ತಿದ್ದು, ತಂಪಿನ ಅನುಭವ ನೀಡುತ್ತಿದೆ. ಈ ಅಕಾಲಿಕ ಮಳೆಯಿಂದಾಗಿ ಬಿಸಿಲಿನಿಂದ ಕಂಗೆಟ್ಟಿದ್ದ ಒಂದು ಕಡೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರೆ, ಮತ್ತೊಂದೆಡೆ ರೈತರು ಮಾತ್ರ ಬೆಳೆ ನಷ್ಟದಿಂದಾಗಿ ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

ಕರ್ನಾಟಕದ 3 ಜಿಲ್ಲೆಗಳಲ್ಲಿ ಭಾರೀ ಮಳೆ: ಮಹಿಳೆ ಸಾವು

ಅಕಾಲಿಕ ಮಳೆಗೆ ರಾಜ್ಯದಲ್ಲೇ ಅತಿ ಹೆಚ್ಚು ಬೆಳೆ ನಷ್ಟ(7166 ಎಕರೆ) ಕೋಲಾರದಲ್ಲಿ ಆಗಿದೆ. ಕೊಪ್ಪಳದಲ್ಲಿ 618ಕ್ಕೂ ಹೆಚ್ಚು ಎಕರೆ, ದಾವಣಗೆರೆ​ 153 ಎಕರೆ, ಚಿಕ್ಕಬಳ್ಳಾಪುರ 100 ಎಕರೆ, ಬಳ್ಳಾರಿ 50 ಎಕರೆ, ಚಿತ್ರದುರ್ಗ 39 ಎಕರೆ, ಹಾವೇರಿಯಲ್ಲಿ 16 ಎಕರೆ ಸೇರಿ ರಾಜ್ಯದ ವಿವಿಧೆಡೆ ತೋಟಗಾರಿಕೆ ಮತ್ತು ಭತ್ತದ ಬೆಳೆಗೆ ಭಾರೀ ಹಾನಿಯಾಗಿದೆ.

ಮಾವು ಬೆಳೆಗಾರ ತತ್ತರ: ಮಳೆಯಿಂದಾಗಿ ಕೋಲಾರ ಮತ್ತು ಕೊಪ್ಪಳದಲ್ಲಿ ಮಾವು ಬೆಳೆಗೆ ಹೆಚ್ಚಿನ ಹಾನಿಯಾಗಿದೆ. ಕೋಲಾರ ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಟಾವಿಗೆ ಬರಬೇಕಿದ್ದ ಮಾವು ಬೆಳೆ ಆಲಿಕಲ್ಲು ಸಹಿತ ಸುರಿದ ಮಳೆಗೆ ನೆಲಸೇರಿದೆ. ಈ ಬಾರಿ ವಿಳಂಬವಾಗಿ ಮಾವು ಫಸಲು ಬಂದಿದ್ದರಿಂದ ರೈತರಿಗೆ ಕೊಂಚ ನಿರಾಸೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಆಗಿರುವ ಬೆಳೆ ನಷ್ಟಅವರನ್ನು ಆತಂಕಕ್ಕೆ ಸಿಲುಕಿಸಿದೆ. ಮಾವು ಅಲ್ಲದೆ ದಾಳಿಂಬೆ, ನೇರಳೆ, ಹಿಪ್ಪು ನೇರಳೆ, ಹೂ ಸೇರಿ ಜಿಲ್ಲೆಯಲ್ಲಿ ಈ ಬಾರಿಯ ಮಳೆ ವ್ಯಾಪಕ ಹಾನಿ ಮಾಡಿದೆ. ಭಾನುವಾರ ರಾತ್ರಿ ಸುರಿದ ಮಳೆಯಿಂದ ಶಿಡ್ಲಘಟ್ಟತಾಲೂಕೊಂದರಲ್ಲೇ ಸುಮಾರು 2 ಕೋಟಿ ರುಪಾಯಿಗೂ ಅಧಿಕ ನಷ್ಟವಾಗಿದೆ ಎಂದು ಹೇಳಲಾಗಿದೆ.

ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಹಾಗೂ ಹನೂರು ಭಾಗದಲ್ಲಿ ಸುಮಾರು 50 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬಾಳೆ ಬೆಳೆ ಹಾನಿಯಾಗಿರುವ ಕುರಿತು ವರದಿಯಾಗಿದ್ದು, ದಾವಣಗೆರೆಯಲ್ಲಿ 150 ಎಕರೆ ಭತ್ತದ ಬೆಳೆ ಮತ್ತು ತೋಟಗಾರಿಕೆ ಬೆಳೆಗೆ ಹಾನಿ ಸಂಭವಿಸಿದೆ. ಚಿಕ್ಕಬಳ್ಳಾಪುರದಲ್ಲಿ ಅಕಾಲಿಕ ಮಳೆಯಿಂದಾಗಿ ನೂರಾರು ಎಕರೆ ದ್ರಾಕ್ಷಿ ಬೆಳೆ ಸೇರಿ ವಿವಿಧ ತರಕಾರಿ, ತೋಟಗಾರಿಕೆ ಬೆಳೆ ನೆಲಕಚ್ಚಿದೆ. ಹೂವಿನ ಕೃಷಿಗೂ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಭಾರೀ ಹಾನಿ ಮಾಡಿದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.

Bengaluru rains: ಗಾಳಿಗೆ ಕಬ್ಬನ್‌ ಪಾರ್ಕಲ್ಲಿ 25ಕ್ಕೂ ಹೆಚ್ಚು ಮರ ಧರೆಗೆ!

ಯಾವ್ಯಾವ ಜಿಲ್ಲೆಗಳಲ್ಲಿ ಹಾನಿ?

  • ಕೋಲಾರ- 7166 ಎಕರೆ
  • ಕೊಪ್ಪಳ- 618+ ಎಕರೆ
  • ದಾವಣಗೆರೆ​-153 ಎಕರೆ
  • ಚಿಕ್ಕಬಳ್ಳಾಪುರ-100+ ಎಕರೆ
  • ಬಳ್ಳಾರಿ- 50 ಎಕರೆ
  • ಚಾ.ನಗರ-50 ಎಕರೆ
  • ಚಿತ್ರದುರ್ಗ-39 ಎಕರೆ
  • ಹಾವೇರಿ- 16 ಎಕರೆ
  • ಮೈಸೂರು - 2+ ಎಕರೆ
  • ಚಿಕ್ಕಮಗಳೂರು- 2+ ಎಕರೆ
Follow Us:
Download App:
  • android
  • ios