ಮೈಸೂರು(ಜು.16): ಪಿರಿಯಾಪಟ್ಟಣ ತಾಲೂಕಿನ ಬಿಇಒ ಚಿಕ್ಕಸ್ವಾಮಿ ಅವರು ತಮ್ಮ ಬಿಡುವಿನ ವೇಳೆಯನ್ನು ಪರಿಸರ ಸಂರಕ್ಷಣೆ ಕುರಿತ ಹವ್ಯಾಸ ಮಾಡಿಕೊಂಡು ತಾವು ವಾಸಿಸುವ ಸರ್ಕಾರಿ ನಿವಾಸದ ಖಾಲಿ ಜಾಗಗಳಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಚಿಕ್ಕಸ್ವಾಮಿ ಅವರು ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿಗೆ ಆಗಮಿಸಿದ್ದು, ಒಂದು ವರ್ಷದಿಂದ ಗೋಣಿಕೊಪ್ಪ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ವಾಸಿಸುತ್ತಿದ್ದು, ನಿವಾಸದ ಸುತ್ತಮುತ್ತಲ ಖಾಲಿ ಜಾಗದಲ್ಲಿ ವಿವಿಧ ಬಗೆಯ 60 ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ, ಕರ್ತವ್ಯದ ಅವಧಿ ಮುಗಿದ ಕ್ಷಣ ಮನೆಗೆ ಬಂದು ಸ್ವತಃ ಹಾರೆ, ಗುದ್ದಲಿ ಹಿಡಿದು ಗಿಡಗಳ ಸುತ್ತವಿರುವ ತ್ಯಾಜ್ಯಗಳನ್ನು ತೆಗೆದು ಗಿಡಗಳಿಗೆ ನೀರು ಹಾಕುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ.

'ಸರ್ಕಾರದ ವೈಫಲ್ಯ ಪ್ರಶ್ನಿಸಿದ್ರೆ ಕಾಂಗ್ರೆಸ್ಸಿಗರೇ ಸರಿ ಇಲ್ಲ ಅಂತಾರೆ'..!

ಬೇವು, ಅರಳಿ, ಹೆಬ್ಬೆವು, ಹಣ್ಣಿನ ಗಿಡಗಳಾದ ಮಾವು, ಸಪೋಟ, ಸೀಬೆ ಸೇರಿದಂತೆ ಹಲವು ಜಾತಿಯ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ, ಹಿರಿಯರಾದ ಸಾಲುಮರದ ತಿಮ್ಮಕ್ಕ, ಮದ್ದೂರಿನ ನರಸಯ್ಯ, ಪಾಂಡವಪುರದ ಚೌಡಯ್ಯ ಸೇರಿದಂತೆ ಹಲವರ ಪರಿಸರ ಕಾಳಜಿ ಕಾರ್ಯದಿಂದ ಪ್ರೇರೇಪಿತರಾಗಿ ಸಸಿಗಳನ್ನು ನೆಟ್ಟು ಪೋಷಿಸುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ, ತಮ್ಮ ಇಳಿ ವಯಸ್ಸಿನಲ್ಲಿಯೂ ಮಂಡ್ಯದ ದಾಸಯ್ಯನದೊಡ್ಡಿಯ ಕಾಮೇಗೌಡರು ಸ್ವಂತ ಹಣದಿಂದ ಕೆರೆಗಳನ್ನು ನಿರ್ಮಿಸಿ ಇತರರಿಗೆ ಮಾದರಿ ಯಾದಂತೆ ಜೀವಿತಾವಧಿಯಲ್ಲಿ ನಾಲ್ಕಾರು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಉತ್ತಮ ಪರಿಸರ ನಿರ್ಮಾಣದ ಗುರಿಯನ್ನು ಪ್ರತಿಯೊಬ್ಬರೂ ಹೊಂದಬೇಕು ಎಂಬುದು ಬಿಇಒ ಚಿಕ್ಕಸ್ವಾಮಿ ಅವರ ಆಶಯವಾಗಿದೆ .

ದನದ ಬಾಲ ಹಿಡಿದ ಮರ, ಉಳವಿ ಕಾಡಿನಲ್ಲಿ ಅಚ್ಚರಿ!

ಪ್ರತಿ ನಿತ್ಯ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವುದನ್ನು ಪ್ರತಿಯೊಬ್ಬರು ಹವ್ಯಾಸವಾಗಿಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಿದಾಗ ಮಾತ್ರ ಮನುಕುಲದ ಉನ್ನತಿ ಸಾಧ್ಯ ಎಂದು ಪಿರಿಯಾಪಟ್ಟಣ ಬಿಇಒ ಚಿಕ್ಕಸ್ವಾಮಿ ತಿಳಿಸಿದ್ದಾರೆ.