ಮಂಗಳೂರಿಗೆ ರೈಲ್ವೆ ಯೋಜನೆಯಲ್ಲಿ ವಿಶೇಷ ಆದ್ಯತೆ ನೀಡಿ: ಕೇಂದ್ರ ಸಚಿವರಿಗೆ ನಳಿನ್‌ ಮನವಿ

ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಾಣ, ಮಂಗಳೂರು ಕೇಂದ್ರ ರೈಲು ನಿಲ್ದಾಣದ ಎಲ್ಲ ಫ್ಲ್ಯಾಟ್‌ಫಾರಂಗಳಿಗೂ ರೂಫಿಂಗ್‌ ಅಳವಡಿಕೆ, ಮಂಗಳೂರು- ಬೆಂಗಳೂರು ನಡುವ ಹಳಿ ಡಬ್ಲಿಂಗ್‌, ಮಂಗಳೂರು-ಬೆಂಗಳೂರು ನಡುವೆ ರೈಲ್ವೆ ಲೈನ್‌ ಸಂಪೂರ್ಣ ವಿದ್ಯುದೀಕರಣ, ಮಂಗಳೂರು ಪಾಂಡೇಶ್ವರದಲ್ಲಿ 4 ಲೈನ್‌ ಆರ್‌ಒಬಿ ನಿರ್ಮಾಣ ಹಾಗೂ ಸುಬ್ರಹ್ಮಣ್ಯದಲ್ಲಿ ಹೆಚ್ಚುವರಿ ಟರ್ಮಿನಲ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ನಳಿನ್‌ ಕುಮಾರ್‌ ಕಟೀಲ್‌ 

Give Special Priority to Mangaluru in Railway Project Says BJP MP Nalin Kumar Kateel grg

ಮಂಗಳೂರು(ಆ.04):  ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದರೊಂದಿಗೆ ಮಂಗಳೂರಿಗೆ ವಿಶೇಷ ಆದ್ಯತೆ ನೀಡಿ ರೈಲ್ವೆ ಯೋಜನೆಗಳನ್ನು ಒದಗಿಸುವಂತೆ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಗುರುವಾರ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಾಣ, ಮಂಗಳೂರು ಕೇಂದ್ರ ರೈಲು ನಿಲ್ದಾಣದ ಎಲ್ಲ ಫ್ಲ್ಯಾಟ್‌ಫಾರಂಗಳಿಗೂ ರೂಫಿಂಗ್‌ ಅಳವಡಿಕೆ, ಮಂಗಳೂರು- ಬೆಂಗಳೂರು ನಡುವ ಹಳಿ ಡಬ್ಲಿಂಗ್‌, ಮಂಗಳೂರು-ಬೆಂಗಳೂರು ನಡುವೆ ರೈಲ್ವೆ ಲೈನ್‌ ಸಂಪೂರ್ಣ ವಿದ್ಯುದೀಕರಣ, ಮಂಗಳೂರು ಪಾಂಡೇಶ್ವರದಲ್ಲಿ 4 ಲೈನ್‌ ಆರ್‌ಒಬಿ ನಿರ್ಮಾಣ ಹಾಗೂ ಸುಬ್ರಹ್ಮಣ್ಯದಲ್ಲಿ ಹೆಚ್ಚುವರಿ ಟರ್ಮಿನಲ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ನಳಿನ್‌ ಕುಮಾರ್‌ ಕಟೀಲ್‌ ಮನವಿ ಮಾಡಿದ್ದಾರೆ.

ಸ್ಮಾರ್ಟ್‌ಸಿಟಿ ಕಾಮಗಾರಿ ಡಿಸೆಂಬರ್‌ ಅಂತ್ಯದೊಳಗೆ ಪೂರ್ಣ: ಸಚಿವ ದಿನೇಶ್‌ ಗುಂಡೂರಾವ್‌

ಹೊಸ ರೈಲುಗಳಿಗೆ ಬೇಡಿಕೆ:

ರೈಲ್ವೆ ಸಚಿವರೊಂದಿಗೆ ಮಾತುಕತೆ ನಡೆಸಿರುವ ನಳಿನ್‌ ಕುಮಾರ್‌ ಅವರು, ಸುಬ್ರಹ್ಮಣ್ಯ ರೋಡ್‌ನಿಂದ ಮಂಗಳೂರಿಗೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಜರ್‌ ರೈಲಿನ ಮರು ಪ್ರಾರಂಭಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲು, ಮಂಗಳೂರು-ಮುಂಬಯಿ ನಡುವೆ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲು, ತಿರುವನಂತಪುರ-ಕಾಸರಗೋಡು ನಡುವೆ ಓಡಾಡುತ್ತಿರುವ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲನ್ನು ಮಂಗಳೂರು ವರೆಗೆ ವಿಸ್ತರಣೆ, ಮಂಗಳೂರು ಕೇಂದ್ರ ನಿಲ್ದಾಣ-ಕಲಬುರಗಿ/ಬೀದರ್‌ಗೆ ಹಾಸನ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಗುಂಟಕಲ್‌, ಮಂತ್ರಾಲಯ ರಸ್ತೆ, ರಾಯಚೂರು, ಯಾದಗಿರಿ, ವಾಡಿ ಮೂಲಕ ಹೊಸ ರೈಲು ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios