ನವದೆಹಲಿ(ಜು.16): ಸಿಬಿಎಸ್‌ಇ ಪಿಯುಸಿ ಪರೀಕ್ಷೆ ಪರೀಕ್ಷೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಬಹಳಷ್ಟು ಸ್ಫೂರ್ಥಿದಾಯಕ ಕಥೆಗಳು ಹೊರಬರುತ್ತಿವೆ. ಇದರಲ್ಲಿ ಒಬ್ಬ ವಿದ್ಯಾರ್ಥಿನಿ ಅನುಷ್ಕಾ ಪಂಡ ಪಿಯುಸಿ ಸಾಧನೆಯೂ ಒಂದು.

ಗುರ್‌ಗಾವ್ ವಿಶೇಷ ಚೇತನ ಪಿಯುಸಿ ವಿದ್ಯಾರ್ಥಿನಿ ಸಿಬಿಎಸ್‌ಇ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 95.2 ಅಂಕ ಗಳಿಸಿದ್ದಾಳೆ. ಇದು ದಿವ್ಯಾಂಗ ಮಕ್ಕಳಲ್ಲಿ ಪಡೆದ ಅಧಿಕ ಅಂಕ. ಈಕೆ ಫಿಸಿಕ್ಸ್ ಸಬ್ಜೆಕ್ಟ್‌ನಲ್ಲಿಯೇ ಶೇಕಡಾ 99 ಅಂಕ ಪಡೆದಿದ್ದಾಳೆ.

12ನೇ ತರಗತಿ ಪರೀಕ್ಷೆ: ಅವಳಿಗಳಿಗೆ ಅಂಕಗಳೂ ಸಮಾನ!

ಸ್ಥಿರತೆಯೇ ನನ್ನ ಯಶಸ್ಸಿಗೆ ಕಾರಣ ಎಂದಿದ್ದಾಳೆ ಅನುಷ್ಕಾ. 10ನೇ ತರಗತಿ ಪರೀಕ್ಷೆಯಲ್ಲಿ ಶೇ.  97.8 ಅಂಕ ಪಡೆದಿದ್ದಳು.  ಅನುಷ್ಕಾ ಚೆಸ್ ಆಟಗಾರ್ತಿಯಾಗಿದ್ದು, ಸಾಫ್ಟ್‌ವೇರ್ ಎಂಜಿನಿಯರ್ ಆಗಬೇಕೆಂದು ಬಯಸಿದ್ದಾಳೆ. ಗೂಗಲ್‌ನಲ್ಲಿ ಕೆಲಸ ಮಾಡಬೇಕೆಂಬುದು ಈಕೆಯ ಆಸೆ.

ಅಂಗವೈಕಲ್ಯ, ಬಡತನವನ್ನೂ ಮೀರಿ ಪಿಯುಸಿ ಕಲಿತ ಬಂಟ್ವಾಳದ 'ಭಾಗ್ಯ'..!

ಓದುವುದು, ಪೈಂಟಿಂಗ್, ಸೇರಿ ಸಂಗೀತ ಬಗ್ಗೆಯೂ ಈಕೆಗೆ ಅತೀವ ಆಸಕ್ತಿ ಇದೆ. ಕಳೆದ 10 ವರ್ಷದಿಂದ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾಳೆ ಅನುಷ್ಕಾ. ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಈಕೆ ಬಳಲುತ್ತಿದ್ದು, ಇದರಿಂದ ಈಕೆಗೆ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ.