ಬೆಂಗಳೂರು(ಜು.26): ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಕೊರೋನಾ ಸೋಂಕು ಪರೀಕ್ಷೆಗೆ ಗಂಟಲ ದ್ರವದ ಮಾದರಿ ಸಂಗ್ರಹ ಹೆಚ್ಚಿಸಲು ಅನುವಾಗುವಂತೆ ಆರು ತಿಂಗಳ ಅವಧಿಗೆ 600 ಲ್ಯಾಬ್‌ ಟೆಕ್ನಿಶಿಯನ್‌ ನೇಮಿಸಿಕೊಳ್ಳಲು ಸರ್ಕಾರ ಅನುಮೋದನೆ ನೀಡಿದೆ.

ಬಸ್‌ ನಿಲ್ದಾಣ, ಜಂಕ್ಷನ್‌, ಮೈದಾನ, ಮಾಲ್‌ಗಳು ಸೇರಿದಂತೆ ಇನ್ನಿತರ ಕಡೆ ರಾರ‍ಯಂಡಂ ಪದ್ಧತಿಯಲ್ಲಿ ಸಾರ್ವಜನಿಕರ ಗಂಟಲ ದ್ರವದ ಮಾದರಿ ಸಂಗ್ರಹ ಹೆಚ್ಚಿಸುವ ಉದ್ದೇಶದಿಂದ 200 ಸಂಚಾರಿ ತಂಡಗಳನ್ನು ನಿಯೋಜಿಸುತ್ತಿದೆ.

ಸತತ 4ನೇ ದಿನ ಬೆಂಗಳೂರಲ್ಲಿ 2000ಕ್ಕೂ ಹೆಚ್ಚು ಕೊರೋನಾ ಪ್ರಕರಣ

ಈ ಹಿನ್ನೆಲೆಯಲ್ಲಿ 600 ಮಂದಿ ಲ್ಯಾಬ್‌ ಟೆಕ್ನಿಶಿಯನ್‌ ಅನ್ನು ಆರು ತಿಂಗಳ ಅವಧಿಗೆ ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದಡಿ ನೇಮಿಸಿಕೊಳ್ಳಲು ಪಾಲಿಕೆ ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.