ಇವು ಅಂತರ್ ರಾಜ್ಯ ಚೆಕ್ ಪೋಸ್ಟ್. ಈ ಭಾಗದಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳಿಗೂ ಕೂಡ ಅರಣ್ಯ ಇಲಾಖೆ ಹಸಿರು ಸುಂಕ ವಸೂಲಿ ಮಾಡ್ತಿದೆ. ಈ ಹಸಿರು ಸುಂಕ ವಸೂಲಿ  ವೇಳೆ ವ್ಹೀಕೆಂಡ್ ನಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಕಿರಿ ಕಿರಿ ಉಂಟಾಗುತ್ತಿತ್ತು. 

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಫೆ.21): ಇವು ಅಂತರ್ ರಾಜ್ಯ ಚೆಕ್ ಪೋಸ್ಟ್. ಈ ಭಾಗದಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳಿಗೂ ಕೂಡ ಅರಣ್ಯ ಇಲಾಖೆ ಹಸಿರು ಸುಂಕ ವಸೂಲಿ ಮಾಡ್ತಿದೆ. ಈ ಹಸಿರು ಸುಂಕ ವಸೂಲಿ ವೇಳೆ ವ್ಹೀಕೆಂಡ್ ನಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಕಿರಿ ಕಿರಿ ಉಂಟಾಗುತ್ತಿತ್ತು. ಈ ಟ್ರಾಫಿಕ್ ಕಿರಿಕಿರಿಗೆ ಇತಿಶ್ರೀ ಹಾಡಲು ಪ್ರಯೋಗಿಕವಾಗಿ ಫಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿಗೆ ತಂದಿದೆ. ಯಾವ ಅರಣ್ಯದಲ್ಲಿ ಫಾಸ್ಟ್ ಟ್ಯಾಗ್ ನಿಂದ ವಸೂಲಿ ಮಾಡ್ತಿದ್ದಾರೆ? ಇದ್ರಿಂದ ಟ್ರಾಫಿಕ್ ಕಿರಿಕಿರಿ ಹೇಗೆ ತಪ್ಪುತ್ತೆ ಅಂತಾ ತಿಳ್ಕೋಬೇಕಾ,ಹಾಗಾದ್ರೆ ಈ ಸ್ಟೋರಿ ನೋಡಿ. 

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಿಂದ ಕೇರಳ ಮತ್ತು ಊಟಿ ಸೇರಿದಂತೆ ತಮಿಳುನಾಡಿಗೆ ತೆರಳುವ ವೇಳೆ ಎದುರಾಗುತ್ತಿದ್ದ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ಗೆ ಮುಕ್ತಿ ಸಿಗುತ್ತಿದ್ದು, ನಗದು ಬದಲಾಗಿ ಫಾಸ್ಟ್ಟ್ಯಾಗ್ ಆರಂಭಿಸಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಸಿಗರಿಂದ ಹಸಿರು ಸುಂಕ ವಸೂಲಿಗೆ ನಿರ್ಮಾಣವಾಗಿರುವ ಫಾಸ್ಟ್ಟ್ಯಾಗ್ ಕೇಂದ್ರಕ್ಕೆ ಶೀಘ್ರದಲ್ಲೇ ಚಾಲನೆ ಸಿಗಲಿದ್ದು, ಈಗಾಗಲೇ ಪ್ರಾಯೋಗಿಕ ನಿರ್ವಹಣೆ ಆರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿ 67 ಮತ್ತು 766ರಲ್ಲಿ ಮೂರು ಫಾಸ್ಟ್ಟ್ಯಾಗ್ ಕೇಂದ್ರ ತೆರೆಯಲಾಗಿದೆ. 

ತಾಲೂಕು ಕಚೇರಿಯಲ್ಲಿಲ್ಲ ಯುಪಿಎಸ್, ಜನರೇಟರ್ ವ್ಯವಸ್ಥೆ?: ಕರೆಂಟ್ ಕೈ ಕೊಟ್ರೆ ಯಾವುದೇ ಕೆಲಸ ನಡೆಯಲ್ಲ!

