Asianet Suvarna News Asianet Suvarna News

Mandya : ಪ್ರತಿ 6 ತಿಂಗಳಿಗೊಮ್ಮೆ ಆರೋಗ್ಯ ಶಿಬಿರ: ಫೈಟರ್‌ ರವಿ

ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಿದ್ದೇನೆ. ಈ ಸೇವೆಯನ್ನು ನನ್ನ ಕೊನೆ ಉಸಿರಿರುವವರೆಗೂ ಮುಂದುವರಿಸುತ್ತೇನೆ ಎಂದು ಸಮಾಜಸೇವಕ ಫೈಟರ್‌ ರವಿ ಹೇಳಿದರು.

Health camp for every 6 months  Says Fighter Ravi snr
Author
First Published Nov 7, 2022, 5:39 AM IST

 , ನಾಗಮಂಗಲ (ನ.07):  ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಿದ್ದೇನೆ. ಈ ಸೇವೆಯನ್ನು ನನ್ನ ಕೊನೆ ಉಸಿರಿರುವವರೆಗೂ ಮುಂದುವರಿಸುತ್ತೇನೆ ಎಂದು ಸಮಾಜಸೇವಕ ಫೈಟರ್‌ ರವಿ ಹೇಳಿದರು.

ತಾಲೂಕಿನ ಬಿಂಡಿಗನವಿಲೆ ಸರ್ಕಾರಿ ಪದವಿಪೂರ್ವ ಕಾಲೇಜು (College )  ಆವರಣ¨ ಬೃಹತ್‌ ಆರೋಗ್ಯ, ನೇತ್ರ (Eye)  ತಪಾಸಣಾ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು, ಜನಸಾಮಾನ್ಯರ ಆರೋಗ್ಯವನ್ನು ಉತ್ತಮವಾಗಿರಿಸಬೇಕೆಂಬ ಆಶಯದೊಂದಿಗೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಿದ್ದೇನೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಎಲ್ಲರಿಗೂ ಶುದ್ಧ ಕುಡಿಯುವ ನೀರು ಮತ್ತು ಆರೋಗ್ಯ ಸೇವೆ ನೀಡುತ್ತಿರುವ ನನಗೆ ಜೀವನದಲ್ಲಿ ನೆಮ್ಮದಿ ಸಿಕ್ಕಂತಾಗಿದೆ ಎಂದರು.

ತಾಲೂಕಿನಾದ್ಯಂತ ಈಗಾಗಲೇ ಹಲವಾರು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ಇನ್ನೂ ಹಲವು ಗ್ರಾಮಗಳ ಜನರು ಬೇಡಿಕೆಯಿಟ್ಟಿದ್ದಾರೆ. ಘಟಕ ಸ್ಥಾಪಿಸಲು ಅಗತ್ಯವಾದ ಶೆಡ್‌ ನಿರ್ಮಿಸಲು ಗ್ರಾಮಸ್ಥರಿಗೆ ಆರ್ಥಿಕ ತೊಂದರೆಯಾದರೆ ಅದನ್ನೂ ಸಹ ನಾನೇ ಭರಿಸಿ ಸುಸಜ್ಜಿತವಾದ ನೀರಿನ ಘಟಕ ನಿರ್ಮಿಸಿಕೊಡುವುದಾಗಿ ತಿಳಿಸಿದರು.

ಆದಿಚುಂಚನಗಿರಿ ಮಠದ ಸತ್ಕೀರ್ತಿನಾಥ ಸ್ವಾಮೀಜಿ, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರತಿನಿತ್ಯ ಸಹಸ್ರಾರು ಮಂದಿ ಜನರಿಗೆ ಆರೋಗ್ಯ ಸೇವೆ ನೀಡಲಾಗುತ್ತಿದ್ದು, ಈ ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿರುವ ಜನರಿಗೆ ಹೆಚ್ಚಿನ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಸಮಾಜ ಸೇವಕ ಫೈಟರ್‌ ರವಿ ಮತ್ತು ಆದಿಚುಂಚನಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಎಲ್ಲ ಬಗೆಯ ಔಷದೋಪಚಾರವನ್ನು ಉಚಿತವಾಗಿ ನೀಡಲಾಗುವುದು ಎಂದರು.

