Hampi Utsav: ಗತವೈಭವ ಸಾರಿದ ಸಾಂಸ್ಕೃತಿಕ ಕಾರ್ಯಕ್ರಮ: ಕುಣಿದು ಕುಪ್ಪಳಿಸಿದ ಜನರು
ವಿಜಯನಗರ (ಜ.29) : ಮೊದಲ ದಿನ ಪ್ರೇಕ್ಷಕರ ಕೊರತೆ ಅನುಭವಿಸಿದ್ದ ಹಂಪಿ ಉತ್ಸವದಲ್ಲಿ ಶನಿವಾರ ಸಾಗರೋಪಾದಿಯಲ್ಲಿ ಜನರು ಹರಿದು ಬರೋ ಮೂಲಕ ತಡರಾತ್ರಿವರೆಗೂ ನಡೆದ ಕಾರ್ಯಕ್ರಮದಲ್ಲಿ ಹುಚ್ಚದ್ದು, ಕುಣಿದರು. ಸೂರ್ಯಾಸ್ತ ಸಮೀಪಿಸತ್ತಿದ್ದಂತೆ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತ ವೈಭವ ನೆನಪಿಸುವಂತ ಕಾರ್ಯಕ್ರಮಗಳು ಜನಮಾನಸದಲ್ಲಿ ಉಳಿಯುವಂತೆ ಮಾಡಿದವವು.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ವಿಜಯನಗರ (ಜ.29) : ಮೊದಲ ದಿನ ಪ್ರೇಕ್ಷಕರ ಕೊರತೆ ಅನುಭವಿಸಿದ್ದ ಹಂಪಿ ಉತ್ಸವದಲ್ಲಿ ಶನಿವಾರ ಸಾಗರೋಪಾದಿಯಲ್ಲಿ ಜನರು ಹರಿದು ಬರೋ ಮೂಲಕ ತಡರಾತ್ರಿವರೆಗೂ ನಡೆದ ಕಾರ್ಯಕ್ರಮದಲ್ಲಿ ಹುಚ್ಚದ್ದು, ಕುಣಿದರು. ಸೂರ್ಯಾಸ್ತ ಸಮೀಪಿಸತ್ತಿದ್ದಂತೆ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತ ವೈಭವ ನೆನಪಿಸುವಂತ ಕಾರ್ಯಕ್ರಮಗಳು ಜನಮಾನಸದಲ್ಲಿ ಉಳಿಯುವಂತೆ ಮಾಡಿದವವು.
ಎದುರು ಬಸವಣ್ಣ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮತ್ತೆ ಮರುಕಳಿಸಿತು. ಹಂಪಿ ಉತ್ಸವ(Hampi Utsav) ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಕಲಾವಿದರು ಗಂಧರ್ವಲೋಕವನ್ನು ಸೃಷ್ಟಿಸಿದರು.
Hampi Utsav 2023: ಹಂಪಿ ಉತ್ಸವದಲ್ಲಿ ಸಾಹಸ ಕ್ರೀಡೆಗಳ ಕಲರವ, ಕೆರೆಯಲ್ಲಿ ಪ್ರವಾಸಿಗರ ಜಾಲಿರೈಡ್
ಹಗರಬೊಮ್ಮನಹಳ್ಳಿ ಮಹಾಂತೇಶ್ ಹಾಗೂ ಅವರ ತಂಡ 'ಸಂಗೋಳ್ಳಿ ರಾಯಣ್ಣ' 'ಚಲ್ಲಿದರು ಮಲ್ಲಿಗೆಯ' ಹಾಗೂ ರೈತ ಗೀತೆಯನ್ನು ಪ್ರಸ್ತುತ ಪಡಿಸಿದರು. ಉತ್ತರ ಕನ್ನಡ ಜಿಲ್ಲೆಯ ಅನ್ನಪೂರ್ಣೇಶ್ವರಿ ಅಂಧರ ಗೀತೆ ಗಾಯನ ಸಂಘದ ಕಲಾವಿದರು 'ನಮ್ಮಮ್ಮ ಶಾರದೆ' ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಕುರಿತ ಗೀತೆ, ಹಾಗೂ 'ಕಾಣದ ಕಡಲಿಗೆ' ಗೀತೆಗಳನ್ನು ಹಾಡಿ ಗಮನ ಸೆಳೆದರು.
