Asianet Suvarna News Asianet Suvarna News

ಸುಮಲತಾ ರಾಜ್ಯಕಾರಣ ಪ್ರವೇಶಕ್ಕೆ ವೇದಿಕೆ ಸಿದ್ಧ?

ಸುಮಲತಾ ಸೂಚನೆಯಂತೆ ಅವರ ಬೆಂಬಲಿಗರು, ಅಭಿಮಾನಿಗಳು ಮಂಗಳವಾರ ಮಂಡ್ಯದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸಭೆ ನಡೆಸಿ ರಾಜ್ಯ ರಾಜಕಾರಣಕ್ಕೆ ಸುಮಲತಾ ಮರಳುವಂತೆ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.

Mandya MP Sumalatha Ambareesh Likely Come  to Karnataka Politics grg
Author
First Published Feb 1, 2023, 3:39 AM IST

ಮಂಡ್ಯ(ಫೆ.01): ರಾಜ್ಯ ರಾಜಕಾರಣದ ಮೇಲೆ ಕಣ್ಣಿಟ್ಟಂತಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ತಮ್ಮ ಆಪ್ತರ ಮೂಲಕ ಅಭಿಪ್ರಾಯ ಸಂಗ್ರಹಿಸುವುದಕ್ಕೆ ಮುಂದಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಒಲವು ತೋರಿರುವ ಅವರು ಮಂಡ್ಯ ಅಥವಾ ಮದ್ದೂರು ಕ್ಷೇತ್ರಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ.

ಸುಮಲತಾ ಸೂಚನೆಯಂತೆ ಅವರ ಬೆಂಬಲಿಗರು, ಅಭಿಮಾನಿಗಳು ಮಂಗಳವಾರ ಮಂಡ್ಯದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸಭೆ ನಡೆಸಿ ರಾಜ್ಯ ರಾಜಕಾರಣಕ್ಕೆ ಸುಮಲತಾ ಮರಳುವಂತೆ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.

Pratham Paryatane : ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಮುಂಚುಣಿಯಲ್ಲಿದೆ: ಮಂಡ್ಯದ ಮತದಾರ ಹೇಳಿದ್ದೇನು?

ಪ್ರಸ್ತುತ ಸನ್ನಿವೇಶದಲ್ಲಿ ಸುಮಲತಾ ರಾಜ್ಯ ರಾಜಕಾರಣಕ್ಕೆ ಬರಬೇಕೆಂಬ ನಿರ್ಣಯ ಕೈಗೊಂಡಿರುವ ಬೆಂಬಲಿಗರು ಯಾವ ಪಕ್ಷ ಸೇರಬೇಕೆಂಬ ನಿರ್ಧಾರವನ್ನು ಅವರಿಗೇ ಬಿಟ್ಟಿದ್ದಾರೆ. ಅವರು ಯಾವುದೇ ಪಕ್ಷ ಸೇರಿದರೂ ಬೆಂಬಲಿಸುವುದಕ್ಕೆ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ಈ ವಿಚಾರವಾಗಿ ಮುಚ್ಚಿದ ಲಕೋಟೆಯಲ್ಲಿ ತಮ್ಮ ಒಟ್ಟಾಭಿಪ್ರಾಯವನ್ನು ಸುಮಲತಾ ಅವರಿಗೆ ಸಲ್ಲಿಸಲು ನಿರ್ಧರಿಸಿದ್ದಾರೆ.

ಪಕ್ಷ ಯಾವುದು?:

ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾಗಿರುವ ಸುಮಲತಾ ಅಂಬರೀಷ್‌ ಈವರೆಗೂ ಯಾವ ರಾಜಕೀಯ ಪಕ್ಷ ಸೇರುತ್ತೇನೆ ಎನ್ನುವುದನ್ನು ಖಚಿತಪಡಿಸಿಲ್ಲ. 2019ರ ಚುನಾವಣೆಯಲ್ಲಿ ನಾನಾ ಕಾರಣಗಳಿಂದ ಸುಮಲತಾ ಅಂಬರೀಷ್‌ ಅವರಿಗೆ ಬೆಂಬಲವಾಗಿ ನಿಂತು ಗೆಲ್ಲಿಸಿದ್ದ ಕಾಂಗ್ರೆಸ್‌ ಹಾಗೂ ಬಿಜೆಪಿ ಅಂಬರೀಷ್‌ ಮೇಲಿನ ಗೌರವ ಭಾವನೆಯಿಂದ ಈವರೆಗೂ ಅವರ ನಡೆ ಕಾದುನೋಡಿದ್ದವು. ಸುಮಲತಾ ಅನುಸರಿಸಿದ ವಿಳಂಬ ಧೋರಣೆಯಿಂದ ಆ ಪಕ್ಷಗಳೂ ಅವರ ಸೇರ್ಪಡೆಗೆ ಹೆಚ್ಚಿನ ಆಸಕ್ತಿ ತೋರಿಸದೆ ದೂರವೇ ಉಳಿದಿವೆ ಎಂಬ ಮಾತುಗಳು ವ್ಯಕ್ತವಾಗುತ್ತಿವೆ.

ಕಾಂಗ್ರೆಸ್‌ನದು ಪ್ರಜಾ ಗೋವಿಂದ ಯಾತ್ರೆ: ಸಚಿವ ಅಶ್ವತ್ಥ ನಾರಾಯಣ್‌

2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿದ್ದ ರಾಜಕೀಯ ವಾತಾವರಣ, ಪರಿಸ್ಥಿತಿ, ಸನ್ನಿವೇಶಗಳು ಬೇರೆಯಾಗಿದ್ದವು. ಸದ್ಯ ಜಿಲ್ಲೆಯೊಳಗಿನ ರಾಜಕೀಯ ಚಿತ್ರಣವೇ ಬೇರೆ. ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧಿಸಿ ಸುಲಭವಾಗಿ ಗೆಲ್ಲುವುದು ಕಷ್ಟವಾಗಬಹುದು. ಹೀಗಾಗಿ ಈಗ ಯಾವುದಾದರೂ ಒಂದು ಪಕ್ಷ ಸೇರುವುದು ಸುಮಲತಾ ಅವರಿಗೂ ಅನಿವಾರ್ಯ. ಇಲ್ಲದಿದ್ದರೆ ಅವರ ರಾಜಕೀಯ ಭವಿಷ್ಯ ಮಸುಕಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.

ಸುಮಲತಾ ಬಂದರೆ ಮಂಡ್ಯ ಬಿಜೆಪಿಗೆ ಬಲ

ಸುಮಲತಾ ಅವರು ಬಿಜೆಪಿಗೆ ಬರುವುದಾದರೆ ಮಂಡ್ಯದಲ್ಲಿ ಬಿಜೆಪಿಗೆ ಬಲ ಬರಲಿದೆ. ಇದರಿಂದ ಅವರಿಗೂ ಒಳ್ಳೆಯದಾಗಲಿದೆ. ಸಚಿವ ಅಶೋಕ್‌ ಅವರು ಸುಮಲತಾ ಜತೆ ಸಂಪರ್ಕದಲ್ಲಿರಬಹುದು ಅಂತ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ. 

Follow Us:
Download App:
  • android
  • ios