ಓದು ಬೇಡ ಎಂದವ ವಿಜಯಪುರಕ್ಕೇ ಫಸ್ಟ್!
ಓದು ಬಿಡಲು ಹೋಗಿದ್ದ ವಿದ್ಯಾರ್ಥಿ ತಾಲೂಕಿಗೆ ಫಸ್ಟ್| ಸಿಂದಗಿಯ ಮಾಳಪ್ಪ ಸಾಧನೆ
ಸಿಂದಗಿ(ಜು.15): ಮಕ್ಕಳ ಮದುವೆ, ಕೃಷಿಗೆ, ವಿದ್ಯಾಭ್ಯಾಸಕ್ಕೆ ಲಕ್ಷಾಂತರ ರು. ಸಾಲ ಮಾಡಿ ಸೋತು ಹೋಗಿದ್ದ ತಂದೆಗೆ ನೆರವಾಗುವ ಉದ್ದೇಶದಿಂದ ತನ್ನ ವಿದ್ಯಾಭ್ಯಾಸವನ್ನೇ ಅರ್ಧಕ್ಕೆ ನಿಲ್ಲಿಸಬೇಕೆಂದಿದ್ದ ಮಾಳಪ್ಪ ನಿಂಗಪ್ಪ ಹೊಸಮನಿ ಇದೀಗ ಪಿಯುಸಿ ಪರೀಕ್ಷೆಯಲ್ಲಿ ಹುಬ್ಬೇರಿಸುವಂಥ ಸಾಧನೆ ಮೆರೆದಿದ್ದಾರೆ.
ವಿಜಯಪುರದ ಸಿಂದಗಿ ಪಟ್ಟಣದ ಜ್ಞಾನ ಭಾರತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ಈತ ಪಿಯುಸಿ ಫಲಿತಾಂಶದ ಕಲಾ ವಿಭಾಗದಲ್ಲಿ 600 ಅಂಕಗಳಿಗೆ 586 ಅಂಕಗಳನ್ನು ತೆಗೆದುಕೊಳ್ಳುವ ಮೂಲಕ ಶೇ.97.66 ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ದ್ವಿತೀಯ ಪಿಯುಸಿ ರಿಸಲ್ಟ್: ಡಿಸ್ಟಿಂಕ್ಷನ್‌ನಲ್ಲಿ ಪಾಸಾದ್ರೂ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ತನ್ನ ಸಾಧನೆ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿರುವ ಮಾಳಪ್ಪ, ಸಿಂದಗಿಯಲ್ಲಿಯೇ ಬಾಡಿಗೆ ರೂಮ್ ಮಾಡಿ ಪ್ರತಿ ತಿಂಗಳಿಗೆ .600 ಸಂದಾಯ ಮಾಡುತ್ತಿದ್ದೆ. ನನ್ನ ತಂದೆ ತಿಂಗಳಿಗೆ ಕೇವಲ .1000 ಮಾತ್ರ ನೀಡುತ್ತಿದ್ದರು. ಅದರಲ್ಲಿಯೇ 2 ವರ್ಷ ಕಷ್ಟಪಟ್ಟು ಕಲಿತೆ. ರಜೆ ಇದ್ದಾಗ ಊರಿಗೆ ಹೋದಾಗ ನಮ್ಮ ಹೊಲದಲ್ಲಿ ದುಡಿಯುತ್ತಿದ್ದೆ ಎಂದು ತಿಳಿಸಿದ್ದಾರೆ.