Asianet Suvarna News Asianet Suvarna News

Mysuru: ನನ್ನನ್ನ ಗೋ ಮಾತೆ ಕೈ ಬಿಡಲ್ಲ: ಸಚಿವ ಪ್ರಭು ಚೌಹಾಣ್‌

*  ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಸಚಿವ ಚೌಹಾಣ್‌
*  ಸಿಎಂ ಬೊಮ್ಮಾಯಿ ಜನಪರ ಕೆಲಸ ಮಾಡ್ತಿದ್ದಾರೆ
*  ಮುಂದಿನ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರ್ತೀವಿ
 

Go Mata Will Save Me Says Animal Husbandry Minister Prabhu Chauhan grg
Author
Bengaluru, First Published Jan 28, 2022, 7:50 AM IST

ಮೈಸೂರು(ಜ.28):  ನನ್ನ ರೀತಿ ನಂಬರ್‌ ಒನ್‌ ಕೆಲಸ ಯಾರೂ ಮಾಡಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ, ಗೋ ಸಂಜೀವಿನಿ ಸೇರಿದಂತೆ ಅನೇಕ ಯೋಜನೆ ರೂಪಿಸಿದ್ದೇನೆ. ಗೋಮಾತೆ ಆಶೀರ್ವಾದ ನನ್ನ ಕೈಹಿಡಿಯುತ್ತೆ. ನನ್ನನ್ನ ಗೋ ಮಾತೆ ಕೈ ಬಿಡಲ್ಲ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ. ಚೌಹಾಣ್‌(Prabhu Chauhan) ತಿಳಿಸಿದರು.

ಮೈಸೂರಿನ(Mysuru) ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಗುರುವಾರ ಸಂಜೆ ಭೇಟಿ ನೀಡಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಸಲ ಕ್ಯಾಬಿನೆಟ್‌ ರಚನೆಯಾದಾಗಲೂ ನೀನು ಮಿನಿಸ್ಟರ್‌ ಆಗ್ತಿಯ ಅಂತ ಯಾರೂ ಹೇಳಲಿಲ್ಲ. ಎರಡನೇ ಸಲ ಯಾರೂ ಹೇಳಲಿಲ್ಲ. ಆದರೆ, ಈ ಬಾರಿ ಮಾಧ್ಯಮದಲ್ಲಷ್ಟೇ(Media) ಕ್ಯಾಬಿನೆಟ್‌ನಿಂದ ಕೈ ಬಿಡ್ತಾರೆ ಅಂತ ಬರ್ತಿದೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. 32 ವರ್ಷದಿಂದ ಕೆಲಸ ಮಾಡ್ತಿದ್ದೀನಿ ಎಂದರು.

Go Mata Will Save Me Says Animal Husbandry Minister Prabhu Chauhan grg

Gaushala: ಮಾಸಾಂತ್ಯದೊಳಗೆ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ: ಸಚಿವ ಚವ್ಹಾಣ್‌

ಸಿಎಂ ಬೊಮ್ಮಾಯಿ(Basavaraj Bommai) ಅವರು ಜನಪರ ಕೆಲಸ ಮಾಡ್ತಿದ್ದಾರೆ. ಅವರು ಒಳ್ಳೆ ನಿರ್ಣಯ ತಗೋತಿದ್ದಾರೆ, ನಾವು ಚನ್ನಾಗಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ(Election) ನಾವೇ ಅಧಿಕಾರಕ್ಕೆ ಬರ್ತೀವಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹೊರ ಜಿಲ್ಲೆಗಳ ಉಸ್ತುವಾರಿಗೆ ಅಸಮಾಧಾನ ಕುರಿತು ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್‌, ಸಿಎಂ ನಿರ್ಣಯ ಕೈಗೊಂಡು ಜಿಲ್ಲಾ ಉಸ್ತುವಾರಿ ನೀಡಿದ್ದಾರೆ. ಎಲ್ಲಿ ಹೇಳ್ತಾರೋ, ಅಲ್ಲಿ ಹೋಗಿ ಕೆಲಸ ಮಾಡ್ತೀನಿ. ಸದ್ಯ ಯಾದಗಿರಿ ಜಿಲ್ಲೆ ಉಸ್ತುವಾರಿ ಕೊಟ್ಟಿದ್ದಾರೆ. ನಾನು ಖುಷಿಯಾಗಿದ್ದೇನೆ. ನನಗೆ ಯಾವುದೇ ಬೇಸರ ಇಲ್ಲ. ನಾನು ಕೆಲಸಗಾರ, ಎಲ್ಲಿ ಹಾಕಿದ್ರು ಕೆಲಸ ಮಾಡ್ತೀನಿ ಎಂದರು.

