Asianet Suvarna News Asianet Suvarna News

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮದಲ್ಲಿ ಗ್ರೆನೇಡ್‌ಗಳು ಪತ್ತೆ : ಪೊಲೀಸರ ವಶಕ್ಕೆ

  • ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ಐದು ಗ್ರೆನೇಡ್ ಪತ್ತೆ
  • ಗ್ರಾಮಕ್ಕೆ ಬರುವ ದಾರಿಯಲ್ಲಿಯೇ ಐದು ಗ್ರೆನೇಡ್ ಪತ್ತೆ
Grenade Found in dakshina Kannada Ilanthila village snr
Author
Bengaluru, First Published Nov 7, 2021, 12:34 PM IST

ಮಂಗಳೂರು (ನ.07):  ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಬೆಳ್ತಂಗಡಿ (Belthangadi) ತಾಲೂಕಿನ ಇಳಂತಿಲ ಗ್ರಾಮದಲ್ಲಿ ಐದು ಗ್ರೆನೇಡ್ (Grenade) ಪತ್ತೆಯಾಗಿ ಆತಂಕ ಸೃಷ್ಟಿಸಿವೆ.  

ಗ್ರಾಮಕ್ಕೆ ಬರುವ ದಾರಿಯಲ್ಲಿಯೇ ಐದು ಗ್ರೆನೇಡ್ ಪತ್ತೆಯಾಗಿದ್ದು, ಗ್ರಾಮಸ್ಥರು (village) ಇದರಿಂದ ಬೆಚ್ಚಿಬಿದ್ದಿದ್ದಾರೆ. 

ಇಳಂತಿಲ ಗ್ರಾಮದ ಜಯಕುಮಾರ್ ಎಂಬುವವರು ಈ ಮಾರ್ಗವಾಗಿ ತೆರಳುತ್ತಿದ್ದ ವೇಳೆ  ಗ್ರೆನೇಡ್ ಗಳು ಅವರ ಕಣ್ಣಿಗೆ ಬಿದ್ದಿವೆ.  ಬಳಿಕ ಗ್ರೆನೇಡ್‌ಗಳನ್ನು ತಂದ ಜಯಕುಮಾರ್  ಪೊಲೀಸರಿಗೆ (police) ಮಾಹಿತಿ ನೀಡಿದ್ದಾರೆ. 

ಜಯಕುಮಾರ್ ಭೂಸೇನಾ ರೆಜಿಮೆಂಟ್ ನಲ್ಲಿ ಎಸ್.ಸಿ.ಒ (SCO) ಆಗಿ ನಿವೃತ್ತಿ ಹೊಂದಿದ್ದು, ಈ ಹಿನ್ನಲೆ ಗ್ರೆನೇಡ್‌ಗಳ  ಬಗ್ಗೆ ಮಾಹಿತಿ ಇರುವುದರಿಂದ ಅವುಗಳನ್ನು ತಂದು ಪೊಲೀಸರಿಗೆ ತಿಳಿಸಿದ್ದಾರೆ.  ಬಳಿಕ ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ (Uppinangadi) ಪೊಲೀಸರು ಈ ಗ್ರೆನೇಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ‌

ಸುಮಾರು 40 ವರ್ಷಗಳಷ್ಟು ಹಳೆಯ ಗ್ರೆನೇಡ್ ಗಳು ಎಂಬ ಬಗ್ಗೆ ಮಾಹಿತಿ ಲಭಿಸಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಮಂಗಳೂರು ಗೋಲಿಬಾರಲ್ಲಿ ಪೊಲೀಸರು ತಪ್ಪಿಲ್ಲ

ಪೌರತ್ವ ಕಾಯ್ದೆ(Citizenship Act) ವಿರೋಧಿಸಿ 2019ರಲ್ಲಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್‌ ಪ್ರಕರಣ ಕುರಿತ ಮ್ಯಾಜಿಸ್ಪ್ರೇಟ್‌ ತನಿಖೆ ಪೂರ್ಣಗೊಂಡಿದ್ದು, ಪ್ರಕರಣದಲ್ಲಿ ಪೊಲೀಸರು ತಪ್ಪಿತಸ್ಥರಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಗೋಲಿಬಾರ್‌(Golibar) ಪ್ರಕರಣವನ್ನು ಹೈಕೋರ್ಟ್‌(High Court) ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳಿಂದ ಸ್ವತಂತ್ರ ನ್ಯಾಯಾಂಗ ತನಿಖೆಗೆ(investigation) ವಹಿಸುವಂತೆ ಕೋರಿ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎಚ್‌.ಎಸ್‌.ದೊರಸ್ವಾಮಿ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.

ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ವಾದ ಮಂಡಿಸಿ, ಮಂಗಳೂರು(Mangaluru) ಗೋಲಿಬಾರ್‌ ಘಟನೆ ಸಂಬಂಧ ಮ್ಯಾಜಿಸ್ಪ್ರೇಟ್‌ ತನಿಖೆ ಪೂರ್ಣಗೊಂಡಿದೆ. ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಘಟನೆಯಲ್ಲಿ ಪೊಲೀಸರು(Police) ಸೇರಿದಂತೆ ಯಾರೊಬ್ಬರು ತಪ್ಪಿತಸ್ಥರಲ್ಲ ಎಂದು ವರದಿ ಹೇಳಿದೆ. ಆ ವರದಿಯನ್ನು ಸರ್ಕಾರ(Government)ಪೂರ್ಣವಾಗಿ ಒಪ್ಪಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅಲ್ಲದೆ, ಗಲಭೆಗೆ ಕಾರಣರಾದವರ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಲಾಗಿದ್ದು, ದೂರುಗಳ ಬಗ್ಗೆ ಸಿಐಡಿ(CID)ತನಿಖೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್‌, ಘಟನೆ ಸಂಬಂಧ ಪೊಲೀಸರ ವಿರುದ್ಧ 10 ದೂರು ದಾಖಲಾಗಿವೆ. ಆದರೆ, ಯವೊಂದು ದೂರಿನ ಸಂಬಂಧ ಎಫ್‌ಐಆರ್‌(FIR) ದಾಖಲಾಗಿಲ್ಲ ಹಾಗೂ ತನಿಖೆಯೂ ನಡೆದಿಲ್ಲ. ಪೊಲೀಸರ ವಿರುದ್ಧ ದಾಖಲಾದ ದೂರುಗಳ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಜುಲೈ ತಿಂಗಳಲ್ಲಿ ನ್ಯಾಯಾಲಯ ಸೂಚಿಸಿದೆ. ಆದರೆ, ಸರ್ಕಾರ ಮಾತ್ರ ಈ ವಿಚಾರದಲ್ಲಿ ಇದುವರೆಗೂ ಪ್ರತಿಕ್ರಿಯಿಸಿಲ್ಲ. ಮ್ಯಾಜಿಸ್ಪ್ರೇಟ್‌ ತನಿಖೆ ಪೊಲೀಸರಿಂದ, ಪೊಲೀಸರಿಗಾಗಿ, ಪೊಲೀಸರಿಗೋಸ್ಕರ ಎಂಬಂತಿದೆ ಎಂದು ದೂರಿದರು.

ಈ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ನ್ಯಾಯಾಲಯವು ಮುಚ್ಚಿದ ಲಕೋಟೆ ತೆರೆದು ವರದಿ ನೋಡಿದ ಬಳಿಕ ಅದನ್ನು ಅರ್ಜಿದಾರರ ಪರ ವಕೀಲರಿಗೆ ನೀಡುವಂತೆ ಸೂಚಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ನ.30ಕ್ಕೆ ಮುಂದೂಡಿತು.

  •  ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ಐದು ಗ್ರೆನೇಡ್ ಪತ್ತೆ
  • ದಾರಿಯಲ್ಲಿ ಐದು ಗ್ರೆನೇಡ್ ಪತ್ತೆ, ಇಳಂತಿಲ ಗ್ರಾಮದ ಜಯಕುಮಾರ್ ಎಂಬುವವರಿಗೆ ಕಾಣಿಸಿದ ಗ್ರನೇಡ್ ಗಳು
  • ಬಳಿಕ ಅವನ್ನು ಮನೆಯ ಅಂಗಳದ ಬಳಿ ಇಟ್ಟು ಪೊಲೀಸರಿಗೆ ಮಾಹಿತಿ ನೀಡಿದ ಜಯಕುಮಾರ್
  • ಜಯಕುಮಾರ್ ಭೂಸೇನಾ ರೆಜಿಮೆಂಟ್ ನಲ್ಲಿ ಎಸ್.ಸಿ.ಒ ಆಗಿ ನಿವೃತ್ತಿ
Follow Us:
Download App:
  • android
  • ios