ಚಿಕ್ಕಮಗಳೂರು (ಮೇ.23): ದಲಿತ ಯುವಕನ ಮೇಲೆ ದೌರ್ಜನ್ಯ ಎಸಗಿ ಮೂತ್ರ ಕುಡಿಸಿದ ಆರೋಪ ಹಿನ್ನೆಲೆ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸೈ ಅರ್ಜುನ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ  ಕಿರುಗುಂದ ಗ್ರಾಮದ ಯುವಕ ಪುನೀತ್ ನೀಡಿರುವ ದೂರಿನನ್ವಯ ಇಲ್ಲಿನ ಪಿಎಸ್‌ಐ ಅರ್ಜುನ್ ವಿರುದ್ಧ ಇಂದು ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.  

ವಿವಾಹಿತ ಮಹಿಳೆಗೆ ಪುನೀತ್ ಪೋನ್ ಮಾಡಿದ್ದಾನೆಂಬ ಆರೋಪದ ಅಡಿಯಲ್ಲಿ ಆತನನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದ ಪಿಎಸ್‌ಐ ಅರ್ಜುನ್  ಜಾತಿನಿಂದನೆ ಮಾಡಿ, ಮೂತ್ರ ಕುಡಿಸಿದ್ದಾಗಿ ಗಂಭೀರ ಆರೋಪ ಮಾಡಲಾಗಿತ್ತು. 

ಹಸಿದ ನಿರ್ಗತಿಕ ಮಕ್ಕಳಿಗೆ ತನ್ನ ಊಟವನ್ನೇ ಕೊಟ್ಟ ಪೊಲೀಸ್‌! .

ಈ ಸಂಬಂಧ ಪಿಎಸ್‌ಐ ಅರ್ಜುನ್ ವಿರುದ್ದ ಪುನೀತ್ ದೂರು ನೀಡಿದ್ದು, ಈ ದೂರು ಆಧರಿಸಿ  ಐಪಿಸಿ ಸೆಕ್ಷನ್342, 323, 504, 506, 330, 348 ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.