Asianet Suvarna News Asianet Suvarna News

ಕಿತ್ತಳೆ ಮಾರಿ ಶಾಲೆ ಕಟ್ಟಿದ ಅಕ್ಷರ ಸಂತ ಈಗ ಫುಲ್ ಬ್ಯುಸಿ

ಪದ್ಮಶ್ರೀ ಪ್ರಶಸ್ತಿ ಪ್ರಕಟಗೊಂಡ ಬಳಿಕ ಹಾಜಬ್ಬರಿಗೆ ಪುರುಸೋತ್ತು ಎಂಬುದಿಲ್ಲ. ನಿತ್ಯವೂ ಬ್ಯೂಸಿ ಶೆಡ್ಯೂಲ್‌. ಪ್ರಶಸ್ತಿ ಘೋಷಿಸಿದ ದಿನದ ರಾತ್ರಿಯಿಂದಲೇ ಹಾಜಬ್ಬರ ಮನೆಗೆ ಮಾಧ್ಯಮ ಸಹಿತ ಶುಭ ಹಾರೈಸುವವರ ದಂಡೇ ಬರುತ್ತಿದೆ.

Harekala Hajabba busy after padmashri award announced
Author
Bangalore, First Published Jan 30, 2020, 8:24 AM IST

ಮಂಗಳುರು(ಜ.30): ಪದ್ಮಶ್ರೀ ಪ್ರಶಸ್ತಿ ಪ್ರಕಟಗೊಂಡ ಬಳಿಕ ಹಾಜಬ್ಬರಿಗೆ ಪುರುಸೋತ್ತು ಎಂಬುದಿಲ್ಲ. ನಿತ್ಯವೂ ಬ್ಯೂಸಿ ಶೆಡ್ಯೂಲ್‌. ಪ್ರಶಸ್ತಿ ಘೋಷಿಸಿದ ದಿನದ ರಾತ್ರಿಯಿಂದಲೇ ಹಾಜಬ್ಬರ ಮನೆಗೆ ಮಾಧ್ಯಮ ಸಹಿತ ಶುಭ ಹಾರೈಸುವವರ ದಂಡೇ ಬರುತ್ತಿದೆ.

ಹಾಜಬ್ಬ ಈಗ ಬ್ಯೂಸಿ ಶೆಡ್ಯೂಲ್‌!

ಪದ್ಮಶ್ರೀ ಪ್ರಶಸ್ತಿ ಪ್ರಕಟಗೊಂಡ ಬಳಿಕ ಹಾಜಬ್ಬರಿಗೆ ಪುರುಸೋತ್ತು ಎಂಬುದಿಲ್ಲ. ನಿತ್ಯವೂ ಬ್ಯೂಸಿ ಶೆಡ್ಯೂಲ್‌. ಪ್ರಶಸ್ತಿ ಘೋಷಿಸಿದ ದಿನದ ರಾತ್ರಿಯಿಂದಲೇ ಹಾಜಬ್ಬರ ಮನೆಗೆ ಮಾಧ್ಯಮ ಸಹಿತ ಶುಭ ಹಾರೈಸುವವರ ದಂಡೇ ಬರುತ್ತಿದೆ.

ಹಾಜಬ್ಬರ ಮೊಬೈಲ್‌ಗೂ ಕೂಡ ಈಗ ಬಿಡುವಿಲ್ಲ. ಪದೇ ಪದೇ ಕರೆಗಳು ಬರುತ್ತಲೇ ಇರುತ್ತವೆ. ಇದಕ್ಕೆಲ್ಲ ಹಾಜಬ್ಬರು ಸಾವಧಾನದಿಂದಲೇ ಉತ್ತರಿಸುತ್ತಾರೆ. ಪ್ರಶಸ್ತಿ ಲಭಿಸುತ್ತಿರುವ ಹಿನ್ನೆಲೆಯಲ್ಲಿ ಹಾಜಬ್ಬರನ್ನು ಗೌರವಿಸಲು ಕರೆಯುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಇದರಿಂದಾಗಿ ಫೆಬ್ರವರಿ ಪ್ರಥಮ ವಾರ ವರೆಗೆ ಹಾಜಬ್ಬರು ಬುಕ್‌ ಆಗಿ ಬಿಟ್ಟಿದ್ದಾರೆ.

ಬಾಂಬರ್ ಆದಿತ್ಯ ಬೆಂಗಳೂರಿಗೆ, ಸೈಬರ್ ಕ್ರೈಂ ಬಗ್ಗೆ ಮತ್ತಷ್ಟು ತನಿಖೆ

ಹಳ್ಳಿ ಪ್ರದೇಶ ಹರೇಕಳದಿಂದ ಮಂಗಳೂರಿಗೆ ಬರಬೇಕಾದರೆ, ಈಗ ಹಾಜಬ್ಬರನ್ನು ಮಾತನಾಡಿಸದವರೂ ಮಾತನಾಡಿಸುತ್ತಾರಂತೆ. ಕೆಲವು ಮಂದಿ ಆಟೋ ಚಾಲಕರು ಬಾಡಿಗೆ ರಹಿತವಾಗಿ ಕರೆದುಕೊಂಡು ಹೋಗುತ್ತಿದ್ದಾರಂತೆ. ಕೆಲವು ಹೊಟೇಲ್‌ಗಳಲ್ಲೂ ಹಾಜಬ್ಬರಿಗೆ ಹಣ ಬೇಡ ಎಂದು ನಯವಾಗಿ ಹೇಳುತ್ತಿದ್ದಾರಂತೆ. ಆದರೆ ಬೇರೆಯವರೊಂದಿಗೆ ಆತಿಥ್ಯ ಸ್ವೀಕರಿಸಲು ಸಂಕೋಚಪಡುವ ಹಾಜಬ್ಬರು, ಹೊಟೇಲ್‌ನವರು ನಿರಾಕರಿಸಿದರೂ ದುಡ್ಡುಕೊಟ್ಟೇ ಮುಂದೆ ತೆರಳುತ್ತಾರೆ.

ಹಾಜಬ್ಬರನ್ನು ಮಂಗಳವಾರ ಮಂಗಳೂರು ಆಕಾಶವಾಣಿ ಸಂದರ್ಶನ ಮಾಡಿದೆ. ನಾನಾ ಕಡೆಗಳಿಂದ ಮಾಧ್ಯಮ ಮಂದಿ ಹಾಜಬ್ಬರನ್ನು ಹುಡುಕಿಕೊಂಡು ಮನೆ ಬಾಗಿಲಿಗೆ ಬರುತ್ತಿದ್ದಾರೆ. ಇಷ್ಟೆಲ್ಲ ಪ್ರಸಿದ್ಧಿಪಡೆದರೂ ಹಾಜಬ್ಬ ಮಾತ್ರ ಬದಲಾಗಿಲ್ಲ, ಅದೇ ಬಿಳಿ ಅಂಗಿ, ಅದೇ ಸಾಮಾನ್ಯ ಬಿಳಿ ಪಂಚೆಯಲ್ಲಿ ಕಾಣಸಿಗುತ್ತಾರೆ!

Follow Us:
Download App:
  • android
  • ios