ದಾನ ಕೇಳುವ ನೆಪದಲ್ಲಿ ಕಳ್ಳತನಕ್ಕೆ ಯತ್ನ; ಗ್ರಾಮಸ್ಥರಿಂದ ನಕಲಿ ಸ್ವಾಮೀಜಿಗಳಿಗೆ ಹಿಗ್ಗಾಮುಗ್ಗಾ ಗೂಸಾ!
ದಾನ ಕೇಳುವ ನೆಪದಲ್ಲಿ ಒಂಟಿ ಮನೆಗಳಿಗೆ ನುಗ್ಗುತ್ತಿದ್ದ ಕಳ್ಳ ಸ್ವಾಮೀಜಿಗಳ ಗ್ಯಾಂಗ್ ಅನ್ನು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಜೇನುಕಲ್ ಸಿದ್ದೇಶ್ವರ ಕ್ಷೇತ್ರಕ್ಕೆ ದಾನ ಕೇಳುವ ನೆಪದಲ್ಲಿ ಬಂದಿದ್ದ ಐವರು ಕಳ್ಳರನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಾಸನ (ಜ.6): ದಾನ ಕೇಳುವ ನೆಪದಲ್ಲಿ ಕಳ್ಳ ಸ್ವಾಮೀಜಿಗಳು ಒಂಟಿ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳ ಸ್ವಾಮೀಜಿಗಳು, ಮತ್ತವರ ಸಹಚರರನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜೇನುಕಲ್ ಸಿದ್ದೇಶ್ವರ ಕ್ಷೇತ್ರಕ್ಕೆ ದಾನ ಕೋರು ನೆಪದಲ್ಲಿ ಗ್ರಾಮಕ್ಕೆ ಬಂದಿದ್ದ ಇಬ್ಬರು ಕಳ್ಳ ಸ್ವಾಮೀಜಿಗಳು, ಜೊತೆಗೆ ಮೂವರು ಸಹಚರರನ್ನು ಕರೆತಂದಿದ್ದಾರೆ. ಗ್ರಾಮದಲ್ಲಿ ಮನೆಮನೆಗೆ ತೆರಳಿ ಜೇನುಕಲ್ ಕ್ಷೇತ್ರಕ್ಕೆ ದಾನ ನೀಡುವಂತೆ ಕೋರುವ ನೆಪದಲ್ಲಿ ಗ್ರಾಮದಲ್ಲಿನ ಒಂಟಿ ಮನೆಗಳಿಗೆ ನುಗ್ಗಿದ್ದ ಕಾವಿಧಾರಿಗಳ ಗ್ಯಾಂಗ್.
ಮದುವೆಯಾದ 6 ತಿಂಗಳಿಗೇ ಶೀಲ ಶಂಕಿಸಿ ನಿತ್ಯ ಕಿರುಕುಳ; ತವರಿಗೆ ಹೋಗಿದ್ದ ಪತ್ನಿಯನ್ನ ಕರೆತಂದು ಕತೆ ಮುಗಿಸಿದ ಪಾಪಿ ಗಂಡ!
ಎಚ್ಚೆತ್ತ ಮಹಿಳೆ:
ಅದೇ ರೀತಿ ತೋಟದ ಮನೆಯಲ್ಲಿರುವ ದಾನಶೇಖರಪ್ಪ ಅವರ ಒಂಟಿ ಮನೆಗೆ ದಿಡೀರ್ ನುಗ್ಗಿದ್ದ ಐವರು. ನಾವು ಜೇನುಕಲ್ ಸಿದ್ದೇಶ್ವರಸ್ವಾಮಿ ಮಠದವರಾಗಿದ್ದು, ಹೆಚ್ಚಿನ ಧನ ಸಹಾಯ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅನುಮಾನಗೊಂಡು ತಕ್ಷಣವೆ ಎಚ್ಚೆತ್ತ ಮಹಿಳೆ ಗ್ರಾಮಸ್ಥರಿಗೆ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು. ಸ್ಥಳೀಯರು ಬರುತ್ತಿದ್ದಂತೆ ಕಳ್ಳ ಸ್ವಾಮೀಜಿಗಳ ಗ್ಯಾಂಗ್ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಇಬ್ಬರು ನಕಲಿ ಸ್ವಾಮೀಜಿ ಸೇರಿ ಐವರನ್ನು ಹಿಡಿದು ಗ್ರಾಮಸ್ಥರು ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಹಣದ ಸಮೇತ ಗ್ರಾಮಸ್ಥರು ಐವರನ್ನು ಪೊಲೀಸರಿಗೊಪ್ಪಿಸಿದ್ದಾರೆ.
ಹಾಸನ: ಹೊಸ ವರ್ಷದ ಪಾರ್ಟಿ ವೇಳೆಯೇ ಪ್ರಿಯಕರನಿಗೆ ಚಾಕು ಇರಿದ ಪ್ರೇಯಸಿ
ಕಳೆದ ವರ್ಷ ನವೆಂಬರ್ 3 ರಂದು ಇದೇ ಗ್ಯಾಂಗ್ ಕಲ್ಲುಂಡಿ ಗ್ರಾಮಕ್ಕೆ ಭಿಕ್ಷೆ ಕೇಳುವ ನೆಪದಲ್ಲಿ ಬಂದಿದ್ದರು. ಆಗ ಪಿಸ್ತೂಲ್ ತೋರಿಸಿ ಪರಾರಿಯಾಗಿದ್ದರು. ಇದೀಗ ನಗದು ಸಹಿತ ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರು ಹಿಗ್ಗಾಮುಗ್ಗಾ ಗೂಸಾ ಕೊಟ್ಟು ಬಾಣಾವಾರ ಪೊಲೀಸರಿಗೊಪ್ಪಿಸಿದ್ದಾರೆ. ವಶಕ್ಕೆ ಪಡೆದಿರುವ ಪೊಲೀಸರು ಐವರನ್ನು ಎಲ್ಲ ಆಯಾಮಗಳಲ್ಲಿ ವಿಚಾರಣೆಗೊಳಪಡಿಸಿದ್ದಾರೆ. ಎಷ್ಟು ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಯಾರಾರ ಮನೆಯಲ್ಲಿ ಕಳ್ಳತನ, ಭಿಕ್ಷೆ ನೆಪದಲ್ಲಿ ದರೋಡೆ ಮಾಡಿದ್ದಾರೆ ವಿಚಾರಣೆ ಬಳಿಕ ತಿಳಿಯಲಿದೆ.