ಮಂಡ್ಯ(ಡಿ.17): ಜೆಡಿಎಸ್ ಭದ್ರಕೋಟೆ ಭೇದಿಸಿದ ಕೆ. ಸಿ. ನಾರಾಯಣ ಗೌಡಗೆ ಹ್ಯಾಟ್ರಿಕ್ ಹೀರೋ ಬಿರುದು ನೀಡಲಾಗಿದೆ. ಸತತ ಮೂರನೇ ಬಾರಿ ಗೆಲುವು ಸಾಧಿಸಿ, ಪ್ರಥಮ ಬಾರಿಗೆ ಕೆ.ಆರ್. ಪೇಟೆಯಲ್ಲಿ ಕಮಲ ಅರಳಿಸಿದ ಕೆಸಿಎನ್‌ ಬಗ್ಗೆ ವರಿಷ್ಠರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ದಳಕೋಟೆ ಭೇದಿಸಿದ ವೀರನಿಗೆ ಹ್ಯಾಟ್ರಿಕ್ ಹೀರೋ ಬಿರುದು ನೀಡಿದ್ದು, ಈಗ ಶಿವರಾಜ್‌ ಕುಮಾರ್ ಮಾತ್ರ ಹ್ಯಾಟ್ರಿಕ್ ಹೀರೋ ಅಲ್ಲ ನೂತನ ಶಾಸಕ ನಾರಾಯಣಗೌಡ ಕೂಡ ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿದ್ದಾರೆ.

'ರೇವಣ್ಣರನ್ನು ಟೀಕಿಸುವ ನೈತಿಕತೆ ನಾರಾಯಣ ಗೌಡರಿಗಿಲ್ಲ..'!

ಸತತ ಮೂರನೇ ಬಾರಿ ಗೆದ್ದ ನಾರಾಯಣಗೌಡ ಅವರಿಗೆ ಹ್ಯಾಟ್ರಿಕ್ ಹೀರೋ ಬಿರುದು ನೀಡಿದ್ದಯ, ಲಕ್ಷ್ಮೀಪುರ ಗ್ರಾಮಸ್ಥರು, ಅಭಿಮಾನಿಗಳಿಂದ ನೂತನ ಶಾಸಕರಿಗೆ ಬಿರುದು ನೀಡಿ ಅಭಿನಂದನೆ ಸಲ್ಲಿಸಲಾಗಿದೆ.

ಜೆಡಿಎಸ್‌‌ನಿಂದ ಎರಡು ಬಾರಿ ಹಾಗೂ ಬಿಜೆಪಿಯಿಂದ ಒಂದು ಬಾರಿ ಶಾಸಕ ಸ್ಥಾನಕ್ಕೆ ಆಯ್ಕೆಯಾಗಿ ದಾಖಲೆ ಬರೆದಿರುವ ನಾರಾಯಣಗೌಡ ಅವರಿಗೆ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ. ಜೆಡಿಎಸ್‌ ಭದ್ರಕೋಟೆಯಲ್ಲಿ ಬಿಜೆಪಿ ಬಾವುಟ ಹಾರಿಸಿದ ಶಾಸಕ ನಾರಾಯಣಗೌಡ ಸಾಧನೆಗೆ ಹ್ಯಾಟ್ರಿಕ್ ಹೀರೋ ಬಿರುದು ನೀಡಿ ಅಭಿನಂದನೆ ಸಲ್ಲಿಸಲಾಗಿದೆ.

BJPಯಿಂದ 50 ಕೋಟಿ, ಮಂತ್ರಿಗಿರಿಯ ಆಫರ್‌ ಬಂದಿತ್ತು ಎಂದ JDS ಶಾಸಕ