ಮೈಮರೆಸಿದ ಶಹನಾಯಿ ನಾದ
ಹಾವೇರಿಯ ಪಂಡಿತ್ ಟಿ.ಬಿ.ಬಸವರಾಜ ಭಜಂತ್ರಿ ಹಾಗೂ ಪರುಶುರಾಮ ಹನುಮಂತಪ್ಪ ಭಜಂತ್ರಿ ಅವರ ಶಹನಾಯಿ ನಾದ ಕೇಳುಗರನ್ನು ಸನ್ಮೋಹನಗೊಳಿಸಿತು. ಧಾರವಾಡದ ಡಾ.ಪ್ರಸನ್ನ ಗುಡಿಯ ಅವರ ಹಂಪಿಯ ಐತಿಹ್ಯ ಸಾರುವ ಗೀತೆ 'ಹಂಪಿ ವಿರೂಪಾಕ್ಷ ವಿಜಯನಗರ ಯಂತ್ರೋಧಾರ ಹನುಮ' ಶಾಸ್ತ್ರೀಯ ಗೀತೆ ಜನರ ಮೆಚ್ಚುಗೆ ಗಳಿಸಿತು.
ಶಿವಮೊಗ್ಗದ ಬಿ.ವಿ.ವಿಜಯಲಕ್ಷ್ಮಿ ಅವರ ವೀಣಾ ವಾದನ, ಮಧುಸೂಧನ ಅವರ ಸಂಗೀತ,ಮೈಸೂರಿನ ಮೇಲುಕೋಟೆ ಸಾಗರ ಅವರ ಸ್ಯಾಕ್ಸಫೋನ್, ಚಿತ್ರದುರ್ಗ ಕೆ.ಓ ಶಿವಣ್ಣ ಹಾಗೂ ಸುಂಕೇಶ್.ಎಂ, ಧಾರವಾಡದ ಸೌಮ್ಯ ಡೊಳ್ಳಿನ ಹಾಗೂ ವಿಜಯಪುರದ ಡಾ.ಹರೀಶ್ ಹೆಗಡೆ ಅವರ ಸುಗಮ ಸಂಗೀತ ಕೇಳುಗರ ಮೈಮರೆಸಿತು.
ಮಕ್ಕಳು ಮನಸೂರೆಗೊಂಡ ಕಿಂದರ ಜೋಗಿ ನೃತ್ಯ ರೂಪಕ
ಬೆಂಗಳೂರಿನ ರಂಗಕಹಳೆ ತಂಡದ ಮಕ್ಕಳು ಕುವೆಂಪು ವಿರಚಿತ ಬೊಮ್ಮನಹಳ್ಳಿ ಕಿಂದರಿಜೋಗಿ ನೃತ್ಯ ರೂಪಕ ಪ್ರದರ್ಶಿಸಿದರು. 50ಕ್ಕೂ ಹೆಚ್ಚು ಮಕ್ಕಳಿಂದ ಮೂಡಿಬಂದ ಈ ನೃತ್ಯ ರೂಪಕ ಮಕ್ಕಳನ್ನು ಸೇರಿದಂತೆ ವಯಸ್ಕರ ಮನಸೂರೆಗೊಂಡಿತು. ಬೆಂಗಳೂರಿನ ಗೌರಿ ಶಂಕರ ಅಕಾಡಿಮೆ ಕಲ್ಚರ್ ಟ್ರಸ್ಟ್ ಮಕ್ಕಳ ಜಾನಪದ ಗೀತೆಗಳನ್ನು ಹೇಳಿದರು.
ವೇದಿಕೆ ಮೇಲೆ ಭರತನಾಟ್ಯ ವೈಭವ
ಹಂಪಿಯ ಕಲಾ ಶ್ರೀಮಂತಿಕೆಯ ವೈಭವ ಭರತನಾಟ್ಯದ ಮೂಲಕ ವೇದಿಕೆ ಮೇಲೆ ಅನಾವರಣಗೊಂಡಿತು. ಬೆಂಗಳೂರಿನ ಭರತನಾಟ್ಯ ಸಂಗೀತ ಅಕಾಡೆಮೆ, ಪುಷ್ಪಾಂಜಲಿ ನೃತ್ಯ ಶಾಲೆ, ಉಷಾ.ಬಿ ಹಾಗೂ ಅವರ ತಂಡ, ನಾಗಭೂಷಣ, ಬಾಗಲಕೋಟೆಯ ಶ್ರೇಯಾ ಪ್ರಸಾದ್ ಕುಲಕರ್ಣಿ, ಕೃತಿಕಾ ದಯಾನಂದ, ಬೋಲಾರ್‌ನ ಡಾ.ಶೋಭಾರಾಣಿ ಭರತನಾಟ್ಯ ಕಲೆ ಪ್ರದರ್ಶಿಸಿದರು.
ಮಾತಂಗ ಪರ್ವತದಲ್ಲಿ ಮಾರ್ಧನಿಸಿದ ಜನಪದ ಸಂಗೀತ
ಹಂಪಿ ಉತ್ಸವದಲ್ಲಿ ಜಾನಪದ ಕಲೆಗಳು ಹಾಗೂ ಗೀತಗಾಯನಗಳು ತಮ್ಮ ಸೊಗಡನ್ನು ಪಸರಿಸಿದವು. ಜನಪದ ಸಂಗೀತದ ಧ್ವನಿ ಮಾತಂಗ ಪರ್ವತದಲ್ಲಿ ಮಾರ್ಧನಿಸಿತು. ಕೊಪ್ಪಳದ ಶರಣಪ್ಪ ವಡಿಗೇರ, ಕಲಾವತಿ ಮತ್ತು ತಂಡ ಜನಪದ ಗೀತೆಗಳನ್ನು ಹಾಡಿದರೆ, ಹುಬ್ಬಳ್ಳಿಯ ಸ್ವರ್ಣ ಮಯೂರಿ ತಂಡ ಜಾನಪದ ನೃತ್ಯ ರೂಪಕ ಪ್ರದರ್ಶಿಸಿದರು.
Hampi Utsav: ಹಂಪಿ ಉತ್ಸವಕ್ಕೆ ಮೆರುಗು ನೀಡಿದ ಫಲಪುಷ್ಪ ಪ್ರದರ್ಶನ
ಮಧುರ ಹಿಂದುಸ್ತಾನಿ ಸಂಗೀತ
ಉಡುಪಿ ಕೃಷ್ಣಪ್ಪ ಕಾರ್ಕಳ, ಬೆಂಗಳೂರಿನ ಡಾ.ಮುದ್ದುಮೋಹನ್, ಉತ್ತರ ಕನ್ನಡದ ವಿದೂಷಿ ಲಕ್ಷ್ಮೀ ಹೆಗಡೆ ಹಾಗೂ ಹುಬ್ಬಳಿಯ ಬಾಲಚಂದ್ರ ನಾಟೋಡ್ ಮಧುರ ಹಿಂದುಸ್ತಾನಿ ಸಂಗೀತವನ್ನು ಕೇಳುಗರ ಕರ್ಣಗಳಿಗೆ ಉಣಬಡಿಸಿದರು. ಬೆಂಗಳೂರಿನ ಡಾ.ಬೇಗಾರ್ ಶಿವಕುಮಾರ ಅವರ ಯಕ್ಷಗಾನ ಪ್ರೇಕ್ಷರಿಗೆ ವಿಶೇಷ ಅನುಭೂತಿ ನೀಡಿತು.