Mysuru : ಬುಡಕಟ್ಟು ಜನಾಂಗಕ್ಕೆ ದೀಪಾವಳಿ ಹಬ್ಬದ ಪ್ರಯುಕ್ತ ಸೌರ ದೀಪದ ಕೊಡುಗೆ
ಮೈಂಡ್ ಟ್ರೀ ಫೌಂಡೇಷನ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ತಾಲೂಕಿನ ಬಿ ಮಟ್ಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕೂಡಗಿ ಹಾಡಿ ಮತ್ತು ಆಲನಹಳ್ಳಿ ಹಾಡಿಯಲ್ಲಿ ಸೌರ ವಿದ್ಯುತ್ ಶಕ್ತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಸರಗೂರು(ಅ.26): ಮೈಂಡ್ ಟ್ರೀ ಫೌಂಡೇಷನ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ತಾಲೂಕಿನ ಬಿ ಮಟ್ಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕೂಡಗಿ ಹಾಡಿ ಮತ್ತು ಆಲನಹಳ್ಳಿ ಹಾಡಿಯಲ್ಲಿ ಸೌರ ವಿದ್ಯುತ್ ಶಕ್ತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಿಇಒ ಡಾ. ಕುಮಾರ್ ಅವರು ದೀಪಾವಳಿ (Deepavali) ಸಮಯದಲ್ಲಿ ಹಾಡಿಯ ಪ್ರತಿಯೊಂದು ಮನೆಯಲ್ಲಿಯೂ ಬೆಳಕನ್ನು (Light) ಮೂಡಿಸಲಾಗುತ್ತಿದೆ ಎಂದು ಹೇಳಿದರು. ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ಯುವ ದೀಪಾವಳಿ ಹಬ್ಬದ ಪ್ರಯುಕ್ತ ಕೂಡಗಿ ಹಾಡಿ ಮತ್ತು ಆಲನಹಳ್ಳಿ ಹಾಡಿಯ ಪ್ರತಿಯೊಂದು ಮನೆಗಳಲ್ಲೂ ಬೆಳಕು ಮೂಡಿಸಿ, ಗಿರಿಜನರ ಅಭಿವೃದ್ಧಿಯತ್ತ ಎಸ್‌ವಿವೈಎಸ್ ಸಂಸ್ಥೆಯ ಜೊತೆ ಮೈಂಡ್ ಟ್ರೀ ಫೌಂಡೇಷನ್ ಸಹಕಾರ ನೀಡಿರುವುದು ನಿಜಕ್ಕೂ ಸಂತಸದ ವಿಚಾರ ಎಂದು ತಮ್ಮ ಸಂತಸ ವ್ಯಕ್ತಪಡಿಸಿದರು.
ಎಚ್.ಡಿ. ಕೋಟೆ ತಾಲೂಕಿನಲ್ಲಿಯೇ ಮಾದರಿ ಗ್ರಾಪಂ ಮಾಡುವ ನಿಟ್ಟಿನಲ್ಲಿ ಇಂದು ಬಿ. ಮಟ್ಕೆರೆ ಗ್ರಾಪಂ ವ್ಯಾಪ್ತಿಗೆ ಬರುವ ಕೂಡಗಿ ಹಾಡಿ ಮತ್ತು ಆಲನಹಳ್ಳಿ ಹಾಡಿಗೆ ಸೋಲಾರ್ ದೀಪ ಮತ್ತು ಬಾಯ್ಲರ್‌ಗಳನ್ನು ನೀಡಲಾಗುತ್ತಿದೆ, ಹಾಡಿಯ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಮೈಂಡ್ ಟ್ರೀ ಫೌಂಡೇಶನ್ ಕಾರ್ಯಾಧ್ಯಕ್ಷರು ಎಚ್.ಪಿ. ಸುರೇಶ್ ಮಾತನಾಡಿ, ಮೈಂಡ್ ಟ್ರೀ ¶ೌಂಡೇಶನ್ ಶಿಕ್ಷಣ, ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಆದ್ದರಿಂದ ಸಂಸ್ಥೆಯ ತಮ್ಮ ಕೊಡುಗೆ ಉಪಯಕ್ತವಾಗಿ ಬಳಸಬೇಕೆಂದು ಕೋರಿದರು.
