ವಿಜಯಪುರ [ಆ.30]: ರಾಜ್ಯದಲ್ಲಿ 17 ಮಂದಿಗೆ ಖಾತೆ ಹಂಚಿಕೆ ಮಾಡಿ ನಾಲ್ಕು ದಿನ ಕಳೆದಿದೆ.  ಸಚಿವರು ತಮ್ಮ ಖಾತೆಗಳ ಅಧಿಕಾರ ವಹಿಸಿಕೊಂಡಿದ್ದು, ಆದರೆ ಸಚಿವ ಶ್ರೀ ರಾಮುಲು ಮಾತ್ರ ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. 

ಈ ಬಗ್ಗೆ ವಿಜಪುರದಲ್ಲಿ ಮಾತನಾಡಿದ ಶ್ರೀ ರಾಮುಲು ಇಂದು ಅಮಾವಾಸ್ಯೆ ಕಳೆದ ಮೇಲೆ ಅಧಿಕಾರ ವಹಿಸಿಕೊಳ್ಳುತ್ತೇನೆ ಎಂದು ಹೇಳಿದರು.  

ಸದ್ಯ ಪ್ರವಾಹ ಪೀಡಿತ ಪ್ರದೇಶಗಳ ಪ್ರವಾಸದಲ್ಲಿರುವ ಶ್ರೀ ರಾಮುಲು ಅಮಾವಾಸ್ಯೆ ಕಾರಣದಿಂದ ಅಧಿಕಾರ ವಹಿಸಿಕೊಂಡಿರಲಿಲ್ಲ. ಅಮಾವಾಸ್ಯೆ ಮುಗಿದ ನಂತರ ಆರೋಗ್ಯ ಸಚಿವರಾಗಿ ಚಾರ್ಜ್ ತೆಗೆದುಕೊಳ್ಳುತ್ತೇನೆ ಎಂದರು. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದರಿಂದ ಸಚಿವರ ಶ್ರೀ ರಾಮುಲು ಅವರಿಗೆ ಅಮಾವಾಸ್ಯೆ ಭಯ ಕಾಡುತ್ತಿದೆಯಾ ? ಮೂಢನಂಬಿಕೆ ಮೊರೆ ಹೋದರಾ ನೂತನ ಸಚಿವರು ಎನ್ನಲಾಗುತ್ತಿದೆ. 

ಆಗಸ್ಟ್ 26 ರಂದು ರಾಜ್ಯದಲ್ಲಿ 17 ಸಚಿವರಿಗೆ ಖಾತೆಗಳ ವಹಿಸಲಾಗಿದ್ದು,  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನು ಬಳ್ಳಾರಿ ಶಾಸಕರಾದ ಶ್ರೀ ರಾಮುಲು ಅವರಿಗೆ ನೀಡಲಾಗಿದೆ.