ಕಿಡ್ನಿ ಸಮಸ್ಯೆಯಿದ್ದ ವ್ಯಕ್ತಿಗೆ ಭರವಸೆ

ಇದೇ ವೇಳೆ ತಾಲೂಕಿನ ಗಾಣಿಗರಕೊಪ್ಪಲು ಗ್ರಾಮದ ಪಾಪಶೆಟ್ಟಿಎಂಬುವರು ತಮಗೆ ಎರಡೂ ಕಿಡ್ನಿಗಳು ವೈಫಲ್ಯಗೊಂಡಿದ್ದು ಜೀವನ ಸಾಗಿಸಲು ಬಹಳ ತೊಂದರೆಯಾಗಿದೆ ಎಂದು ಫೈಟರ್‌ರವಿ ಅವರ ಬಳಿ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಫೈಟರ್‌ ರವಿ ಸೂಕ್ತ ಚಿಕಿತ್ಸೆಗೆ ನನ್ನ ಕೈಲಾದ ಆರ್ಥಿಕ ಸಹಾಯ ಮಾಡುವ ಜೊತೆಗೆ ಮಗುವಿನ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ ನೀಡಿದರು.

ತಜ್ಞ ವೈದ್ಯರಿಂದ ತಪಾಸಣೆ

ಶಿಬಿರದಲ್ಲಿ ಆರೋಗ್ಯ, ನೇತ್ರ ತಪಾಸಣೆ ಸೇರಿದಂತೆ ಹೃದಯ ಸಂಬಂಧಿ ಮತ್ತು ಸ್ತ್ರೀ ರೋಗ ಸಮಸ್ಯೆ ಕುರಿತು ಆದಿಚುಂಚನಗಿರಿ ಆಸ್ಪತ್ರೆಯ 15ಕ್ಕೂ ಹೆಚ್ಚು ವಿಭಾಗಗಳ ತಜ್ಞ ವೈದ್ಯರ ತಂಡದಿಂದ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ, ಸಲಹೆ ನೀಡಿದ ಬಳಿಕ ಸ್ಥಳದಲ್ಲಿಯೇ ಔಷಧಿ ಕಿಟ್‌ ವಿತರಿಸಲಾಯಿತು. ಬೆಂಗಳೂರು ಒಕ್ಕಲಿಗರ ಸಂಘದ ಉಚಿತ ಸಂಚಾರಿ ದಂತ ಚಿಕಿತ್ಸಾಲಯದಲ್ಲಿ ಹಲ್ಲಿನ ಸಮಸ್ಯೆಯಿರುವ ರೋಗಿಗಳ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಕಣ್ಣಿನ ಸಮಸ್ಯೆಯಿರುವ ಜನರಿಗೆ ತಪಾಸಣೆ ನಡೆಸಿ ಅವಶ್ಯಕತೆಯಿದ್ದವರಿಗೆ ಉಚಿತವಾಗಿ ಕನ್ನಡಕ ನೀಡುವ ವ್ಯವಸ್ಥೆ ಮಾಡಲಾಯಿತು. ಶಿಬಿರದಲ್ಲಿ ಕೆಲವರು ಉಚಿತವಾಗಿ ರಕ್ತದಾನ ಮಾಡಿದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್‌ ಶಿಬಿರವನ್ನುದ್ದೇಶಿಸಿ ಮಾತನಾಡಿದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಧರ್ಮೇಂದ್ರ, ಶಿವಕುಮಾರ್‌, ಮುಖಂಡರಾದ ಅರ್ಜುನ್‌, ಪವನ್‌, ಸತೀಶ್‌, ಲೋಕೇಶ್‌, ಶೇಷಾದ್ರಿ, ಮಂಗರವಳ್ಳಿ ಗ್ರಾ.ಪಂ.ಮಾಜಿ ಸದಸ್ಯ ಪ್ರಕಾಶ್‌ ಸೇರಿದಂತೆ ಹಲವರಿದ್ದರು.

 ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಉಚಿತ ಆರೋಗ್ಯ ಶಿಬಿರ

ಈ ಸೇವೆಯನ್ನು ನನ್ನ ಕೊನೆ ಉಸಿರಿರುವವರೆಗೂ ಮುಂದುವರಿಸುತ್ತೇನೆ ಎಂದ ಸಮಾಜಸೇವಕ ಫೈಟರ್‌ ರವಿ

Follow Us:
Download App:
  • android
  • ios