ಮೈಂಡ್ ಟ್ರೀ ಫೌಂಡೇಶನ್ ಮುಖ್ಯಸ್ಥ ಪಣೀಶ್‌ರಾವ್ ಅವರನ್ನು ಸನ್ಮಾನಿಸಿ, ಕೂಡಗಿ ಹಾಡಿ ಮತ್ತು ಆಲನಹಳ್ಳಿ ಹಾಡಿಯ ಪ್ರತಿಯೊಂದು ಕುಟುಂಬಕ್ಕೂ 77 ಸೋಲಾರ್ ಲೈಟ್, 75 ಬಾಯ್ಲರ್ ಯಂತ್ರ ಹಾಗೂ 6 ಬೀದಿ ದೀಪಗಳನ್ನು ವಿತರಿಸಲಾಯಿತು.
ಮೈಂಡ್ ಟ್ರೀ ಫೌಂಡೇಶನ್‌ನ ಸಿಎಸ್‌ಆರ್ ಮುಖ್ಯಸ್ಥರಾದ ದೀಪಕ್ ಪ್ರಭು ಮಟ್ಟಿ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ಇಲಾಖೆಯ ನಿರ್ದೇಶಕರು, ಡಾ. ಡೆನ್ನಿಸ್ ಚೌಹಾಣ್, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ಇಲಾಖೆಯ ಯೋಜನೆಯ ವ್ಯವಸ್ಥಾಪಕಿ ನಾಗರತ್ನ, ಮೊಳೆಯೂರು ಜಿಲ್ಲಾ ಅರಣ್ಯಾಧಿಕಾರಿ ಸಿ. ಪುಟ್ಟರಾಜು, ಬಿ ಮಟ್ಕೆರೆ ಗ್ರಾಪಂ ಅಧ್ಯಕ್ಷ ರೂಪಾಬಾಯಿ ಮಲ್ಲೇಶ್‌ನಾಯಕ್, ಉಪಾಧ್ಯಕ್ಷ ದೇವದಾಸ್, ಪಿಡಿಓ ಭಾಗ್ಯ, ಸದಸ್ಯರಾದ ಬೆಟ್ಟಸ್ವಾಮಿ, ನಾಗೇಂದ್ರ ಇದ್ದರು.
ರಾಜ್ಯದ ರೈತರಿಗೆ ಉಚಿತ ಸೌರ ವಿದ್ಯುತ್
ರಾಜ್ಯದ ಸುಮಾರು 3.50 ಲಕ್ಷ ರೈತರಿಗೆ ಉಚಿತವಾಗಿ ಸೌರ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ಕುಸುಮ್ ಸ್ಕೀಮ್ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಘೋಷಿಸಿದರು.
ವಿದ್ಯುತ್ ದರ ನಿಗದಿ ನಿಯಮಾವಳಿ ಬದಲಿಸುವ ಸೂಚನೆ ನೀಡಿದ ಇಂಧನ ಸಚಿವ
ಅವರು ಶನಿವಾರ ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ಸಹಾಯದಿಂದ ಅನುಷ್ಠಾನಗೊಳಿಸಲಾಗುವ ಈ ಯೋಜನೆಯಡಿ ರಾಜ್ಯದಲ್ಲಿ 1,000 ಮೆಗಾವ್ಯಾಟ್ ಸಾಮರ್ಥ್ಯದ 1,000 ಸೋಲಾರ್ ಫೀಡರ್‌ಗಳನ್ನು ಸ್ಥಾಪನೆ ಮಾಡಲಾಗುವುದು. ಅವುಗಳಿಂದ ನೇರವಾಗಿ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಉಚಿತ ಸೌರ ವಿದ್ಯುತ್ ಪೂರೈಕೆ ಮಾಡಲಾಗುವುದು. ಇದರಿಂದ 7 ಗಂಟೆ ನಿರಂತರ ವಿದ್ಯುತ್ ಪೂರೈಕೆಯ ರೈತರ ಬೇಡಿಕೆಯೂ ಈಡೇರಲಿದೆ ಎಂದು ಸಚಿವರು ಹೇಳಿದರು.
