* ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿರುವ ಹಟ್ಟಿ ಚಿನ್ನದ ಗಣಿ * ದೇಶದಲ್ಲಿ ಅತ್ಯಧಿಕ ಚಿನ್ನ ಉತ್ಪಾದಿಸುವ ಚಿನ್ನದ ಗಣಿ * ಮೇ. 24ವರೆಗೆ ಹಟ್ಟಿ ಗಣಿಯಲ್ಲಿ ಚಿನ್ನ ಉತ್ಪಾದನೆ ಸ್ಥಗಿತ 

ಲಿಂಗಸುಗೂರು(ಮೇ.12): ಕೊರೋನಾ 2ನೇ ಅಲೆಯಿಂದ ನೌಕರರಲ್ಲಿ ಹೆಚ್ಚುತ್ತಿರುವ ಕೋವಿಡ್‌ ಸೋಂಕಿನ ಪರಿಣಾಮ ದೇಶದಲ್ಲಿ ಅತ್ಯಧಿಕ ಚಿನ್ನ ಉತ್ಪಾದಿಸುವ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಉತ್ಪಾದನೆ ಬಂದ್ ಆಗಿದೆ.

Click and drag to move

ಚಿನ್ನದ ಗಣಿಯ ನೌಕರರಿಗೆ ಕೊರೋನಾ ಸೋಂಕು ವ್ಯಾಪಕವಾಗಿ ತಗುಲುತ್ತಿದೆ. ಕೋವಿಡ್‌ ಸೋಂಕಿನಿಂದ ಕಾರ್ಮಿಕ ನೌಕರರ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹಟ್ಟಿ ಚಿನ್ನದ ಗಣಿಯಲ್ಲಿ ಚಿನ್ನ ಉತ್ಪಾದನೆಯನ್ನ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

"

ರಿಮ್ಸ್ ಮೆಡಿಕಲ್ ಕಾಲೇಜು ಪ್ರಾಂಶುಪಾಲರ ಹೆಸರಲ್ಲಿ ರೆಮ್‌ಡಿಸಿವಿರ್ ಗೋಲ್‌ಮಾಲ್.?

Click and drag to move

ಇಂದಿನಿಂದ(ಮೇ.12) ರಿಂದ ಮೇ. 24ವರೆಗೆ ಹಟ್ಟಿ ಗಣಿಯಲ್ಲಿ ಚಿನ್ನ ಉತ್ಪಾದನೆ ಸ್ಥಗಿತವಾಗಲಿದೆ. ಸಿಬ್ಬಂದಿ ಮನೆಯಲ್ಲಿಯೇ ಇರುವಂತೆ ಹಟ್ಟಿ ಕಂಪನಿ ಆಡಳಿತ ಮಂಡಳಿ ಆದೇಶಿಸಿದೆ. ಹಟ್ಟಿ ಚಿನ್ನದ ಗಣಿ ಆಸ್ಪತ್ರೆ, ಸೇರಿದಂತೆ ಅವಶ್ಯಕ ವಿಭಾಗಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಹಟ್ಟಿ ಕೇಂದ್ರ ಸ್ಥಾನ ಬಿಡುವಾಗ ಅನುಮತಿ ಪಡೆದು ಹೋಗಲು ನೌಕರರಿಗೆ ಆದೇಶದಲ್ಲಿ ಸೂಚನೆ ನೀಡಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಹಟ್ಟಿ ಚಿನ್ನದ ಗಣಿಯನನ್ನ ಬಂದ್ ಮಾಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona