ಹೊಳೆನರಸೀಪುರದ ದರ್ಜಿ ಬೀದಿಯ ಚರಂಡಿಯಲ್ಲಿ ಹತ್ತಾರು ಹಾವುಗಳ ಚರ್ಮ ಮತ್ತು ಅವಶೇಷಗಳು ಪತ್ತೆಯಾಗಿವೆ. ಚರ್ಮ ಸುಲಿದು ಮಾಂಸವನ್ನು ಬೇರ್ಪಡಿಸಿ ಬಿಸಾಡಿರುವುದು ಕಂಡುಬಂದಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಹಾಸನ (ಜ.23): ಹೊಳೆನರಸೀಪುರದಲ್ಲಿ ಬೆಳಕಿಗೆ ಬಂದ ಆಘಾತಕಾರಿ ಘಟನೆ ಸ್ಥಳೀಯರನ್ನು ಆತಂಕಕ್ಕೆ ಗುರಿಮಾಡಿದೆ. ದರ್ಜಿ ಬೀದಿಯಲ್ಲಿ ಬೆಳಗ್ಗೆ ವೇಳೆ ಚರಂಡಿಯಲ್ಲಿ ಪತ್ತೆಯಾದ ಹಾವುಗಳ ಚರ್ಮ ಮತ್ತು ಅವಶೇಷಗಳು ಕಿಡಿಗೇಡಿಗಳ ದುಷ್ಕರ್ಮಿಗಳ ಕೃತ್ಯವನ್ನು ಬಹಿರಂಗಪಡಿಸಿವೆ.
ಹಾವುಗಳ ಚರ್ಮವು ಸುಲಿದು, ಅದರ ಒಳಗಿನ ಮಾಂಸವನ್ನು ಬೇರ್ಪಡಿಸಿ ಬಿಸಾಡಿರುವುದಾಗಿ ವರದಿಯಾಗಿದೆ. ಸ್ಥಳೀಯರು ಈ ಘಟನೆಯನ್ನು ಗಮನಿಸಿದ ನಂತರ, ಈ ಕೃತ್ಯ ಹಾವುಗಳ ಮಾಂಸಕ್ಕಾಗಿ ಚರ್ಮವನ್ನು ಸುಲಿದು ಬಿಸಾಡಿದ ಯಾವುದೇ ವ್ಯಕ್ತಿಯ ಕೆಲಸವಾಗಿರಬಹುದೆಂಬ ಆತಂಕ ಹೆಚ್ಚಾಗಿದೆ. ಹಾಸನ-ಮೈಸೂರು ರಸ್ತೆಯ ದರ್ಜಿ ಬೀದಿಯಲ್ಲಿ ನಡೆದಿರುವ ಈ ಘಟನೆ, ಬೆಳಗ್ಗೆ ವೇಳೆ ಚರಂಡಿಯಲ್ಲಿ ಹಾವುಗಳ ಚರ್ಮ ಪತ್ತೆಯಾದ ಬಳಿಕ ಬಹಿರಂಗವಾಯಿತು. ಸ್ಥಳೀಯ ನಿವಾಸಿಗಳು ಈ ಘಟನೆ ಬಗ್ಗೆ ಪೊಲೀಸರುಗೆ ಮಾಹಿತಿ ನೀಡಿದ್ದಾರೆ. ಜೊತೆಗೆ, ದೈವಿ ಸ್ವರೂಪದಲ್ಲಿ ಪೂಜಿಸುವ ಹಾವುಗಳನ್ನು ಇಷ್ಟು ಭೀಕರವಾಗಿ ಸಾಯಿಸಿ, ಚರ್ಮ ಸುಲಿದು ಬೀಸಾಡಿರುವುದರಿಂದ ಜನರು ಭೀತಿಯಲ್ಲಿದ್ದಾರೆ.
ಈ ಘಟನೆಯು ಹೊಳೆನರಸೀಪುರದಲ್ಲಿ ಭೀತಿಯ ವಾತಾವರಣವನ್ನು ಹುಟ್ಟಿಸಿದೆ. ಪ್ರಸ್ತುತ, ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ, ಈ ಕೃತ್ಯ ಹಿಂದಿನ ಹಿನ್ನೆಲೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಈ ಘಟನೆಯ ಬಗ್ಗೆ ಪರಿಶೀಲನೆ ಮಾಡಿದ ಪೊಲೀಸರು ಯಾರೋ ಕಿಡಿಗೇಡಿಗಳು ಹಾವಿನ ಮಾಂಸಕ್ಕಾಗಿ ಅಥವಾ ಹಾವಿನ ಮಾಂಸಾಹಾರ ಸೇವನೆ ಮಾಡುವವರು ಹಾವುಗಳನ್ನು ಸಾಯಿಸಿ, ಅವುಗಳ ಮಾಂಸವನ್ನು ತೆಗೆದುಕೊಂಡು ಚರ್ಮ ಮತ್ತು ಇತರೆ ಭಾಗಗಳನ್ನು ಚಂಡಿಗೆ ಎಸೆದಿದ್ದಾರೆ.
ಇದನ್ನೂ ಓದಿ: ದಾನ ಕೇಳುವ ನೆಪದಲ್ಲಿ ಕಳ್ಳತನಕ್ಕೆ ಯತ್ನ; ಗ್ರಾಮಸ್ಥರಿಂದ ನಕಲಿ ಸ್ವಾಮೀಜಿಗಳಿಗೆ ಹಿಗ್ಗಾಮುಗ್ಗಾ ಗೂಸಾ!
