ಶಿವಮೊಗ್ಗ [ಜು.17] : ರಾಜ್ಯ ಸರ್ಕಾರ ಒಂದೆಡೆ ವಿಶ್ವಾಸ ಮತಕ್ಕೆ ಮುಂದಾಗಿದ್ದರೆ ಇತ್ತ, ರಾಜೀನಾಮೆ ನೀಡಿದ ಶಾಸಕರಿಗೆ ಯಾವುದೇ ಒತ್ತಡ ಹೇರುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. 

ಇನ್ನೊಂದೆಡೆ ಬಿಜೆಪಿ ನಾಯಕ  ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ಏರಲಿ ಎಂದು ಹೋಮ ಹವನಗಳನ್ನು ನಡೆಸಲಾಗುತ್ತಿದೆ. ಶಿವಮೊಗ್ಗ ಜಿಲ್ಲಾ ಅರ್ಚಕರ ಸಂಘದಿಂದ ಯಡಿಯೂರಪ್ಪ ಅಧಿಕಾರಕ್ಕೆ ಏರಲಿ ಎಂದು ಹೋಮ ಹವನ ಮಾಡಲಾಗಿದೆ. 

ಕರ್ನಾಟಕ ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭಾರತೀಯ ಜನತಾ ಪಕ್ಷ ಮತ್ತೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿ ಎನ್ನುವ ಉದ್ದೇಶದಿಂದ ವಿಶೇಷ ಪೂಜೆ ನೆರವೇರಿಸಲಾಗಿದೆ. ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರದಲ್ಲಿ ಪೂಜಾ ಪ್ರಕ್ರಿಯೆಗಳು ನಡೆದಿವೆ. 

ಬಿಎಸ್  ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿಯಲಿ ಎಂದು ಪ್ರಾರ್ಥಿಸಿ ನಡೆದ ವಿಶೇಷ ಹೋಮದಲ್ಲಿ ಪುತ್ರಿ ಅರುಣಾದೇವಿ ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.