ಸಿಜೆಪಿ ಪ್ರತಿಭಟನೆಕಾರರಿಗೆ ಕಾಂಗ್ರೆಸ್ ಫಂಡಿಂಗ್ ಮಾಡಿದೆ ಅನ್ನೋ ಹೆಚ್‌ಡಿ ಕುಮಾರಸ್ವಾಮಿ ಆರೋಪಕ್ಕೆ ಬಿಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. ಹಕ್ಕಿಗಾಗಿ ಹೋರಾಟ ಮಾಡೊರು ಎಲ್ಲರೂ ನಮ್ಮವರೇ, ಬಿಕೆ ಹರಿಪ್ರಸಾದ್ ಹೇಳಿದ್ದೇನು?

ಧಾರವಾಡ (ಅ.17) ಕಾಕ್ರೋಚ್ ಜನತಾ ಪಾರ್ಟಿ ಹೋರಾಟಗಾರರಿಗೆ ಕಾಂಗ್ರೆಸ್ ಫಂಡಿಂಗ್ ಮಾಡುತ್ತಿದೆ ಎಂಬ ಹೆಚ್‌ಡಿ ಕುಮಾರಸ್ವಾಮಿ ಆರೋಪಕ್ಕೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಬಿಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. ಅನಾವಶ್ಯಕವಾಗಿ, ಕಾನೂನು ಬಾಹಿರವಾಗಿ ಸಿಜೆಪಿ ಮಕ್ಕಳನ್ನು ಜೈಲಿಗೆ ಹಾಕಿದಾಗ ಅವರನ್ನು ಬಿಡಿಸೋದು ಯಾರು? ಸಿಜೆಪಿ ಹೋರಾಟಗಾರರ ಬಳಿಕ ವಕೀಲರಿಗೆ ಕೊಡಲು ದುಡ್ಡಿದೆಯಾ? ಕಾಕ್ರೋಚ್ ಜನತಾ ಪಾರ್ಟಿ ಹೋರಾಟಗಾರರ ಬಿಡಿಸಲು ಲಾಯರ್ ಫೀಸ್ ಕೊಟ್ಟರೆ ಅದು ಫಂಡಿಂಗ್ ಆಗುತ್ತಾ ಎಂದು ಬಿಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್, ಹೋರಾಟ ಹಾಗೂ ಕಾಂಗ್ರೆಸ್ ಬೆಂಬಲ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸಿಜೆಪಿ ಹೋರಾಟಗಾರರ ಮೇಲೆ ಕೇಂದ್ರ ಸರ್ಕಾರ ಮಾಡುತ್ತಿರುವುದೇನು? ಫಂಡಿಂಗ್ ಎಂದರೆ ವಕೀಲರಿಗೆ ಕೊಡುವ ಶುಲ್ಕ ಫಂಡಿಂಗಾ? ಎಂದು ಬಿಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ. ತ್ರಿವರ್ಣ ಧ್ವಜ ಹೊಲಿಸಲು ದುಡ್ಡು ಕೊಡ್ಡರೆ ಅದು ಫಂಡಿಂಗಾ ಎಂದು ಬಿಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಒಂದು ಪ್ರತಿಭಟನೆ ಮಾಡುವಾಗ ಏನು ಸಹಕಾರ ಕೊಡಬೇಕು ಅದನ್ನು ಕಾಂಗ್ರೆಸ್ ಮಾಡುತ್ತದೆ. ಸಹಕಾರ ಕೊಡುವುದಕ್ಕೂ ಫಂಡಿಂಗ್ ಮಾಡುವುದಕ್ಕೂ ವ್ಯತ್ಯಾಸವಿದೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಲಂಚ ಹೊಡೆಯೊರಿಗೆ ಭ್ರಷ್ಟಾಚಾರಿಗಳಿಗೆ ಮಾತ್ರ ಫಂಡಿಂಗ್ ಗೊತ್ತಿರೊದು. ನಾವು ಹೋರಾಟಗಾರರಿಗೆ ಸಹಕಾರ ನೀಡಿದ್ದೇವೆ, ಬೆಂಬಲ ನೀಡಿದ್ದೇವೆ. ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಕಾರಣ ಸಂವಿಧಾನ ಉಳಿಸೋದಕ್ಕೆ ಹೋರಾಟ ಮಾಡುವವರಿಗೆ ನಾವು ಬೆಂಬಲ ಕೊಡುತ್ತೇವೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

ಕಾಂಗ್ರೆಸ್, ಸಿಜೆಪಿ ಒಂದೇ ಹೇಳಿಕೆಗೆ ಸ್ಪಷ್ಟನೆ

ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಹಾಗೂ ಸಿಜೆಪಿ ಒಂದೇ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಬಿಕೆ ಹರಿಪ್ರಸಾದ್, ಹಕ್ಕಿಗಾಗಿ ಹೋರಾಟ ಮಾಡುವ ಎಲ್ಲರೂ ನಮ್ಮವರೇ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಬಿಕೆ ಹರಿಪ್ರಸಾದ್, ಸ್ಟಿಂಗ್ ವಿಚಾರದಲ್ಲಿ ನಿಮ್ಮ ಟಿಆರ್‌ಪಿ ಹೆಚ್ಚಾಗುತ್ತಿದೆ. ತನಿಖೆ ಆಗುತ್ತಿದೆ. ಹೀಗಾಗಿ ನಾನು ಮಾತನಾಡುವುದಿಲ್ಲ. ಬೊಮ್ಮಾಯಿ ಇಡಿ, ಐಟಿ ತನಿಖೆ ಬಗ್ಗೆ ಯಾಕೆ ಹೇಳಲಿಲ್ಲ, ಕೇವಲ ಸಿಬಿಐ ಅಷ್ಟೇ ಯಾಕೆ ಹೇಳಿದ್ದರು. ಈ ಮಟ್ಟದ ರಾಜಕಾರಣವನ್ನು ಜನರು ನಮ್ಮಲ್ಲಿ ನಿರೀಕ್ಷೆ ಮಾಡಲಿಲ್ಲ. ಎಲ್ಲದಕ್ಕೂ ತೆರೆ ಎಳೆಯಬೇಕು, ಎಲ್ಲಿವರೆಗೆ ಹೋಗುತ್ತೆ ನೋಡೋಣ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.