ಮೇಲುಕಾಮನಹಳ್ಳಿ, ಕೆಕ್ಕನಹಳ್ಳ ಮತ್ತು ಮದ್ದೂರಿನ ಚೆಕ್ಪೋಸ್ಟ್ ಬಳಿ ಫಾಸ್ಟ್ಟ್ಯಾಗ್ ಕೇಂದ್ರ ಪ್ರಾಯೋಗಿಕವಾಗಿ ಚಾಲನೆಯಾಗಿದ್ದು ಯಾವುದಾದರು ಸಮಸ್ಯೆ ಆಗುತ್ತಿದೆಯಾ ಎಂದು ಪರೀಕ್ಷೆ ನಡೆಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಕಸ ನಿರ್ವಹಣೆ, ಅಪಘಾತ ನಿರ್ವಹಣೆ ಸೇರಿ ವಿವಿಧ ಉದ್ದೇಶಗಳಿಗಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗುವ ವಾಹನಗಳಿಂದ ಲಘು ವಾಹನಗಳಿಗೆ 20 ರೂ. ಭಾರಿ ವಾಹನಗಳಿಗೆ 50 ರೂ. ನಂತೆ ಹಸಿರು ಸುಂಕ ವಸೂಲಿ ಮಾಡಲಾಗುತ್ತಿದೆ. ಇನ್ನೂ ರಜೆ ದಿನ ಹಾಗೂ ವಾರಾಂತ್ಯದಲ್ಲಿ ಊಟಿ ಹಾಗೂ ಕೇರಳದ ಪ್ರವಾಸಿ ತಾಣಗಳಿಗೆ ಹೆಚ್ಚು ಪ್ರವಾಸಿಗರು ಹೋಗಲಿದ್ದು, ಹಸಿರು ಸುಂಕ ವಸೂಲಿ ಮಾಡುವ ವೇಳೆ ವಾಹನಗಳು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಲ್ಲುತ್ತಿದ್ದವು.

ಚೆಕ್ ಪೋಸ್ಟ್‌ನಲ್ಲಿ ಟಿಕೆಟ್ ಪಡೆದು ಹೊರಡುವಷ್ಟರಲ್ಲಿ ಗಂಟೆಗೂ ಹೆಚ್ಚು ಸಮಯ ಕಳೆದು ಹೋಗುತ್ತಿತ್ತು. ಅಲ್ಲದೆ ಅರಣ್ಯ ಪ್ರದೇಶದಲ್ಲಿ ವಾಹನಗಳು ನಿಂತು ಪ್ರಾಣಿಗಳ ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ಇದೇ ಸಂದರ್ಭ ಬಳಸಿಕೊಂಡು ಪ್ರವಾಸಿಗರು ಕಾಡಿನಲ್ಲಿ ವಾಹನದಿಂದ ಕೆಳಗಿಳಿದು ಪ್ರಾಣಿಗಳ ಫೋಟೋ ತೆಗೆಯುವುದು, ಆಹಾರ ನೀಡುವುದನ್ನು ಮಾಡುತ್ತಿದ್ದರು. ಒಂದು ಚೆಕ್ಪೋಸ್ಟ್ನಲ್ಲಿ ಒಬ್ಬ ಅಥವಾ ಇಬ್ಬರು ಟಿಕೆಟ್ ನೀಡುತ್ತಿದ್ದರು. ಒಂದು ದಿನಕ್ಕೆ ವಾರಾಂತ್ಯದಲ್ಲಿ 3 ಸಾವಿರದಿಂದ 4 ಸಾವಿರ ವಾಹನಗಳು ಸಂಚಾರ ಮಾಡುತ್ತಿದ್ದವು. 

ಮೂಲ ವಿಶ್ವವಿದ್ಯಾಲಯಕ್ಕೆ ನೂತನ 7 ವಿವಿಗಳ ವಿಲೀನಕ್ಕೆ ಸರ್ಕಾರ ಚಿಂತನೆ: ಭಾರೀ ಆಕ್ರೋಶ

ಪ್ರವಾಸಿ ವಾಹನಗಳು ಹೆಚ್ಚು ಇದ್ದ ಸಂದರ್ಭದಲ್ಲಿ ತುರ್ತಾಗಿ ಹೋಗಬೇಕಾದ ತರಕಾರಿ, ಹಾಲಿನ ವಾಹನ ಮತ್ತು ಸ್ಥಳೀಯರಿಗೆ ಹೆಚ್ಚಿನ ತೊಂದರೆಯಾಗುತ್ತಿತ್ತು. ಈಗ ಫಾಸ್ಟ್ಟ್ಯಾಗ್ ಅಳವಡಿಸಿರುವುದರಿಂದ ಕೆಲವೇ ನಿಮಿಷಗಳಲ್ಲಿ ಸುಂಕ ಪಾವತಿಸಿ ವಾಹನಗಳು ಮುಂದಕ್ಕೆ ತೆರಳಲಿವೆ. ಫಾಸ್ಟ್ಟ್ಯಾಗ್ನಿಂದ ನಗದಿನ ಬದಲಾಗಿ ಡಿಜಿಟಲ್ ಮೂಲಕ ಹಣ ಪಾವತಿ ಆಗುವುದರಿಂದ ಪಾರದರ್ಶಕತೆ ಇರಲಿದೆ. ಒಟ್ನಲ್ಲಿ ಬಂಡೀಪುರದಲ್ಲಿ ಹಸಿರು ಸುಂಕ ವಸೂಲಿಗೆ ಫಾಸ್ಟ್ ಟ್ಯಾಗ್ ಐಡಿಯಾ ಮಾಡಿದ್ದು,ಇದ್ರಿಂದ ವ್ಹೀಕೆಂಡ್ ಹಾಗೂ ಹಬ್ಬದ ರಜೆ ಸಂದರ್ಭದಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆಗಂತು ಸ್ವಲ್ಪ ಮಟ್ಟಿನ ಪರಿಹಾರ ಸಿಕ್ಕಿದೆ.