Asianet Suvarna News Asianet Suvarna News

ಕಾಂಗ್ರೆಸ್‌ ಸರ್ಕಾರ ಕ್ಷಣ ಮಾತ್ರದ್ದು: ಹನುಮಂತೇಗೌಡ

ರಾಜ್ಯ ಕಾಂಗ್ರೆಸ್‌ ಸರ್ಕಾರ ಕ್ಷಣ ಮಾತ್ರದ ಸರ್ಕಾರ ಎಂದು ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ ತಿಳಿಸಿದರು.

  Hanumanthegowda  slams Congress Govt snr
Author
First Published Jan 30, 2024, 11:22 AM IST | Last Updated Jan 30, 2024, 11:22 AM IST

ಮಧುಗಿರಿ: ರಾಜ್ಯ ಕಾಂಗ್ರೆಸ್‌ ಸರ್ಕಾರ ಕ್ಷಣ ಮಾತ್ರದ ಸರ್ಕಾರ ಎಂದು ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ ತಿಳಿಸಿದರು.

ಇಲ್ಲಿನ ಡೂಂಲೈಟ್‌ ಸರ್ಕಲ್‌ನಲ್ಲಿ ಸೋಮವಾರ ಬಿಜೆಪಿ, ಜೆಡಿಎಸ್‌ನಿಂದ ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ಹನುಮಧ್ವಜ ಇಳಿಸಿದ್ದನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಭಾನುವಾರ ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಹನುಮಾನ್‌ ಧ್ವಜ ಇಳಿಸಿದ್ದಾರೆ. ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಪೂಜೆ ನಡೆಯುತ್ತಿದೆ. ಕೆರೆಗೋಡು ಗ್ರಾಮದಲ್ಲಿ ಹನುಮಾನ್‌ ಧ್ವಜ ಸರ್ಕಾರಿ ಜಾಗದಲ್ಲಿ ಇರಲಿಲ್ಲ. ರಾಮಮಂದಿರದ ಪಕ್ಕದಲ್ಲಿ ಧ್ವಜಸ್ತಂಭವಿದ್ದು, ಇಲ್ಲಿ ಹನುಮಾನ್‌ ಧ್ವಜ ಹಾರಿಸಲು ಹೋದರೆ ಪೋಲಿಸರು ತಡೆದಿದ್ದಾರೆ.ರಾಜ್ಯದಲ್ಲಿ ಕೋಟ್ಯಂತರ ಜನರು ರಾಮಭಕ್ತರಿದ್ದಾರೆ.ಬಿಜೆಪಿ ಕಾರ್ಯಕರ್ತರು ಹೇಡಿಗಳಲ್ಲ, ವೀರರು, ರಾಮಭಕ್ತರಾಗಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕಿವಿಗೊಡಬೇಕು. ಈ ಕೂಡಲೇ ಹನುಮಧ್ವಜ ಎಲ್ಲಿಂದ ತೆರವುಗೊಳಿಸಲಾಯಿತೋ ಅದೇ ಸ್ಥಳದಲ್ಲಿ ಮತ್ತೆ ಧ್ವಜ ಹಾರಾಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ಬಸವರಾಜು, ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್‌ ಬಿದನಗೆರೆ, ಪೋಲಿಸರ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು. ಪ್ರತಿಭಟನೆಯಲ್ಲಿ ಕೊರಟಗೆರೆ ಬಿಜೆಪಿ ಅಧ್ಯಕ್ಷ ಪವನ್‌ ಕುಮಾರ್‌, ನಿವೃತ್ತ ಐಎಎಸ್‌ ಅಧಿಕಾರಿ ಅನಿಲ್‌ ಕುಮಾರ್‌, ಪಾವಗಡ ತಾಲೂಕು ಅಧ್ಯಕ್ಷ ರವಿಶಂಕರ್‌ ನಾಯ್ಕ್, ಜೆಡಿಎಸ್‌ ಪುರಸಭಾ ಸದಸ್ಯ ಎಂ.ಎಸ್‌. ಚಂದ್ರಶೇಖರ್‌ಬಾಬು, ಕೆ. ನಾರಾಯಣ್‌, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಲತಾ ಪ್ರದೀಪ್‌, ಮುಖಂಡರಾದ ಸುರೇಶ್‌, ಕಂಬದರಂಗಯ್ಯ, ರವಿ ಪಾವಗಡ, ಮೋಹನ್‌ ಕುಮಾರ್‌, ರುದ್ರೇಶ್‌, ಸುರೇಶ್‌, ಚಂದ್ರ, ರಮೇಶ್‌, ಕಾರ್ತಿಕ್‌ ಆರಾಧ್ಯ, ಬಿ.ಎಸ್‌. ಶ್ರೀನಿವಾಸ್‌, ತೇಜಸ್‌ಗೌಡ ಸೇರಿದಂತೆ ಅನೇಕರಿದ್ದರು.

ಮೋದಿ ಗೆದ್ದರೆ ಎಲೆಕ್ಷನ್ ಇರಲ್ಲ

ಭುವನೇಶ್ವರ (ಜನವರಿ 30, 2024): ಪ್ರಜಾಪ್ರಭುತ್ವವನ್ನ ಉಳಿಸಿಕೊಳ್ಳಲು 2024ರಲ್ಲಿ ನಡೆಯುವ ಚುನಾವಣೆಯೇ ದೇಶದ ಜನರಿಗಿರುವ ಕೊನೆಯ ಅವಕಾಶ. ಒಂದು ವೇಳೆ ಈ ಚುನಾವಣೆಯಲ್ಲೂ ಮೋದಿ ಜಯಗಳಿಸಿದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಚುನಾವಣೆಯೇ ಇರುವುದಿಲ್ಲ, ಸರ್ವಾಧಿಕಾರ ಆರಂಭವಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಸೋಮವಾರ ಇಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಬಿಜೆಪಿ ಮತ್ತು ಅವರ ಸಿದ್ದಾಂತವಾದಿಗಳಾದ ಆರ್‌ಎಸ್‌ಎಸ್‌ನವರು ಒಂದು ರೀತಿ ವಿಷವಿದ್ದಂತೆ ಹಾಗಾಗಿ ಜನ ಅವರಿಂದ ದೂರವಿರಬೇಕು. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಇದು ಜನರಿಗಿರುವ ಕೊನೆ ಆಯ್ಕೆಯಾಗಿದೆ ಎಂದು ಹೇಳಿದರು.

ಇದನ್ನು ಓದಿ: ವಿದ್ಯಾರ್ಥಿ, ಯುವಜನರಲ್ಲಿ ಕೌಶಲ್ಯ ವೃದ್ಧಿಸಿ: ಮಲ್ಲಿಕಾರ್ಜುನ ಖರ್ಗೆ ಕಿವಿಮಾತು!

ಇದೇ ವೇಳೆ ಇಂಡಿಯಾ ಮೈತ್ರಿಕೂಟವನ್ನು ತೊರೆದ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಬ್ಬ ವ್ಯಕ್ತಿ ಪಕ್ಷ ತೊರೆಯುವುದರಿಂದ ನಾವು ದುರ್ಬಲಗೊಳ್ಳುವುದಿಲ್ಲ. ನಾವು ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ನಿತೀಶ್‌ ನಿರ್ಗಮನ: ಇಂಡಿಯಾ ಕೂಟಕ್ಕೆ ಆಘಾತ; ಸೀಟು ಹಂಚಿಕೆಗೆ ಕಾಂಗ್ರೆಸ್‌ಗೆ ತಲೆನೋವು!

Latest Videos
Follow Us:
Download App:
  • android
  • ios