Asianet Suvarna News Asianet Suvarna News

ವಿದ್ಯುತ್ ದರ ನಿಗದಿ ನಿಯಮಾವಳಿ ಬದಲಿಸುವ ಸೂಚನೆ ನೀಡಿದ ಇಂಧನ ಸಚಿವ

ವಿದ್ಯುತ್ ದರ ಏರಿಕೆಯಿಂದ ಗ್ರಾಹಕರಿಗೆ, ರಾಜ್ಯದ ಜನತೆಗೆ ಹೊರೆಯಾಗುತ್ತಿದೆ ಎಂದು ನನಗೂ ಅನ್ನಿಸಿದೆ. ಕಾಂಗ್ರೆಸ್ ತಂದ ಈ ಪದ್ಧತಿಯಿಂದ ಜನರಿಗೆ ಹೊರೆಯಾಗುತ್ತಿದೆ. ಈ ಕುರಿತ ಸಾಧಕ ಬಾದಕಗಳ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಇಂಧನ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ.

Energy Minister Sunil Kumar has promised to change the electricity tariff regulation gow
Author
First Published Oct 2, 2022, 7:55 PM IST

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.2): ವಿದ್ಯುತ್ ದರ ಏರಿಕೆಯಿಂದ ಗ್ರಾಹಕರಿಗೆ, ರಾಜ್ಯದ ಜನತೆಗೆ ಹೊರೆಯಾಗುತ್ತಿದೆ ಎಂದು ನನಗೂ ಅನ್ನಿಸಿದೆ. ಕಾಂಗ್ರೆಸ್ ತಂದ ಈ ಪದ್ಧತಿಯಿಂದ ಜನರಿಗೆ ಹೊರೆಯಾಗುತ್ತಿದೆ. ಈ ಕುರಿತ ಸಾಧಕ ಬಾದಕಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ, ಅಗತ್ಯ ಬಿದ್ದರೆ ಈ ನಿಯಮಾವಳಿ ಹಿಂದಕ್ಕೆ ಪಡೆಯಲು ಕೂಡಾ ಹಿಂಜರಿಯುವುದಿಲ್ಲ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ. ವಿದ್ಯುತ್ ದರ ಏರಿಕೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ದರ ಏರಿಕೆ ನಿಯಮವನ್ನು ವಾಪಾಸು ಪಡೆಯುವ ಸೂಚನೆ ನೀಡಿದ್ದಾರೆ. 2014ರಲ್ಲಿ ಕಲ್ಲಿದ್ದಲಿನ ಬೆಲೆಯ ಹೊಂದಾಣಿಕೆ ಗೋಸ್ಕರ ನಿಯಮಾವಳಿ ರೂಪಿಸಲಾಗಿತ್ತು, ಹಿಂದಿನ ನಿಯಮಾವಳಿಯೇ ಮುಂದುವರಿಯುತ್ತಿದೆ. ನಮ್ಮ ಸರಕಾರ ಯಾವುದೇ ಹೊಸ ನಿಯಮಾವಳಿ ಮಾಡಿಲ್ಲ. ಈ ನಿಯಮಾವಳಿ ಬಗ್ಗೆ ಮರುಚಿಂತನೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಮೂರು ತಿಂಗಳಿಗೊಮ್ಮೆ ದರ ಹೊಂದಾಣಿಕೆ ಮಾಡುವ ನಿಯಮದ ಬಗ್ಗೆ ಮರು ಚಿಂತನೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.

ಖರ್ಗೆ ಎಐಸಿಸಿ ಅಧ್ಯಕ್ಷರಾದರೆ ರಾಜ್ಯದಲ್ಲಿ ಮತ್ತೊಂದು ಗುಂಪು
ಕಾಂಗ್ರೆಸ್ ನಲ್ಲಿ ಈಗಾಗಲೇ ಎರಡು ಮೂರು ಶಕ್ತಿಗಳು ಕೆಲಸ ಮಾಡುತ್ತಿವೆ.ಖರ್ಗೆ ಅಧ್ಯಕ್ಷರಾದರೆ ಗಾಂಧಿ ಕುಟುಂಬದ ಕೈ ಗೊಂಬೆಯಾಗಿ ಕೆಲಸ ಮಾಡುತ್ತಾರೆ.ಸ್ವತಂತ್ರವಾಗಿ ಅವರಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ನಮ್ಮದು ಯುವಕರ ