Bengaluru: ಬೆಸ್ಕಾಂ ವಿದ್ಯುತ್ ಅದಾಲತ್‌ಗೆ ಉತ್ತಮ ಪ್ರತಿಕ್ರಿಯೆ: 2900 ಗ್ರಾಹಕರು ಭಾಗಿ

ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 47 ತಾಲೂಕುಗಳಲ್ಲಿ ವಿದ್ಯುತ್ ಅದಾಲತ್ ಆಯೋಜಿಸಲಾಗಿತ್ತು. ವಿದ್ಯುತ್ ಅದಾಲತ್ ನಲ್ಲಿ 2900 ಗ್ರಾಹಕರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನ ಬಗೆಹರಿಸಿಕೊಂಡರು.

Good Response to BESCOM Vidyut Adalat In Bengaluru gvd

ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಜು.16): ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 47 ತಾಲೂಕುಗಳಲ್ಲಿ ವಿದ್ಯುತ್ ಅದಾಲತ್ ಆಯೋಜಿಸಲಾಗಿತ್ತು. ವಿದ್ಯುತ್ ಅದಾಲತ್ ನಲ್ಲಿ 2900 ಗ್ರಾಹಕರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನ ಬಗೆಹರಿಸಿಕೊಂಡರು. ಗ್ರಾಹಕರಿಂದ ಸ್ವೀಕರಿಸಿರುವ 1045  ಮನವಿಗಳ ಪೈಕಿ 330 ಮನವಿಗಳಿಗೆ ಬೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ. ಇನ್ನುಳಿದ 715 ಮನವಿಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. 

ಗ್ರಾಮೀಣ ಭಾಗದ ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ ಪ್ರತಿ ತಿಂಗಳ ಮೂರನೇ ಶನಿವಾರದಂದು ವಿದ್ಯುತ್‌ ಅದಾಲತ್‌ ಆಯೋಜಿಸಲಾಗುತ್ತಿದ್ದು, ಜುಲೈ ತಿಂಗಳ ಅದಾಲತ್‌ನಲ್ಲಿ 8 ಜಿಲ್ಲೆಗಳ 47 ತಾಲೂಕುಗಳ ಪೈಕಿ 89 ಹಳ್ಳಿಗಳಲ್ಲಿ ಇಂದು ಅದಾಲತ್ ನಡೆಯಿತು. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಪಿ. ರಾಜೇಂದ್ರ ಚೋಳನ್‌ ಅವರು ತುಮಕೂರು ಜಿಲ್ಲೆಯ ಬೆಳಮುಗ ಗ್ರಾಮದಲ್ಲಿ ನಡೆದ ವಿದ್ಯುತ್‌ ಅದಾಲತ್‌ ಕಾರ್ಯಕ್ರಮದಲ್ಲಿ ಭಾಗಿಯಾದರು. ಬೆಸ್ಕಾಂನ ನಿರ್ದೇಶಕ ತಾಂತ್ರಿಕ ಡಿ ನಾಗಾರ್ಜುನ ಅವರು ದೊಡ್ಡಬಳ್ಳಾಪುರ ತಾಲೂಕಿನ ದಾಟಗಟ್ಟಮಡಗು ಗ್ರಾಮದಲ್ಲಿ ಅದಾಲತ್‌ನಲ್ಲಿ ಭಾಗಿಯಾಗಿ ಗ್ರಾಹಕರ ಸಮಸ್ಯೆಗಳನ್ನು ಆಲಿಸಿದರು.

ರಾಜ್ಯಾದ್ಯಂತ ಮುಂದುವರಿದ ಟ್ರಾನ್ಸ್‌ಫಾರ್ಮರ್‌ ದುರಸ್ಥಿ ಕಾರ್ಯ

ಇನ್ನೂ ವಾಲಿರುವ ವಿದ್ಯುತ್‌ ಕಂಬಗಳು, ನೀರಾವರಿ ವಿದ್ಯುತ್‌ ಸಂಪರ್ಕ, ವಿದ್ಯುತ್‌ ವ್ಯತ್ಯಯ, ಮತ್ತಿತರ ಸಮಸ್ಯೆಗಳ ಕುರಿತು ಗ್ರಾಹಕರು ನಿರ್ದೇಶಕರ ಗಮನ ಸೆಳೆದರು. ಈ ಸಂದರ್ಭದಲ್ಲಿ  ರಿಯಾಯಿತಿ ದರದ ವಿದ್ಯುತ್‌ ಸೇವೆಗಳು ಮತ್ತು ವಾಟ್ಸ್‌  ಆಪ್‌ ಸಹಾಯವಾಣಿ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲಾಯಿತು. ಇನ್ನೂ ತುಮಕೂರು ಜಿಲ್ಲೆಯ ಹತ್ತು ತಾಲೂಕುಗಳ ಪೈಕಿ  555 ಗ್ರಾಹಕರು ಅದಾಲತ್‌ನಲ್ಲಿ ಭಾಗವಹಿಸಿ 217ಮನವಿಗಳನ್ನು ಸಲ್ಲಿಸಿದರು. ಸುಮಾರು 50 ಮನವಿಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ ಎಂದು ಬೆಸ್ಕಾಂ ತಿಳಿಸಿದೆ.ದಾವಣಗೆರೆ ಜಿಲ್ಲೆಯ 7 ತಾಲೂಕುಗಳ ಗ್ರಾಮಿಣ ಭಾಗಗಳಲ್ಲಿ ನಡೆದ ಅದಾಲತ್‌ನಲ್ಲಿ 619 ಗ್ರಾಹಕರು ಪಾಲ್ಗೊಂಡು ತಾವು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನ ಸೆಳೆದರು.

Online Fraud; ಆನ್​ಲೈನ್​ನಲ್ಲಿ ಕರೆಂಟ್ ಬಿಲ್ ಪೇ ಮಾಡ್ತಿರಾದ್ರೆ ಹುಷಾರ್!

ಜಿಲ್ಲಾವಾರು ಅದಾಲತ್‌ನಲ್ಲಿ ಭಾಗವಹಿಸಿದ ಸಂಖ್ಯೆ: ರಾಮನಗರ ಜಿಲ್ಲೆ-364,  ಬೆಂಗಳೂರು ನಗರ ಜಿಲ್ಲೆ- 153,  ಚಿತ್ರದುರ್ಗ ಜಿಲ್ಲೆ- 259, ಕೋಲಾರ ಜಿಲ್ಲೆ -284, ಚಿಕ್ಕಬಳ್ಳಾಪುರ ಜಿಲ್ಲೆ- 325 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ 247 ಗ್ರಾಹಕರು ವಿದ್ಯುತ್ ಅದಾಲತ್ ನಲ್ಲಿ ಭಾಗವಹಿಸಿ ತಾವು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಕುರಿತು ಅಧಿಕಾರಿಗಳ ಮುಂದಿಟ್ಟರು. ಮೇಲಾಧಿಕಾರಿಗಳಿಗೆ ರವಾನಿಸಿರುವ 715 ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ತಿಳಿಸಿದರು. ವಿದ್ಯುತ್‌ ಸಂಪರ್ಕ, ವಿದ್ಯತ್‌ ಕಳ್ಳತನ, ಮೀಟರ್‌, ಹೆಚ್ಚುವರಿ ಟ್ರಾನ್ಸ್‌ ಫಾರ್ಮರ್‌, ಬಿಲ್ಲಿಂಗ್‌, ವಿದ್ಯುತ್‌ ವ್ಯತ್ಯಯ, ಹೊಸ ಸಂಪರ್ಕ, ಹೊಸ ಟ್ರಾನ್ಸ್‌ ಫಾರ್ಮರ್‌, ಎಲ್‌ಟಿ ಲೈನ್‌ ಬೇಡಿಕೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಗ್ರಾಹಕರು ಅದಾಲತ್‌ನಲ್ಲಿ ಅಧಿಕಾರಿಗಳ ಗಮನ ಸೆಳೆದರು.

Latest Videos
Follow Us:
Download App:
  • android
  • ios