ರಾಜ್ಯಾದ್ಯಂತ ಮುಂದುವರಿದ ಟ್ರಾನ್ಸ್‌ಫಾರ್ಮರ್‌ ದುರಸ್ಥಿ ಕಾರ್ಯ

*  ಎರಡು ತಿಂಗಳಲ್ಲಿ 27 ಸಾವಿರ ಟ್ರಾನ್ಸ್ ಫಾರ್ಮರ್ ದುರಸ್ಥಿಕಾರ್ಯ
*  ಟ್ರಾನ್ಸ್‌ಫಾರ್ಮರ್‌ಅಭಿಯಾನಕ್ಕೆ ಚಾಲನೆ ನೀಡಿದ್ದ ಇಂಧನ ಸಚಿವ ವಿ. ಸುನಿಲ್‌ ಕುಮಾರ್‌
*  ರಾಜ್ಯಾದ್ಯಂತ 2 ಲಕ್ಷಕ್ಕೂ ಅಧಿಕ ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆಯ ಗುರಿ
 

Continued Transformer Repair Work in Karnataka grg

ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು(ಜು.12):  ದುರಸ್ಥಿ ಸ್ಥಿತಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ ನಿರ್ವಹಣೆಯನ್ನು ಬೆಸ್ಕಾಂ ಮುಂದುವರಿಸಿದೆ. ಕಳೆದ ಎರಡು ತಿಂಗಳಿನಿಂದ ಇಲ್ಲಿ ತನಕ 27,787 ದುರಸ್ಥಿ ಕಾರ್ಯ ನಿರ್ವಹಣೆ ಮಾಡಿದೆ ಅಂತ ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಟ್ರಾನ್ಸ್‌ಫಾರ್ಮರ್‌ಗಳನ್ನು 8 ಜಿಲ್ಲೆಗಳ ವ್ಯಾಪ್ತಿಯಯಲ್ಲಿ ನಿರ್ವಹಣೆ ಮಾಡಿದೆ. 

ಮೇ. 5 ರಂದು ರಾಜ್ಯಾದ್ಯಂತ ಟ್ರಾನ್ಸ್‌ಫಾರ್ಮರ್‌ಗಳ ದುರಸ್ಥಿ ಕಾರ್ಯ ಅಭಿಯಾನಕ್ಕೆ ಚಾಲನೆ ಸಿಕ್ಕ ಬಳಿಕ ಬೆಸ್ಕಾಂ ಕಾರ್ಯಾಚರಣೆ ಮುಂದುವರಿಸಿದ್ದು, ನ್ಯೂನ್ಯತೆ ಹೊಂದಿರುವ ಹಾಗೂ ಅಸಮರ್ಪಕ  ಗ್ರೌಂಡಿಂಗ್‌ ಸಮಸ್ಯೆ ಹೊಂದಿರುವ ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆ ಮಾಡಿದೆ. 

Bengaluru Power Cut: ಬೆಂಗಳೂರಿನಲ್ಲಿ ಮೂರು ದಿನ ಪವರ್‌ ಕಟ್‌, ಯಾವ ಏರಿಯಾಗಳಲ್ಲಿ?

ಮೇ 5 ರಂದು ಟ್ರಾನ್ಸ್‌ ಫಾರ್ಮರ್‌ ಅಭಿಯಾನಕ್ಕೆ, ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಚಾಲನೆ ನೀಡಿದ್ದರು. ಸಚಿವರ ಸೂಚನೆ ಮೇರೆಗೆ ಅಭಿಯಾನವನ್ನು ಮುಂದುವರಿಸಲಾಗಿದ್ದು, ರಾಜ್ಯಾದ್ಯಂತ 2 ಲಕ್ಷಕ್ಕೂ ಅಧಿಕ ಟ್ರಾನ್ಸ್‌ ಫಾರ್ಮರ್‌ಗಳ ನಿರ್ವಹಣೆಯ ಗುರಿಯನ್ನು ಎಲ್ಲಾ ಎಸ್ಕಾಂಗಳಿಗೆ ನೀಡಲಾಗಿತ್ತು.  ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಹಾಗೂ ಜನನಿಬಿಡ ಪ್ರದೇಶಗಳಲ್ಲಿರುವ ಟ್ರಾನ್ಸ್‌ ಫಾರ್ಮರ್‌ಗಳ ಸಮಗ್ರ ನಿರ್ವಹಣೆಗೆ ಕ್ರಮ ಕೈಗೊಂಡಿದೆ ಎಂದು ಬೆಸ್ಕಾಂ ತಿಳಿಸಿದೆ. 

ಮೇ. 5ರಿಂದ ಜುಲೈ 12 ವರೆಗೆ ನಿರ್ವಹಣೆ ಮಾಡಿರುವ 27,787 ಟ್ರಾನ್ಸ್‌ ಫಾರ್ಮರ್‌ಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೇ 9524 ಟ್ರಾನ್ಸ್‌ ಫಾರ್ಮರ್‌ ಗಳ ನಿರ್ವಹಣೆಯನ್ನು ಬೆಸ್ಕಾಂ ಮಾಡಿದೆ. ತುಮಕೂರು ಜಿಲ್ಲೆ- 5232, ದಾವಣಗೆರೆ ಜಿಲ್ಲೆ- 2906, ಚಿತ್ರದುರ್ಗ- 2291, ಚಿಕ್ಕಬಳ್ಳಾಪುರ ಜಿಲ್ಲೆ- 2646, ರಾಮನಗರ ಜಿಲ್ಲೆ- 2372 ಮತ್ತು ಕೋಲಾರ ಜಿಲ್ಲೆಯಲ್ಲಿ 1429 ಟ್ರಾನ್ಸ್‌ ಫಾರ್ಮರ್‌ಗಳ ನಿರ್ವಹಣೆಯನ್ನು ಬೆಸ್ಕಾಂ ಪೂರ್ಣಗೊಳಿಸಿದೆ. 

ಬೆಂಗಳೂರು ನಗರ ಜಿಲ್ಲೆಯಲ್ಲಿ ನಿರ್ವಹಣೆ ಮಾಡಿರುವ 9524 ಟ್ರಾನ್ಸ್‌ ಫಾರ್ಮರ್‌ಗಳ ಪೈಕಿ ಬೆಸ್ಕಾಂನ  ದಕ್ಷಿಣ ವೃತ್ತ- 2713, ಪಶ್ಚಿಮ ವೃತ್ತ- 2253, ಪೂರ್ವ ವೃತ್ತ- 1961 ಮತ್ತು ಉತ್ತರ ವೃತ್ತದಲ್ಲಿ 1946 ಟ್ರಾನ್ಸ್‌ ಫಾರ್ಮರ್‌ಗಳ ನಿರ್ವಹಣೆ ಮಾಡಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

Latest Videos
Follow Us:
Download App:
  • android
  • ios