ಉಡುಪಿ(ಸೆ.29): ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಅವರು, ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದ ಮಹಿಳೆಯನ್ನು ಉಪಚರಿಸಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಅವರು ಇತರರಿಗೆ ಮಾದರಿಯಾಗಿದ್ದಾರೆ.

ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಶನಿವಾರ ಬೆಳಗ್ಗೆ ಉಡುಪಿಯಿಂದ ಕುಂದಾಪುರಕ್ಕೆ ತೆರಳುತ್ತಿದ್ದಾಗ, ರಾಷ್ಟ್ರೀಯ ಹೆದ್ದಾರಿ 66ರ ಕೋಟೇಶ್ವರದಲ್ಲಿ ಆಟೋ ರಿಕ್ಷಾವೊಂದು ಡಿವೈಡರ್‌ಗೆ ಗುದ್ದಿ ಮಗುಚಿ ಬಿದ್ದಿತ್ತು, ಅದರಲ್ಲಿದ್ದ ಮೂವರಿಗೆ ಗಾಯಗಳಾಗಿದ್ದು ಅವರು ರಸ್ತೆಯಲ್ಲಿ ಕುಳಿತು ನರಳುತ್ತಿದ್ದರು.

ನಮ್‌ ಕಡೆ ಮಾತ್ ಕೇಳಿದ್ರೆ ಎದೆ ಹೊಡ್ಕೋತೀರಿ: ಉಡುಪಿಯಲ್ಲಿ ಶ್ರೀರಾಮುಲು ಹಾಸ್ಯ ಚಟಾಕಿ

ಇದನ್ನು ಗಮನಿಸಿದ ಸಚಿವ ಶ್ರೀರಾಮುಲು ತಮ್ಮ ಕಾರನ್ನು ನಿಲ್ಲಿಸಿ ಸ್ಥಳಕ್ಕೆ ಧಾವಿಸಿ ಗಾಯಗೊಂಡಿದ್ದವರನ್ನು ವಿಚಾರಿಸಿದರು, ನೀರು ತರಿಸಿ ಗಾಯಾಳು ಮಹಿಳೆಗೆ ಕುಡಿಸಿ ಉಪಚರಿಸಿದರು. ಸಚಿವರೊಂದಿಗೆ ಇದ್ದ ಶಾಸಕ ಕೆ.ರಘುಪತಿ ಭಟ್‌ ಕೂಡ ಸಹಕರಿಸಿದರು. ನಂತರ ಮಹಿಳೆಯನ್ನು ಸಚಿವರು ತಾವೇ ಎತ್ತಿ ಶಾಸಕರ ಕಾರಿನಲ್ಲಿ ಕೂರಿಸಿದರು. ಮಹಿಳೆಯ ಜೊತೆಗೆ ಗಾಯಗೊಂಡಿದ್ದ ಇನ್ನಿಬ್ಬರನ್ನೂ ಅದೇ ಕಾರಿನಲ್ಲಿ ಕುಳ್ಳಿರಿಸಿ, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆರೋಗ್ಯ ಸಚಿವರ ಈ ಮಾನವೀಯ ನಡವಳಿಕೆಯ ವಿಡಿಯೋ ದೃಶ್ಯಾವಳಿಗಳು ಇದೀಗ ವೈರಲ್‌ ಆಗುತ್ತಿವೆ.

ಮೂಲ್ಕಿ ಬಪ್ಪನಾಡು ದೇವಳಕ್ಕೆ ಸಚಿವ ಶ್ರೀರಾಮುಲು ಭೇಟಿ