400 ಪಶು ವೈದ್ಯರ ನೇಮಕ

ರಾಜ್ಯದಲ್ಲಿ(Karnataka0 ಸಾಕಷ್ಟು ದಿನಗಳಿಂದ ಪಶು ವೈದ್ಯರ ನೇಮಕಾತಿ ನೆನೆಗುದಿಗೆ ಬಿದ್ದಿತ್ತು. 400 ವೈದ್ಯರ ನೇಮಕಕ್ಕೆ ಸಂಪುಟದ ಒಪ್ಪಿಗೆ ಸಿಕ್ಕದೆ. ಅದಕ್ಕಾಗಿ ತಕ್ಷಣ ಸುತ್ತೂರು ಶ್ರೀಗಳನ್ನು ಭೇಟಿ ಮಾಡಲು ಬಂದೆ. ಎಲ್ಲೇ ಹೋದರು ವೈದ್ಯರ ಕೊರತೆ ಎದ್ದು ಕಾಣುತ್ತಿತ್ತು. ನಾನು ಪದೇ ಪದೇ ಹೋಗಿ ಹೋಗಿ ಒತ್ತಡ ತಂದು ಅನುಮೋದನೆ ಮಾಡಿಸಿದ್ದೇನೆ. ಆನ್‌ಲೈನ್‌ ಮೂಲಕ ನೇರ ನೇಮಕಾತಿ ಅವಕಾಶ ಇದೆ. ಆ ಮೂಲಕ ವೈದ್ಯರ ನೇಮಕ ಆಗಲಿದೆ ಎಂದು ಅವರು ಹೇಳಿದರು.

ದೇಶದ ಇತಿಹಾಸದಲ್ಲಿ ಪ್ರಾಣಿ ಸಂಜೀವಿನಿ ವಾಹನ ತರಲಾಗಿದೆ. ಈಗಾಗಲೇ 291 ಆಂಬುಲೆನ್ಸ್‌ಗಳಿಗೆ(Ambulance) ಟೆಂಡರ್‌ ಆಗಿದೆ. ಫೆಬ್ರವರಿ ಅಂತ್ಯದ ವೇಳೆಗೆ ತಾಲೂಕುವಾರು ಒಂದೊಂದು ಆಂಬುಲ್ಯೆನ್ಸ್‌ ನೀಡಲಾಗುತ್ತೆ. ನಾನು ಅಧಿಕಾರಕ್ಕೆ ಬಂದ ಮೇಲೆ ಗೋ ಹತ್ಯೆ ನಿಷೇಧ ಕಾಯ್ದೆ ಸಾಕಷ್ಟು ಯೋಜನೆ ತಂದಿದ್ದೇನೆ ಎಂದು ಅವರು ತಿಳಿಸಿದರು.

