ಕಲ್ಲತ್ತಗಿರಿ ವೀರಭದ್ರ ಸನ್ನಿಧಿಗೆ ಜಲದಿಗ್ಬಂಧನ : ಪ್ರವಾಸಿಗರಿಗೆ ನಿಷೇಧ
ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಚಿಕ್ಕಮಗಳೂರು ಜಿಲ್ಲೆಯ ಕಲ್ಲತ್ತಗಿರಿಯಲ್ಲಿ ಮಳೆಯಿಂದ ಜಲದಿಗ್ಬಂಧನವಾಗಿದೆ.
ಚಿಕ್ಕಮಗಳೂರು(ಆ.08): ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಆಶ್ಲೇಷ ಮಳೆ ಅಬ್ಬರಿಸುತ್ತಿದೆ. ವಿವಿಧ ಜಿಲ್ಲೆಗಳು ಜಲಾವೃತವಾಗಿವೆ. ಪ್ರವಾಹ ಪರಿಸ್ಥಿತಿಯಿಂದ ಜನರು ತತ್ತರಿಸಿದ್ದಾರೆ.
ಮಲೆನಾಡಿನಲ್ಲಿಯೂ ಕೂಡ ಮಳೆಯ ಪ್ರಮಾಣ ಅತೀ ಹೆಚ್ಚಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆರೆಯುಕ್ಕಿ ಹರಿಯುತ್ತಿದೆ. ಇಲ್ಲಿನ ಕಲ್ಲತ್ತಗಿರಿಯಲ್ಲಿರುವ ವೀರಭದ್ರೇಶ್ವರ ಸ್ವಾಮಿಗೆ ಜಲದಿಗ್ಬಂಧನವಾಗಿದೆ.
ಕರ್ನಾಟಕ ಪ್ರವಾಹಕ್ಕೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುಳುಗುವ ಭೀತಿಯಲ್ಲಿ ಇಲ್ಲಿನ ವೀರಭದ್ರ ದೇವಾಲಯವಗಿದೆ. ಕೆಮ್ಮಣ್ಣುಗುಂಡಿಯಲ್ಲಿ ಸುರಿಯುತ್ತಿರುವ ಅತ್ಯಧಿಕ ಮಳೆಯ ಪರಿಣಾಮ ಪ್ರವಾಹದೋಪಾದಿಯಲ್ಲಿ ನೀರು ರಭಸದಿಂದ ಹರಿಯುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಇರುವ ಕಲ್ಲತ್ತಗಿರಿಗೆ ಭೇಟಿ ನೀಡುವ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ.