ಕುಣಿಗಲ್(ಜು.24)‌: ಪಾತ್ರೆ ತೊಳೆಯುವ ಕಾಯಕ ಮಾಡಿಕೊಂಡೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 93 ಅಂಕಗಳನ್ನು ಗಳಿಸಿ ಪಟ್ಟಣದ ಜ್ಞಾನಭಾರತಿ ಕಾಲೇಜಿನ ಧನುಷ ಆರ್‌. ಸಾಧನೆ ಮಾಡಿದ್ದಾಳೆ.

ಪಟ್ಟಣದ ಪತಂಜಲಿ ನಗರದ ರಂಗಸ್ವಾಮಿ ಮತ್ತು ಗಂಗಮ್ಮ ಎಂಬುವರ ಪುತ್ರಿ ಧನುಷ ಕಾಲೇಜಿನ ಓದಿನ ಜೊತೆಗೆ ಪುಟ್‌ಬಾತ್‌ನಲ್ಲಿ ಚಿಕ್ಕ ತಳ್ಳುವ ಗಾಡಿ ಇಟ್ಟುಕೊಂಡಿರುವ ತನ್ನ ತಂದೆ-ತಾಯಂದಿರಿಗೆ ಹೋಟೆಲ್‌ ಕೆಲಸದಲ್ಲಿ ನೆರವಾಗುತಿದ್ದಾಳೆ.

CBSE ಫಲಿತಾಂಶ: ದಿವ್ಯಾಂಗ ವಿದ್ಯಾರ್ಥಿಗಳ ವಿಭಾಗದಲ್ಲಿ ಅನುಷ್ಕಾ ಟಾಪರ್

ಕಾಲೇಜಿಗೆ ಬರುವ ಮುನ್ನ ಮತ್ತು ಮುಗಿದ ಬಳಿಕ ಹೋಟೆಲ್‌ನಲ್ಲಿ ಮುಸುರೆ ತಿಕ್ಕುವುದು, ಪಾರ್ಸೆಲ್‌ ಕಟ್ಟುವುದು, ಮಾಡುತ್ತಾಳೆ. ಈಕೆ ಭೌತಶಾಸ್ತ್ರ-100, ಗಣಿತ-100,ರಸಾಯನಶಾಸ್ತ್ರ-97 ಮತ್ತು ಜೀವಶಾಸ್ತ್ರ-95 ಅಂಕ ಗಳಿಸಿರುವ ಈ ವಿದ್ಯಾರ್ಥಿ ಮುಂದಿನ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಇಂಜಿನಿಯರ್‌ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾಳೆ.

ಮುಂದುವರಿಯುತ್ತಿರುವ ತಂತ್ರಜ್ಞಾನಕ್ಕೆ ನಾವು ಹೊಂದಿಕೊಳ್ಳಬೇಕು. ದೇಶವನ್ನು ಮುನ್ನೆಡಸಬೇಕು. ದೇಶಕ್ಕಾಗಿ ನಾನು ಅಳಿಲು ಸೇವೆ ಸಲ್ಲಿಸಬೇಕು ಎನ್ನುವ ಕಾರಣಕ್ಕಾಗಿ ಇಂಜಿನಿಯರ್‌ ಆಗುವ ಹಂಬಲ ಹೊಂದಿರುವಾಗಿ ಈಕೆ ಹೇಳುತ್ತಾಳೆ. ನನ್ನ ಈ ಸಾಧನೆಗೆ ಕಾಲೇಜಿನ ಉಪನ್ಯಾಸಕ ವರ್ಗ ಮತ್ತು ಆಡಳಿತ ಮಂಡಳಿಯ ಪ್ರೋತ್ಸಾಹ ಮತ್ತು ಸಹಕಾರ ಕಾರಣ ಜೊತೆಗೆ ಮನೆಯಲ್ಲಿ ತಂದೆ ತಾಯಿಗಳ ಬೆಂಬಲ ನನಗೆ ಜಾಸ್ತಿ ಸಿಕ್ತು ಎಂದು ಧನುಷಾ ಭಾವುಕವಾಗಿ ಮಾತನಾಡಿದ್ದಾಳೆ.

ಓದು ಬೇಡ ಎಂದವ ವಿಜಯಪುರಕ್ಕೇ ಫಸ್ಟ್!

ಕಾಲೇಜಿನಲ್ಲಿ ಪರೀಕ್ಷೆಗೂ 4 ತಿಂಗಳು ಮುಂಚಿತವಾಗಿ ರಾತ್ರಿ ಪಾಠ ಆರಂಭಿಸುವುದು ಪ್ರತಿ ವರ್ಷ ನಡೆದುಕೊಂಡು ಬರುತ್ತಿರುವ ವಾಡಿಕೆ. ಪೋಷಕರ ಒಪ್ಪಿಗೆ ಮೇರೆಗೆ ಕಾಲೇಜಿನಲ್ಲೇ ರಾತ್ರಿ ವೇಳೆ ಉಳಿದುಕೊಂಡು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಇಲ್ಲಿ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳ ಮೇಲುಸ್ತುವಾರಿಗೆ ಪ್ರತ್ಯೇಕ ಉಪನ್ಯಾಸಕರು ಇರುತ್ತಾರೆ. ಸಂಜೆ 7ಕ್ಕೆ ಕಾಲೇಜಿಗೆ ಬರುತ್ತಿದ್ದರೆ, ರಾತ್ರಿ 11 ಗಂಟೆವರೆಗೂ ಓದಿ ನಂತರ ಮನೆಗೆ ವಾಪಾಸ್ಸಾಗುತ್ತಿದ್ದಳು.