ಗೃಹಜ್ಯೋತಿ ಸರ್ವರ್ ಡೌನ್, ಸೇವಾಸಿಂಧು ಪೋರ್ಟಲ್ ಕ್ರ್ಯಾಶ್ ಜನರ ಪರದಾಟ!
ಗೃಹಜ್ಯೋತಿ ಯೋಜನೆ ಫಲಾನುಭವಿಯಾಗಲು ಅರ್ಜಿ ಸಲ್ಲಿಸುವ ಸೇವಾಸಿಂಧು ವೆಬ್ ಪೋರ್ಟಲ್‌ನಲ್ಲಿ ಸಮಸ್ಯೆಯಾಗಿದ್ದು, ಉಚಿತ ವಿದ್ಯುತ್ ನೋಂದಣಿ ಭರಾಟೆಗೆ ವೆಬ್‌ಸೈಟೆ ಕ್ರ್ಯಾಶ್ ಆಗಿದೆ. ಐದನೇ ದಿನವೂ ಸಮಸ್ಯೆ ಮುಂದುವರಿದಿದ್ದು, ಜನರು ಹೈರಾಣಾಗಿದ್ದಾರೆ. ಗೃಹ ಜ್ಯೋತಿ ನೋಂದಣಿಗೆ ತಾಲೂಕಿನಾದ್ಯಂತ ಜನರ ನೂಕುನುಗ್ಗಲು ಉಂಟಾಗಿದ್ದು, ಸೇವಾಸಿಂಧು ಪೋರ್ಟಲ್ ಕೈಕೊಟ್ಟಿದೆ.
ಅಫಜಲ್ಪುರ (ಜೂ.23) : ಗೃಹಜ್ಯೋತಿ ಯೋಜನೆ ಫಲಾನುಭವಿಯಾಗಲು ಅರ್ಜಿ ಸಲ್ಲಿಸುವ ಸೇವಾಸಿಂಧು ವೆಬ್ ಪೋರ್ಟಲ್‌ನಲ್ಲಿ ಸಮಸ್ಯೆಯಾಗಿದ್ದು, ಉಚಿತ ವಿದ್ಯುತ್ ನೋಂದಣಿ ಭರಾಟೆಗೆ ವೆಬ್‌ಸೈಟೆ ಕ್ರ್ಯಾಶ್ ಆಗಿದೆ. ಐದನೇ ದಿನವೂ ಸಮಸ್ಯೆ ಮುಂದುವರಿದಿದ್ದು, ಜನರು ಹೈರಾಣಾಗಿದ್ದಾರೆ. ಗೃಹ ಜ್ಯೋತಿ ನೋಂದಣಿಗೆ ತಾಲೂಕಿನಾದ್ಯಂತ ಜನರ ನೂಕುನುಗ್ಗಲು ಉಂಟಾಗಿದ್ದು, ಸೇವಾಸಿಂಧು ಪೋರ್ಟಲ್ ಕೈಕೊಟ್ಟಿದೆ.
ಸರ್ವರ್ ಲೋಡ್ ಹೆಚ್ಚಿಸಲು ಕ್ರಮ ಕೈಗೊಳ್ಳದೆ ಅಧಿಕಾರಿಗಳು ಮೌನವಹಿಸಿರುವುದು ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಭಾನುವಾರದಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆದರೆ, ಆರಂಭದಲ್ಲಿಯೇ ವಿಘ್ನ ಎಂಬಂತೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ಪಡೆಯಲು ಸೇವಾಸಿಂಧು ಪೋರ್ಟಲ್ ಹಾಗೂ ಸರ್ವರ್ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ.
ಅಫಜಲ್ಪುರ: ಕೈಕೊಟ್ಟ ಮಳೆ, ದೇವರ ನಂಬಿ ಒಣ ಭೂಮಿಯಲ್ಲಿ ಬಿತ್ತನೆ
ಸರ್ವರ್ ಸಮಸ್ಯೆ ಬುಧವಾರÜ, ಗುರುವಾರ ಕೂಡ ಮುಂದುವರಿದಿತ್ತು. ಉಚಿತ ವಿದ್ಯುತ್‌ಗೆ ನೋಂದಣಿ ಮಾಡಿಕೊಳ್ಳಲು ಒಮ್ಮೆಲೇ ಜನ ಮುಗಿಬಿದ್ದ ಕಾರಣ ಸೇವಾ ಸಿಂಧು ವೆಬ್‌ಸೈಟ್ ಕ್ರ್ಯಾಶ್ ಆಗಿದೆ. ಭಾನುವಾರ ಅರ್ಜಿ ತೆರೆದುಕೊಳ್ಳುವುದಕ್ಕೆ ಬಹಳಷ್ಟುಸಮಯ ತೆಗೆದುಕೊಳ್ಳುತ್ತಿತ್ತು. ಬುಧವಾರ ಈ ಸಮಸ್ಯೆ ಸ್ವಲ್ಪ ಬಗೆಹರಿದಿದ್ದು, ಅರ್ಜಿ ಒಪನ್ ಆದರೂ ಡೇಟಾ ತುಂಬಲು ಆಗುತ್ತಿರಲಿಲ್ಲ. ಅಕೌಂಟ್ ನಂಬರ್ ಭರ್ತಿ ಮಾಡಿದ ತಕ್ಷಣ ವೆಬ್‌ಸೈಟ್ ಕಾರ್ಯನಿರ್ವಹಣೆ ನಿಲ್ಲಿಸುತ್ತಿದ್ದು, ಮುಂದಿನ ಮಾಹಿತಿಯನ್ನು ಭರ್ತಿ ಮಾಡಲು ಜನರಿಗೆ ಆಗುತ್ತಿಲ್ಲ.
ಎಲ್ಲ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಒನ್ ಹಾಗೂ ನಾಡ ಕಚೇರಿಗಳಲ್ಲಿ ನೋಂದಣಿಗೆ ಚಾಲನೆ ನೀಡಲು ಸಿದ್ಧತೆ ನಡೆಸಲಾಗಿತ್ತು. ಬೆಳಗ್ಗೆ 11 ಗಂಟೆಯಿಂದ ನೋಂದಣಿಗೆ ಅವಕಾಶ ನೀಡಲಾಗಿತ್ತಾದರೂ ನೋಂದಣಿ ಶುರುವಾದ ಕೆಲ ಹೊತ್ತಿನಲ್ಲೇ ಸರ್ವರ್ ಸಮಸ್ಯೆಯಿಂದ ಸ್ಥಗಿತಗೊಂಡಿತು. ಸೈಬರ್ ಕೇಂದ್ರದಲ್ಲಿ ಜನರು ಮುಗಿಬಿದ್ದರು. ಆದರೂ ನೋಂದಣಿ ಸಾಧ್ಯವಾಗಲಿಲ್ಲ. ಈ ಸಮಸ್ಯೆ ಬುಧವಾರವೂ ಮುಂದುವರಿದಿದೆ. ತಾಲೂಕಿನ ಹಲವೆಡೆ ಜನ ಸಾಲುಗಟ್ಟಿನೋಂದಣಿಗೆ ಮುಗಿಬೀಳುತ್ತಿದ್ದಾರೆ. ಬಹುತೇಕ ಎಲ್ಲೆಡೆಯೂ ಸರ್ವರ್ ಡೌನ್ ಸಮಸ್ಯೆ ಕಾಣಿಸಿಕೊಂಡಿದೆ.
ಸೇವಾ ಕೇಂದ್ರಗಳು, ಸೈಬರ್ ಕೆಫೆ, ಅಂಚೆ ಕಚೇರಿ ಸೇರಿದಂತೆ ವಿವಿಧ ಕಚೇರಿಗಳ ಮುಂದೆ ಅರ್ಜಿಗಳನ್ನು ಹಿಡಿದು ಗಂಟೆಗಟ್ಟಲೆ ಕೂತರೂ ಸೇವಾಸಿಂಧು ಪೋರ್ಟಲ್ ಸರ್ವರ್ ಸಮಸ್ಯೆ ಬಗೆಹರಿಯಲಿಲ್ಲ. ಜನ ಕಾದು ಕಾದು ಸುಸ್ತಾಗಿದ್ದು, ಗುರುವಾರವೂ ಈ ಸಮಸ್ಯೆ ಬಗೆಹರಿಯದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
Afzalpur Election Result 2023: ಅಣ್ತಮ್ಮರ ಜಗಳದಿಂದ ಕಾಂಗ್ರೆಸ್‌ಗೆ ಲಾಭ..!