ವಿದ್ಯುತ್ ಬೆಲೆ ಇಳಿಕೆ..?: ಬಹಳ ವರ್ಷಗಳಿಂದಲೂ ಕಲ್ಲಿದ್ದಲು ಮತ್ತು ತೈಲ ಬೆಲೆ ಏರಿಕೆಯಾದಂತೆ ವಿದ್ಯುತ್ ಬೆಲೆಯನ್ನು ಪರಿಷ್ಕರಿಸಲಾಗುತ್ತಿತ್ತು. ಈಗ 3 ತಿಂಗಳಿಗೊಮ್ಮೆ ಬೆಲೆ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಕಲ್ಲಿದ್ದಲು ಮತ್ತು ತೈಲ ಬೆಲೆ ಇಳಿಕೆಯಾದಲ್ಲಿ ವಿದ್ಯುತ್ ಬೆಲೆ ಕೂಡ ಇಳಿಕೆಯಾಗುತ್ತದೆ. ಇಲ್ಲಿ ಏರಿಸಲಾದ ಬೆಲೆಯನ್ನು ಮಾತ್ರ ಇಳಿಸುವುದಲ್ಲ, ಮೂಲ ಬೆಲೆಯಲ್ಲಿಯೇ ಇಳಿಕೆಯಾಗುತ್ತದೆ ಎಂಬುದನ್ನು ಗಮನಿಸಬೇಕು ಎಂದವರು ಹೇಳಿದರು.
ರಾಜ್ಯದಲ್ಲಿ ಶೇ 9 - 10 ರಷ್ಟುವಿದ್ಯುತ್ ಪೋಲಾಗುತ್ತಿತ್ತು. ಕಳೆದ ವರ್ಷ ಟ್ರಾ®್ಸ…ಫಾರ್ಮರ್ ನಿರ್ವಹಣೆ ಅಭಿಯಾನದ ಮೂಲಕ ಅದನ್ನು ಶೇ.7ಕ್ಕೆ ಇಳಿಸಲಾಗಿದ್ದು, ಮತ್ತೆ ಅಭಿಯಾನ ನಡೆಸಿ ಶೇ.5ಕ್ಕೆ ಇಳಿಸುವ ಗುರಿ ಹೊಂದಲಾಗಿದೆ ಎಂದರು.
ಕಳೆದ ವರ್ಷ ಬೇಸಿಗೆಯಲ್ಲಿ ಅತೀ ಹೆಚ್ಚು 14,800 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಕೆ ಮಾಡಲಾಗಿತ್ತು. ಅದರ ಅನುಭವದ ಆಧಾರದಲ್ಲಿ ಈ ವರ್ಷವು ಎಷ್ಟೇ ಬೇಡಿಕೆ ಬಂದರು ಪೂರೈಕೆಗೆ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಸಚಿವರು ಹೇಳಿದರು.
28 ಸಾವಿರ ಅರ್ಜಿಗಳು: ಈ ಬಾರಿಯೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾರ್ವಜನಿಕರಿಂದ 28 ಸಾವಿರ ಶಿಫಾರಸು ಅರ್ಜಿಗಳು ಬಂದಿದೆ. ಅದರಲ್ಲಿ 35 ಕಲಾ ಪ್ರಕಾರಗಳಲ್ಲಿ ಎಲ್ಲ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆಯುವಂತೆ ತೆರೆಮರೆಯ ಸಾಧಕರನ್ನು ಗುರುತಿಸುವಂತೆ ಆಯ್ಕೆ ಸಮಿತಿಗೆ ಸೂಚಿಸಲಾಗಿದೆ. ಆಯ್ಕೆಯಲ್ಲಿ ಯಾವುದೇ ಒತ್ತಡ ಮತ್ತು ಲಾಭಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಈ ಅ. 29 ಅಥವಾ 30 ರಂದು ಪಟ್ಟಿಬಿಡುಗಡೆ ಮಾಡಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಎಸ್ಸಿ,ಎಸ್ಟಿಗೆ ಫ್ರೀ ಕರೆಂಟ್ ಗೊಂದಲ: ಸಿದ್ದು ಆರೋಪಕ್ಕೆ ಸುನಿಲ್ ಕುಮಾರ್ ಗುದ್ದು
ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ರುಪಾಯಿ ಬಿಡುಗಡೆ: ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಈಗಾಗಲೇ 20 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ರೀತಿಯ ಅನುದಾನ ಕೊರತೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದರು.