ಮಂಗಳೂರು(ಸೆ.29): ಮೂಲ್ಕಿಯ ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ರಾಜ್ಯ ಆರೋಗ್ಯ ಸಚಿವ ಬಿ. ಶ್ರೀರಾಮುಲು ಶನಿವಾರ ಸಂಜೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ದೇವಳದ ಅರ್ಚಕ ನರಸಿಂಹ ಭಟ್‌ ವಿಶೇಷ ಪ್ರಾರ್ಥನೆ ನಡೆಸಿ ಪ್ರಸಾದ ವಿತರಿಸಿದರು.

ಈ ಸಂದರ್ಭ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ, ಪ್ರಸಾದ್‌ ಭಟ್‌, ಸುನಿಲ್‌ ಆಳ್ವ, ಶೈಲೇಶ್‌ ಕುಮಾರ್‌, ರಮಾನಾಥ ಪೈ, ದೇವಪ್ರಸಾದ್‌ ಪುನರೂರು, ಸುರೇಶ್‌ ಶೆಟ್ಟಿಗುರ್ಮೆ, ಗೀತಾಂಜಲಿ ಸುವರ್ಣ, ದಯಾನಂದ ಹೆಜ್ಮಾಡಿ, ಸತ್ಯೇಂದ್ರ ಶೆಣೈ, ಸಂತೋಷ್‌ ಶೆಟ್ಟಿ, ಶಿವಶಂಕರ್‌, ಸಾಧು ಅಂಚನ್‌ ಮತ್ತಿತರರು ಉಪಸ್ಥಿತರಿದ್ದರು.

ಶ್ರೀರಾಮುಲು ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೂ ಭೇಟಿ ನೀಡಿದ್ದಾರೆ. ಅಲ್ಲಿ ಕೃಷ್ಣನ ದರ್ಶನ ಪಡೆದಿದ್ದು, ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾಋಎ. ಭಾವೈಕ್ಯತೆಯ ಶ್ರೀಕೃಷ್ಣ ದರ್ಶನ. ಶ್ರಿ ಮಧ್ವಾಚಾರ್ಯರಿಂದ ಸ್ಥಾಪಿತವಾದ, ತನ್ನ ಬಿಂಬವನ್ನೇ ತಿರುಗಿಸಿ ಕನಕದಾಸರಿಗೆ ದರ್ಶನ ನೀಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಪುನೀತನಾದೆ.

ನಮ್‌ ಕಡೆ ಮಾತ್ ಕೇಳಿದ್ರೆ ಎದೆ ಹೊಡ್ಕೋತೀರಿ: ಉಡುಪಿಯಲ್ಲಿ ಶ್ರೀರಾಮುಲು ಹಾಸ್ಯ ಚಟಾಕಿ