ಮುಂಡಗೋಡ(ಫೆ.15): ಪಟ್ಟಣದ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಅರಣ್ಯ ಪ್ರದೇಶಕ್ಕೆ ಹಾನಿ ಸಂಭವಿಸಿದೆ.

ಮುಂಡಗೋಡ ಅರಣ್ಯ ಸರ್ವೇ ನಂ 186ರಲ್ಲಿ ಕಸಕ್ಕೆ ಹಚ್ಚಿದ ಬೆಂಕಿ ಅರಣ್ಯ ಪ್ರದೇಶಕ್ಕೆ ಹೊತ್ತಿಕೊಂಡಿದ್ದು, ಸಾಕಷ್ಟು ಗಿಡಗಳಿಗೆ ಹಾನಿಯುಂಟಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮುಂಡಗೋಡ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಮುಂದಾಗಬಹುದಾದ ಮತ್ತಷ್ಟು ಅನಾಹುತ ತಪ್ಪಿಸಿದ್ದಾರೆ. 

ಅಂಕೋಲಾ: ಬೈಕ್‌ ಅಪಘಾತ-ತಾಯಿ, ಮಗ ಸ್ಥಳದಲ್ಲೇ ಸಾವು

ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ನಾರಾಯಣ ತಳೇಕರ, ಸಪ್ನಿಲ್‌ ಪೆಡ್ನೇಕರ, ಅಡಿವೆಪ್ಪ ಕುರುವಿನಕೊಪ್ಪ, ದುರ್ಗಪ್ಪ ಹರಿಜನ, ಗುರುಪ್ರಸಾದ ಕಮಲಾಕರ, ಪರಶುರಾಮ ಮಟ್ಟಿಮನಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.