ಹಲವಾರು ವರ್ಷಗಳಿಂದ ಪಶುಸಂಗೋಪನೆ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಗಳು ಸೇರಿದಂತೆ ಸಾವಿರಾರು ಹುದ್ದೆಗಳು ಖಾಲಿಯಿದ್ದು ಯಾವ ಸಚಿವರು ನೇಮಕಾತಿಗೆ ಆಸಕ್ತಿ ತೋರಿರಲಿಲ್ಲ. ಅಧಿಕಾರವಹಿಸಿಕೊಂಡ ದಿನದಿಂದ ಇಲಾಖೆಯ ಹುದ್ದೆಗಳ ಭರ್ತಿಗೆ ಹೆಚ್ಚಿನ ಒತ್ತು ನೀಡಿ ನಿರಂತರ ಮುಖ್ಯಮಂತ್ರಿಗಳೊಂದಿಗೆ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಖಾಲಿ ಹುದ್ದೆ ಭರ್ತಿಗೆ ಕ್ರಮ ವಹಿಸಿದ್ದೆ ಎಂದು ಹೇಳಿದರು.

ಪ್ರತಿ ಜಿಲ್ಲೆಯಲ್ಲಿ ಗೋಶಾಲೆ, ಗೋಮೂತ್ರದಿಂದ ಸೋಪು, ಶಾಂಪು ತಯಾರಿ: ಸಚಿವ ಚವ್ಹಾಣ್‌!

ಗೋಪಾಲಕರಿಗೆ ವೈದ್ಯಕೀಯ ಹುದ್ದೆಗಳನ್ನು ಮಂಜೂರು ಮಾಡುವುದರ ಮೂಲಕ ಪಶುಪಾಲಕ ರೈತರ ಬೇಡಿಕೆಗಳಿಗೆ ಸಿಎಂ  ಸ್ಪಂದಿಸಿದ್ದಾರೆ. ಒಟ್ಟು ಖಾಲಿ ಇರುವ 900ಕ್ಕೂ ಹೆಚ್ಚು ಹುದ್ದೆಗಳ ಪೈಕಿ 400  ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದೆ. ಆರ್ಥಿಕ ಇಲಾಖೆಯ ಮೂಲಕ ಪ್ರಸ್ತಾವನೆಗೆ ಸಹಮತಿ ಪಡೆಯಲಾಗಿತ್ತು.  ಈಗ ಅದಕ್ಕೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ತಕ್ಷಣ ಅಧಿಸೂಚನೆ ಹೊರಡಿಸಲು ಕ್ರಮ ವಹಿಸಲಾಗುವುದು ಎಂದರು.

ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ‌ ವಿಳಂಭವಾದ್ದರಿಂದ ಕಳೆದ ಹಲವು ವರ್ಷಗಳಿಂದ ಹುದ್ದೆಗಳು ಖಾಲಿ ಇದ್ದು ಸಮರ್ಪಕವಾಗಿ ರೋಗ ನಿಯಂತ್ರಣ, ಪಶು ಆರೋಗ್ಯ ಸೇವೆ, ಕೃತಕ ಗರ್ಭಧಾರಣೆ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ತೊಂದರೆಯಾಗುತ್ತಿತ್ತು ಎಂದರು.

ಗೋಹತ್ಯೆ ನಿಷೇಧ, ಜಿಲ್ಲೆಗೊಂದು ಗೋಶಾಲೆ ಸ್ಥಾಪನೆ ಮತ್ತು ನಿರ್ವಹಣೆ, ಪ್ರಾಣಿ ಕಲ್ಯಾಣ ಸಹಾಯವಾಣಿ, ಪಶು ಸಂಜೀವಿನಿ ಅಂಬ್ಯುಲೆನ್ಸ್ ಮತ್ತು ಪಾಲಿ ಕ್ಲಿನಿಕ್ ಸೇವೆಗಳಿಗೆ ಹಿನ್ನಡೆಯಾಗುತ್ತಿತ್ತು. ಪ್ರತೀ ಬಾರಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಇಲಾಖಾ ಅಧಿಕಾರಿಗಳು ಸಿಬ್ಬಂದಿ ಕೊರತೆ ನೀಗಿಸಲು ಮನವಿ ಮಾಡಿಕೊಳ್ಳುತ್ತಿದ್ದರು. ಹೊಸ ನೇಮಕಾತಿಯಿಂದ ಪಶುಪಾಲಕರಿಗೆ ರೈತರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
 

Follow Us:
Download App:
  • android
  • ios