ಚೆಸ್ಕಾಂನಿಂದ ತುರ್ತು ವಿದ್ಯುತ್ ಸಮಸ್ಯೆ, ಪರಿವರ್ತಕಗಳ ಅಳವಡಿಕೆ ಇತ್ಯಾದಿ ಕಾರಣಗಳಿಂದ ಹನೂರು ಪಟ್ಟಣದಲ್ಲಿ ಸುಸೂತ್ರವಾಗಿ ವಿದ್ಯುತ್ ಸಂಪರ್ಕ ಲಭ್ಯವಾಗಿರಲಿಲ್ಲ.
ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಫೆ.18): ಚೆಸ್ಕಾಂನಿಂದ ತುರ್ತು ವಿದ್ಯುತ್ ಸಮಸ್ಯೆ, ಪರಿವರ್ತಕಗಳ ಅಳವಡಿಕೆ ಇತ್ಯಾದಿ ಕಾರಣಗಳಿಂದ ಹನೂರು ಪಟ್ಟಣದಲ್ಲಿ ಸುಸೂತ್ರವಾಗಿ ವಿದ್ಯುತ್ ಸಂಪರ್ಕ ಲಭ್ಯವಾಗಿರಲಿಲ್ಲ. ಆದ್ರಿಂದ ತಾಲೂಕು ಕಚೇರಿಯಲ್ಲಿ ಬದಲಿ ವ್ಯವಸ್ಥೆ ಇಲ್ಲದೆ ಕೆಲಸ ಕಾರ್ಯ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ ಆಗ್ತಾಯಿದ್ದು, ನಾಡ ಕಚೇರಿ ಸೇವೆಗಳಿಗಾಗಿ ನಾಗರಿಕರು ಪರದಾಡಬೇಕಾಗಿದೆ.
ಚೆಸ್ಕಾಂನಿಂದ ತುರ್ತು ವಿದ್ಯುತ್ ಕೆಲಸ, ಪರಿವರ್ತಕಗಳ ಅಳವಡಿಕೆ ಮುಂತಾದ ಕಾರಣಗಳಿಂದ ಈಚೆಗೆ ಪಟ್ಟಣದಲ್ಲಿ ಸುಸೂತ್ರವಾಗಿ ವಿದ್ಯುತ್ ಸಂಪರ್ಕ ಲಭ್ಯವಾಗುತ್ತಿಲ್ಲ. ಇದ್ದರಿಂದ ಪಟ್ಟಣದ ತಹೀಸಿಲ್ದಾರ್ ಕಚೇರಿ ಯಲ್ಲಿ ಬದಲಿ ವ್ಯವಸ್ಥೆಗಳು ಇಲ್ಲದೆ ಕೆಲಸಕಾರ್ಯಗಳು ಸ್ಥಗಿತಗೊಂಡಿದ್ದು, ನಾಗರಿಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ಹಿಂದಿರುಗುತ್ತಿದ್ದಾರೆ. ವಂಶವೃಕ್ಷ, ಆದಾಯ ದೃಢೀಕರಣ, ಜಾತಿ ಪ್ರಮಾಣಪತ್ರ, ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಸ್ಥಿರವಾಗಿದೆ.
ತಾಲೂಕಿನ ಅನ್ಯ ಕಚೇರಿಗಳಲ್ಲಿ ಯುಪಿಎಸ್ ಅಳವಡಿಸಲಾಗಿದೆ. ಆದರೆ ಹನೂರು ಪಟ್ಟಣದ ಕೇಂದ್ರ ಸ್ಥಾನದಲ್ಲಿರವ ತಾಲೂಕು ಕಚೇರಿಯಲ್ಲಿಯೆ ಜನರೇಟರ್ ವ್ಯವಸ್ಥೆ ಇಲ್ಲದೆ ತೊಂದರೆ ಆಗಿದೆ. ಗಡಿ ಹಂಚಿನಲ್ಲಿರುವಂತಹ ಗೋಪಿನಾ್ ಹೂಗ್ಯಂ, ಬೈಲೂರು ಸೇರಿದಂತೆ 80ರಿಂದ 100 ಕಿಲೋಮೀಟರ್ ದೂರದ ಊರುಗಳಿಂದ ಆಗಮಿಸಿದಂತಹ ಸಾರ್ವಜನಿಕರು ಕೆಲಸ ಕಾರ್ಯಗಳಾಗದೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ತಾಲೂಕು ಕಚೇರಿಯ ವ್ಯವಸ್ಥೆ ಬಗ್ಗೆ ತಹಶೀಲ್ದಾರರನ್ನು ಪ್ರಶ್ನಿಸಿದ್ರೆ ಕಳೆದ ವಾರ ವಿದ್ಯುತ್ ಕೈ ಕೊಟ್ಟ ಪರಿಣಾಮ ಕೆಲಸ ಕಾರ್ಯಗಳು ನಡೆದಿಲ್ಲ.
ಮೂಲ ವಿಶ್ವವಿದ್ಯಾಲಯಕ್ಕೆ ನೂತನ 7 ವಿವಿಗಳ ವಿಲೀನಕ್ಕೆ ಸರ್ಕಾರ ಚಿಂತನೆ: ಭಾರೀ ಆಕ್ರೋಶ
ಆದ್ರಿಂದ ಬೇರೆ ಸ್ಕೀಂ ಮೂಲಕ ಸದ್ಯ ಯುಪಿಎಸ್ ವ್ಯವಸ್ಥೆ ಮಾಡಿಕೊಂಡಿದ್ದೇವೆ. ತಾಲೂಕು ಕಚೇರಿಗೆ ಬರುವವರ ಕೆಲಸ ತಡವಾಗದಂತೆ ಕ್ರಮ ವಹಿಸಲು ಸೂಚಿಸಿದ್ದೇನೆಂದು ಹಾರಿಕೆ ಉತ್ತರ ಕೊಡುತ್ತಾರೆ. ಒಟ್ನಲ್ಲಿ ಗ್ರಾ.ಪಂ. ಕಚೇರಿಗಳಲ್ಲೇ ಕರೆಂಟ್ ಕೈ ಕೊಟ್ಟರೆ ಬ್ಯಾಕ್ ಅಪ್ ವ್ಯವಸ್ಥೆ ಇರುತ್ತೆ. ಆದ್ರೆ ತಾಲೂಕು ಕಚೇರಿಗೆ ಇನ್ನೂ ಒಂದು ಸೂಕ್ತ ಕಟ್ಟಡದ ವ್ಯವಸ್ಥೆ ಹಾಗೂ ವಿದ್ಯುತ್ ಬದಲಿ ವ್ಯವಸ್ಥೆ ಇಲ್ಲ ಅಂದ್ರೆ ವಿಪರ್ಯಾಸವೇ ಸರಿ.
