ಬೆಂಗ​ಳೂ​ರು(ಫೆ.18): ತೋಟದ ಬೆಳೆ​ಗಾ​ರರ ಸಹ​ಕಾರಿ ಮಾರಾಟ ಮತ್ತು ಸಂಸ್ಕ​ರಣ ಸಂಘ (ಹಾಪ್‌​ಕಾಮ್ಸ್‌) ಲಾಲ್‌ಬಾಗ್‌​ನಲ್ಲಿರುವ ಹಾಪ್‌​ಕಾಮ್ಸ್‌ ಕೇಂದ್ರ ಕಚೇ​ರಿ​ ಆವ​ರ​ಣ​ದಲ್ಲಿ ಫೆ.19ರಿಂದ ಮಾ.31ರವ​ರೆಗೆ ‘ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ’ ಹಮ್ಮಿ​ಕೊಂಡಿದೆ.

ಸೋಮ​ವಾರ ಸುದ್ದಿ​ಗೋಷ್ಠಿಯಲ್ಲಿ ಹಾಪ್‌​ಕಾಮ್ಸ್‌ ಅಧ್ಯಕ್ಷ ಎ.ಎ​ಸ್‌.​ಚಂದ್ರೇ​ಗೌಡ ಮಾತ​ನಾಡಿ, ದ್ರಾಕ್ಷಿ ಹಾಗೂ ಕಲ್ಲಂಗಡಿ ಬೆಳೆ​ಗಾ​ರ​ರನ್ನು ಪ್ರೋತ್ಸಾ​ಹಿ​ಸುವ, ಗ್ರಾಹ​ಕ​ರಿಗೆ ರಿಯಾ​ಯಿತಿ ದರ​ದಲ್ಲಿ ಉತ್ತಮ ಗುಣ​ಮ​ಟ್ಟದ ಹಣ್ಣು ಒದ​ಗಿ​ಸಲು ಮೇಳ ಏರ್ಪ​ಡಿ​ಸಿ​ದ್ದೇವೆ. ಶರದ್‌ ಸೀಡ್‌​ಲೆಸ್‌, ಕೃಷ್ಣ ಶರದ್‌, ಥಾಮ್ಸನ್‌, ಜಂಬೂ ಸೇರಿ​ದಂತೆ ಅಂದಾಜು 15 ತಳಿಯ ದ್ರಾಕ್ಷಿ, ಐದು ಬಗೆಯ ಕಲ್ಲಂಗಡಿ ಜತೆಗೆ ಖರ್ಬೂಜ, ಕಿತ್ತಳೆ, ಚಕ್ಕೋತ, ಒಣ​ದ್ರಾಕ್ಷಿ ಮತ್ತಿ​ತರ ಡ್ರೈಪ್ರುಟ್ಸ್‌ಗಳು ಶೇಕಡ 10 ರಿಯಾ​ಯಿತಿ ದರ​ದಲ್ಲಿ ದೊರೆಯುತ್ತವೆ. ಈ ಮೇಳದ ಅವ​ಧಿ​ಯಲ್ಲಿ ನಗ​ರ​ದಲ್ಲಿರುವ 200ಕ್ಕೂ ಅಧಿಕ ಹಾಪ್‌​ಕಾಮ್ಸ್‌ ಮಳಿ​ಗೆ​ಗ​ಳಲ್ಲಿ ಗ್ರಾಹ​ಕರು ಖರೀ​ದಿ​ಸ​ಬ​ಹುದು ಎಂದರು.

ಫ್ರಾನ್ಸ್, ಇಂಗ್ಲೆಂಡ್ ಹಿಂದಿಕ್ಕಿದ ಭಾರತ: ವಿಶ್ವದ 5ನೇ ಅತಿದೊಡ್ಡ ಆರ್ಥಿಕ ದೇಶ!

ಬಿಜಾ​ಪುರ, ಬೆಳ​ಗಾವಿ, ಬಾಗ​ಲ​ಕೋಟೆ ಮತ್ತು ಚಿಕ್ಕ ಬಳ್ಳಾ​ಪುರಗಳಲ್ಲಿ ಒಟ್ಟು 26,600 ಹೆಕ್ಟೆರ್‌ ಪ್ರದೇ​ಶ​ದಲ್ಲಿ ದ್ರಾಕ್ಷಿ, ಕಲ್ಲಂಗ​ಡಿ​ ಬೆಳೆ​ಯ​ಲಾ​ಗಿದೆ. ಆ ಭಾಗ​ಗಳ ರೈತ​ರಿಗೆ ಮೇಳದ ಲಾಭ ಪಡೆ​ಯು​ವಂತೆ ಕೋರ​ಲಾ​ಗಿದೆ. ಈ ಬಾರಿ 500 ಟನ್‌ ದ್ರಾಕ್ಷಿ ಹಾಗೂ 1,500 ಕಲ್ಲಂಗಡಿ ಮಾರಾಟ ಮಾಡುವ ಗುರಿ ಹೊಂದಿ​ದ್ದೇವೆ ಎಂದರು.

ಕಾರಿನಲ್ಲಿ ಮಹಿಳಾ ಟೆಕಿಯ ಬಟ್ಟೆ ಹಿಡಿದು ಎಳೆದಾಡಿದ!

ತೋಟ​ಗಾ​ರಿಕೆ ಸಚಿವ ನಾರಾ​ಯ​ಣ​ ಗೌಡ ಅವರು ಫೆ.19ರಂದು ಮೇಳ ಉದ್ಘಾಟಿಸ​ಲಿ​ದ್ದಾರೆ. ವಿಶೇಷ ಆಹ್ವಾ​ನಿ​ತ​ರಾಗಿ ವಸತಿ ಸಚಿವ ವಿ.ಸೋ​ಮಣ್ಣ, ಮಾಜಿ ಸಚಿವ ರಾಮ​ಲಿಂಗಾ​ರೆಡ್ಡಿ ಆಗ​ಮಿ​ಸ​ಲಿ​ದ್ದಾರೆ. ಅತಿ​ಥಿ​ಗ​ಳಾಗಿ ತೋಟ​ಗಾ​ರಿಕೆ ಇಲಾಖೆ ನಿರ್ದೇ​ಶಕ ವೆಂಕ​ಟೇಶ್‌, ಕಾರ್ಯ​ದರ್ಶಿ ರಾಜೇಂದರ್‌ ಕುಮಾರ್‌ ಕಟಾ​ರಿಯಾ ಹಾಗೂ ಪಾಲಿಕೆ ಸದಸ್ಯೆ ವಾಣಿ ​ವಿ.​ರಾವ್‌ ಆಗ​ಮಿ​ಸ​ಲಿ​ದ್ದಾರೆ. ಶಾಸಕ ಉದಯ್‌ ಗ​ರು​ಡಾ​ಚಾರ್‌ ಅಧ್ಯ​ಕ್ಷತೆ ವಹಿ​ಸ​ಲಿ​ದ್ದಾರೆ ಎಂದು ತಿಳಿ​ಸಿದರು.