ಮಂಡ್ಯ(ಜು.23): ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಧೈರ್ಯ ಸಿಗಲಿ ಅಂತ ಮಂಡ್ಯ ಬಿಜೆಪಿ ಕಾರ್ಯಕರ್ತರು ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ. ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಸಂಬಂಧ ಪರಿಸ್ಥತಿ ನಿಭಾಯಿಸಲು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಧೈರ್ಯ ಸಿಗಲೆಂದು ಶಕ್ತಿ ದೇವತೆಯ ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಫೀಕರ್‌ಗೆ ಧೈರ್ಯ ತುಂಬಲು ಪೂಜೆ:

ಮಂಡ್ಯದ ಶಕ್ತಿದೇವತೆ ಕಾಳಿಕಾಂಭ ದೇವಿಗೆ ವಿಷೇಶವಾಗಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೆಸರಲ್ಲಿ ಅರ್ಚನೆ ಮಾಡಲಾಗಿದೆ. ಸ್ಪೀಕರ್‌ಗೆ ಧೈರ್ಯ ನೀಡುವಂತೆ ಶಕ್ತಿದೇವತೆ ಮೊರೆ ಹೋದ ಬಿಜೆಪಿ ಕಾರ್ಯಕರ್ತರು ವಿಷೇಶ ಪೂಜೆ ಸಲ್ಲಿಸಿದ್ದಾರೆ. ಬಿಎಸ್‌ವೈ ಸಿಎಂ ಆಗಲಿ ಎಂದು ತಡೆ ಹೊಡೆಸಿದ್ದಾರೆ.

BSYಗೆ ಮತ್ತೆ ಸಿಎಂ ಪಟ್ಟ : ಶಿವಮೊಗ್ಗದಲ್ಲಿ ವಿಶೇಷ ಪೂಜೆ

ಬಿಎಸ್‌ವೈ ಸಿಎಂ ಆಗಲು ಅಷ್ಟ ದಿಕ್ಕುಗಳಲ್ಲಿ ತಡೆ:

ಹಾವು ಸಾಯಬಾರದು ಕೊಲು ಮುರಿಯಬಾರದು ಎಂಬಂತೆ ಸ್ಪೀಕರ್ ಸದನ ನಡೆಸುತ್ತಿದ್ದಾರೆ ಆಡಳಿತ ಪಕ್ಷದ ಭಯ ಸ್ಪೀಕರ್ ರವರನ್ನು ಕಾಡುತ್ತಿದ್ಯ ಎಂಬ ಅನುಮಾನ ಕಾಡ್ತಿದೆ. ಹಾಗಾಗಿ ಸ್ಪೀಕರ್‌ರವರಿಗೆ ಕಾಳಿಕಾಂಭ ದೇವಿ ಧೈರ್ಯ ತುಂಬಲಿ ಎಂದು ದೇವಿಗೆ ವಿಷೇಶ ಪೂಜೆ ಸಲ್ಲಿಸಿದ್ದೇವೆ ಹಾಗೂ ಯಡಿಯೂರಪ್ಪರಿಗೆ ಎದುರಾಗಿರುವ ತೊಡಕುಗಳೆಲ್ಲಾ ನಿವಾರಣೆಯಾಗಿ ಬಿಎಸ್‌ವೈ ಸಿಎಂ ಆಗಲಿ ಎಂದು ಅಷ್ಟ ದಿಕ್ಕು ಗಳಲ್ಲೂ ತಡೆ ಹೊಡೆಸಿದ್ದೇವೆ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ.