ತಾಂಡವಪುರ(ಜು.16): ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಪ್ರಶ್ನೆ ಮಾಡಿದರೆ ಕಾಂಗ್ರೆಸ್ಸಿನವರು ಸರಿ ಇಲ್ಲ ಎನ್ನುತ್ತಾರೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣಾ ಕ್ಷೇತ್ರಕ್ಕೆ ಸೇರುವ ಹಳ್ಳಿದಿಡ್ಡಿ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕಿಗೆ ಭೂಮಿ ದಾನ ನೀಡಿದ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಲೆಕ್ಕ ಕೊಡ್ತೀವಿ, ಮನೆಯಲ್ಲೇ ಕುಳಿತು ಲೆಕ್ಕಹಾಕ್ಲಿ: ಆರ್‌. ಅಶೋಕ್‌ ಟಾಂಗ್‌

ಮಹಾಮಾರಿ ಕೋವಿಡ್‌-19 ತಡೆಗಟ್ಟಲು ಸರ್ಕಾರ ಎಷ್ಟುಹಣ ಖರ್ಚು ಮಾಡಿದೆ? ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ಎಪಿಎಂಸಿ ಗಳ ಕಾಯ್ದೆಗಳನ್ನು ಜಾರಿಗೆ ತರಬೇಡಿ ಎಂದು ಪ್ರಶ್ನೆ ಮಾಡಿದರೆ ಕಾಂಗ್ರೆಸ್‌ ನಾಯಕರು ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ ಈ ಸಮಯದಲ್ಲಿ ಈ ಎಲ್ಲ ಕಾಯ್ದೆಗಳು ಜಾರಿಗೆ ತರುವುದು ಸೂಕ್ತವೇ ಎಂದು ಬಿಜೆಪಿ ಸರ್ಕಾರವನ್ನು ಅವರು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಜನ ವಿರೋಧಿ ನೀತಿಗಳನ್ನು ಜಾರಿಗೆ ತರುವುದನ್ನು ಪ್ರಶ್ನೆ ಮಾಡದಿದ್ದರೆ ಎಲ್ಲವೂ ಸರಿ ಇರುತ್ತದೆ, ಆದರೆ ಅವರ ಅಂಕುಡೊಂಕುಗಳು ಭ್ರಷ್ಟಚಾರಗಳನ್ನು ಪ್ರಶ್ನೆ ಮಾಡಿ ಜನರ ಗಮನ ಸೆಳೆದರೆ ಕಾಂಗ್ರೆಸ್‌ನವರ ನಡವಳಿಕೆಗಳು ಸರಿ ಇಲ್ಲ ಎಂದು ದೂಷಿಸುತ್ತಾರೆ ಎಂದರು.

ದನದ ಬಾಲ ಹಿಡಿದ ಮರ, ಉಳವಿ ಕಾಡಿನಲ್ಲಿ ಅಚ್ಚರಿ!

ಸರ್ಕಾರ ಕೂಡಲೇ ಮತ್ತೊಮ್ಮೆ ಪರಿಶೀಲಿಸಿ ಈ ಕಾಯ್ದೆಯನ್ನು ವಾಪಸ್‌ ಪಡೆಯಬೇಕೆಂದು ಅವರು ಆಗ್ರಹಿಸಿದರು. ಗ್ರಾಪಂ ಅಧ್ಯಕ್ಷ ಬಿ.ಎಂ. ಮಹೇಶ್‌ಕುಮಾರ್‌, ಸದಸ್ಯರಾದ ಆರ್‌. ಮಹದೇವ್‌, ರವಿ, ಸ್ವಾಮಿ ಇದ್ದರು.