ಹಾಸನ(ಸೆ.13): ಹಾಸನ ಹಾಲು ಒಕ್ಕೂಟವನ್ನು ರಾಜ್ಯದಲ್ಲೇ ನಂ.1 ಒಕ್ಕೂಟವನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷರೂ ಆದ ಮಾಜಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದರು.

ಗುರುವಾರ ಡೇರಿ ಆವರಣದಲ್ಲಿ ನಡೆದ 2010-19ನೇ ಸಾಲಿನ ಒಕ್ಕೂಟದ ಸರ್ವದ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲೇ ಸಹಕಾರಿ ಒಕ್ಕೂಟದ ಆಶ್ರಯದಲ್ಲಿ ಐಸ್‌ಕ್ರೀಂ ಘಟಕ ಆರಂಭಿಸಿರುವುದರಲ್ಲಿ ಹಾಸನ ಎರಡನೆಯದು. ಈಗಾಗಲೇ ಒಕ್ಕೂಟಕ್ಕೆ ಹಾಲು ನೀಡುವ ರೈತರ ಬದುಕು ಹಸನಾಗಲು ಬೇಕಾದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

15.15 ಕೋಟಿ ಲಾಭದ ಹಣ ರೈತರಿಗೆ:

ಹಾಸನ ಹಾಲು ಒಕ್ಕೂಟವು 2018-19ನೇ ಸಾಲಿನಲ್ಲಿ .1,130.15 ಕೋಟಿ ವಹಿವಾಟು ನಡೆಸಿದ್ದು, .15.50 ಕೋಟಿ ರು. ಲಾಭ ಗಳಿಸಿದೆ. ಇದನ್ನು ಗ್ರಾಮೀಣ ಪ್ರದೇಶಗಳಲ್ಲಿ ಇರುವ ಹಾಲು ಉತ್ಪಾದಕರ ಸಂಘಗಳಿಗೆ ವಿತರಿಸಲಾಗುವುದು. ಸಂಘಗಳ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ .3.5 ಕೋಟಿ ನೀಡಲಾಗುತ್ತಿದ್ದು, ರಾಸುಗಳ ವೈದ್ಯಕೀಯ ವೆಚ್ಚಕ್ಕಾಗಿ .1.10 ಕೋಟಿ ಹಾಲು ಉತ್ಪಾದಕರಿಗೆ ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರಗಳನ್ನು ಒದಗಿಸಲು .50 ಲಕ್ಷ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

'ಜಿಟಿಡಿ ಬಿಜೆಪಿಗೆ ಅಸ್ಪೃಶ್ಯರಲ್ಲ: BJPಗೆ ಬಂದ್ರೆ ಒಳ್ಳೇದು'..!

ಸಭೆಯಲ್ಲಿ ಒಕ್ಕೂಟದ ನಿರ್ದೇಶಕರಾದ ಎನ್‌.ಸಿ.ನಾರಾಯಣಗೌಡ, ಹೊನ್ನವಳ್ಳಿ ಸತೀಶ್‌, ಜಗದೀಶ್‌, ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಮತ್ತಿತರರು ಇದ್ದರು.