ಜೆಡಿಎಸ್‌ ಪಕ್ಷದ ಶಾಸಕರು, ಮುಖಂಡರು ರಾಮಮಂದಿರ ನಿರ್ಮಾಣಕ್ಕೆ ಹಣ ನೀಡಿದ್ದಾರೆ| ಜಾತ್ಯತೀತವಾಗಿ ದೇಣಿಗೆ ಸಂಗ್ರಹ| ಸರ್ಕಾರ ಹಣ ಕೊಡದೇ ಇರುವವರನ್ನು ಲೀಸ್ಟ್‌ ಮಾಡುತ್ತಿಲ್ಲ. ಮನೆ ಮಾರ್ಕ್ ಮಾಡುತ್ತಿಲ್ಲ| ಮಂದಿರ ನಿರ್ಮಾಣ ವಿಚಾರದಲ್ಲಿ ರಾಜಕೀಯ ಬೇಡ: ಶ್ರೀರಾಮುಲು| 

ಕಾರವಾರ(ಫೆ.17): ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವರ ಮನಸ್ಸಿನಲ್ಲಿ ಕೂಡಾ ರಾಮಮಂದಿರ ನಿರ್ಮಾಣ ಆಗಬೇಕು ಎನ್ನುವ ಉದ್ದೇಶವಿದೆ. ಕುಮಾರಸ್ವಾಮಿ ಕೂಡಾ ಮುಂದೆ ದೇಣಿಗೆ ನೀಡಬಹುದು. ಟ್ವೀಟ್‌, ಹೇಳಿಕೆಗಳು ಕೇವಲ ರಾಜಕೀಯ ಪ್ರೇರಿತವಾಗಿದೆ. ಪ್ರಚಾರಕ್ಕಾಗಿ ಈ ರೀತಿ ಹೇಳುತ್ತಿದ್ದಾರೆ ಎಂದು ಸಚಿವ ಶ್ರೀರಾಮಲು ಹೇಳಿ​ದ್ದಾರೆ. 

ನಗರಕ್ಕೆ ಮಂಗಳವಾರ ಆಗಮಿಸಿದ್ದ ವೇಳೆ ಮಾಧ್ಯಮದವರು ಕೇಳಿದ ಕುಮಾರಸ್ವಾಮಿ ಟ್ವೀಟ್‌ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ಪಕ್ಷದ ಶಾಸಕರು, ಮುಖಂಡರು ರಾಮಮಂದಿರ ನಿರ್ಮಾಣಕ್ಕೆ ಹಣ ನೀಡಿದ್ದಾರೆ. ಜಾತ್ಯತೀತವಾಗಿ ದೇಣಿಗೆ ಸಂಗ್ರಹವಾಗುತ್ತಿದೆ. ಸರ್ಕಾರ ಹಣ ಕೊಡದೇ ಇರುವವರನ್ನು ಲೀಸ್ಟ್‌ ಮಾಡುತ್ತಿಲ್ಲ. ಮನೆ ಮಾರ್ಕ್ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ. 

ಮುಂಡಗೋಡ ಹೊರವಲಯದ ಅರಣ್ಯಕ್ಕೆ ಬೆಂಕಿ

ನಮ್ಮ ಸರ್ಕಾರದಲ್ಲಿ ಈ ರೀತಿ ಆಗಲು ಬಿಡುವುದಿಲ್ಲ. ಕುಮಾರಸ್ವಾಮಿ ಆರೋಪದಲ್ಲಿ ಸತ್ಯವಿಲ್ಲ. ಮಂದಿರ ನಿರ್ಮಾಣ ವಿಚಾರದಲ್ಲಿ ರಾಜಕೀಯ ಬೇಡ. ಈ ರೀತಿ ಹೇಳಿಕೆ ಶೋಭೆ ತರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.