Asianet Suvarna News Asianet Suvarna News

ಚಾಮರಾಜನಗರ ಕ್ಷೇತ್ರಕ್ಕೆ ಹರ್ಷವರ್ಧನ್‌ ಸೂಕ್ತ ಅಭ್ಯರ್ಥಿ : ವಿಶ್ವಮಾನವ ವೇದಿಕೆ

ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಬಿ. ಹರ್ಷವರ್ಧನ್‌ಸೂಕ್ತ ಅಭ್ಯರ್ಥಿ ಎಂದು ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ಅಭಿಪ್ರಾಯಪಟ್ಟಿದೆ.

Harsh Vardhan is the ideal candidate for Chamarajanagar Constituency: Vishwamanava Vodhya snr
Author
First Published Feb 24, 2024, 10:56 AM IST

 ಮೈಸೂರು :  ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಬಿ. ಹರ್ಷವರ್ಧನ್‌ಸೂಕ್ತ ಅಭ್ಯರ್ಥಿ ಎಂದು ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ಅಭಿಪ್ರಾಯಪಟ್ಟಿದೆ.

ಮೂಲತಃ ಬೆಂಗಳೂರಿನವರಾದರೂ, ಮೈಸೂರು ಮತ್ತು ಚಾಮರಾಜನಗರದ ಜನತೆಗೆ ಅಚ್ಚುಮೆಚ್ಚು. ನಂಜನಗೂಡು ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಅವರು ಕೊರೋನಾ ಸಂದರ್ಭದಲ್ಲಿ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದ್ದಾರೆ ಎಂದು ಸುರೇಶ್‌ ಗೌಡ ತಿಳಿಸಿದ್ದಾರೆ.

ಅನೇಕರಿಗೆ ತಮ್ಮ ಕೈಲಾದ ನೆರವು ನೀಡಿದ್ದಾರೆ. 823 ಕೋಟಿ ಅನುದಾನ ತಂದು ನಂಜನಗೂಡಿನಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆ ಜಾರಿಗೊಳಿಸಿದ್ದಾರೆ. ನುಗು ನೀರಾವರಿ ಯೋಜನೆ, ಬೆಳ್ಳಿ ರಥ, ರೇಲ್ವೆ ಸೇತುವೆ, ಬೈಪಾಸ್‌ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ಹೀಗೆ ಸಾಕಷ್ಟು ಕಾರ್ಯಕ್ರಮಗಳ ಜತೆಗೆ, ದಲಿತರು, ವಿದ್ಯಾರ್ಥಿಗಳು, ಬಡವರು, ರೈತರ ಸಮಸ್ಯೆಗೆ ಕೂಡಲೇ ಸ್ಪಂದಿಸಿದ್ದಾರೆ.

ಸಂಶೋಧನಾ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಗೆ ಬರುವ ಎಸ್‌.ಸಿ.ಪಿ., ಟಿಎಸ್‌.ಪಿ ಅನುದಾನವನ್ನು ವಿವಿಗಳಿಗೂ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ.

Follow Us:
Download App:
  • android
  • ios