Asianet Suvarna News Asianet Suvarna News

ದನದ ಬಾಲ ಹಿಡಿದ ಮರ, ಉಳವಿ ಕಾಡಿನಲ್ಲಿ ಅಚ್ಚರಿ!

ಕಾಡಿನ ಗಿಡವೂ ಪ್ರಾಣಿಗಳನ್ನು ಹಿಡಿದು ರಕ್ತಹೀರುತ್ತಿವೆ ಎನ್ನುವ ಸಂಗತಿ ಹಿಂದೆ ಕೇಳಿದ್ದೇವೆ, ಇದನ್ನು ನಂಬಲಾಗಲಿರಲಿಲ್ಲ. ಆದರೆ, ಇದೀಗ ನಂಬುವಂತಹ ಸತ್ಯವೊಂದು ನಮ್ಮ ಕಣ್ಣೆದುರಿಗೆ ಕಂಡಿದೆ. ಕಾಡಿನಲ್ಲಿನ ಗಿಡವೊಂದು ಆಕಳಿನ ಬಾಲವನ್ನು ಸುತ್ತಿಕೊಂಡು ಜೀವ ಹಿಂಡುತ್ತಿದ್ದು, ಆಕಳು ತಪ್ಪಿಸಿಕೊಳ್ಳಲಾಗದೆ ಒದ್ದಾಡಿದ ಘಟನೆ ಜೋಯಿಡಾದಲ್ಲಿ ವರದಿಯಾಗಿದೆ.

Wild vine holds Cow tail in Uttarakannada
Author
Bangalore, First Published Jul 16, 2020, 10:23 AM IST

ಜೋಯಿಡಾ(ಜು.16): ಕಾಡಿನ ಗಿಡವೂ ಪ್ರಾಣಿಗಳನ್ನು ಹಿಡಿದು ರಕ್ತಹೀರುತ್ತಿವೆ ಎನ್ನುವ ಸಂಗತಿ ಹಿಂದೆ ಕೇಳಿದ್ದೇವೆ, ಇದನ್ನು ನಂಬಲಾಗಲಿರಲಿಲ್ಲ. ಆದರೆ, ಇದೀಗ ನಂಬುವಂತಹ ಸತ್ಯವೊಂದು ನಮ್ಮ ಕಣ್ಣೆದುರಿಗೆ ಕಂಡಿದೆ. ಕಾಡಿನಲ್ಲಿನ ಗಿಡವೊಂದು ಆಕಳಿನ ಬಾಲವನ್ನು ಸುತ್ತಿಕೊಂಡು ಜೀವ ಹಿಂಡುತ್ತಿದ್ದು, ಆಕಳು ತಪ್ಪಿಸಿಕೊಳ್ಳಲಾಗದೆ ಒದ್ದಾಡುತ್ತಿರುವಾಗ ಊರಿನ ಜನರು ಅದನ್ನು ಬಿಡಿಸಿದ ಸಂಗತಿ ವರದಿಯಾಗಿದೆ.

ಉಳವಿ ಸಮೀಪದ ಹನ್ನೊಲ್ಲಿ ಬಳಿಯ ಕಾಡಿನಲ್ಲಿ ಕಳೆದ 2 ದಿನಗಳ ಹಿಂದೆ ಇಂತಹದೊಂದು ಘಟನೆ ನಡೆದಿದೆ. ಎಂದಿನಂತೆ ಹುಲ್ಲು ಮೇಯಲು ಕಾಡಿಗೆ ಹೋದ ದನಕರುಗಳಲ್ಲಿ ಒಂದು ಆಕಳ ಬಾಲ ಅಲ್ಲಿನ ಕಾಡಿನ ಜಂಬೆ ಗಿಡಕ್ಕೆ ಸ್ಪರ್ಷವಾಗುತ್ತಿದ್ದಂತೆ ಸೆಳೆದುಕೊಂಡಿದೆ. ಆಕಳು ತಪ್ಪಿಸಿಕೊಳ್ಳಲು ಶತಪ್ರಯತ್ನ ಮಾಡಿದರೂ ಬಾಲ ಬಿಡಿಸಿಕೊಳ್ಳಲಾಗಲಿಲ್ಲ. ಅಂದು ಅದರ ಜತೆ ಹೋಗಿದ್ದ ಎಲ್ಲ ದನಕರುಗಳು ಮನೆಗೆ ಸೇರಿದರೂ ಈ ಆಕಳು ಮಾತ್ರ ಆ ಒಂದು ದಿನ ಅಲ್ಲಿಯೇ ಉಳಿದಿತ್ತು.

ಬೆಂಗಳೂರು: ಕಠಿಣ ಲಾಕ್‌ಡೌನ್‌ಗೆ 2000 ಗೃಹ ರಕ್ಷಕರ ಬಳಕೆ, ಸಚಿವ ಬೊಮ್ಮಾಯಿ

ಮಾರನೇ ದಿನ ಆ ಕಾಡಿನ ಮಾರ್ಗದಲ್ಲಿ ಸಾಗುತ್ತಿದ್ದ ಹತ್ತಿರದ ಗ್ರಾಮದ ವ್ಯಕ್ತಿಗಳಾದ ಸದಾಶಿವ ಪಟಗಾರ, ಸುಬ್ರಾಯ ಕುಣಬಿ, ಪರಶುರಾಮ ದೇಸಾಯಿ ಆಕಳನ್ನು ಎಳೆದು ಜೀವ ಉಳಿಸಲು ಪ್ರಯತ್ನಿಸಿದ್ದಾರೆ. ಅವರಲ್ಲಿ ಒಬ್ಬ ವ್ಯಕ್ತಿ ತಮ್ಮ ಗಾಡಿಯ ಚಾವಿಯಿಂದ ಆಕಳ ಬಾಲ ಸುತ್ತಿಕೊಂಡ ಗಿಡದ ಭಾಗದಲ್ಲಿ ಚುಚ್ಚಲು ಪ್ರಾರಂಭಿಸುತ್ತಿದ್ದಂತೆ ಕ್ರಮೇಣವಾಗಿ ಸುತ್ತಿಕೊಂಡ ಬಾಲ ಸಡಿಲಿಕೆ ಆಗುತ್ತಾ ಬಂದು, ಆಕಳ ಬಾಲ ಗಿಡದ ಹಿಡಿತದಿಂದ ಬೇರ್ಪಟ್ಟಿತು. ಇದು ನಿಜಕ್ಕೂ ಕೇಳಲು ಆಶ್ಚರ್ಯವೆನಿಸಿದರೂ ಸ್ಥಳದಲ್ಲಿದ್ದವರು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.

ಈ ಹಿಂದೆ ಗಿಡಮರಗಳು ಕಾಡಿನಲ್ಲಿ ದನಕರುಗಳ ಬಾಲವನ್ನು ಹಿಡಿಯುತ್ತಿದ್ದ ಸುದ್ದಿ ಕೇಳಿದ್ದೇವೆ. ದನಗಳು ತಪ್ಪಿಸಿಕೊಳ್ಳಲಾಗದೆ ಬಾಲವೇ ತುಂಡಾಗಿ ಓಡಿಬಂದ ಅನೇಕ ಘಟನೆಗಳನ್ನು ಕೇಳಿದ್ದೇವೆ. ಆದರೆ, ಅದನ್ನು ಪ್ರತ್ಯಕ್ಷವಾಗಿ ಕಂಡಿರಲಿಲ್ಲ. ಈಗ ಈ ಘಟನೆಯಲ್ಲಿ ಕಣ್ಣಾರೆ ಕಂಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Follow Us:
Download App:
  • android
  • ios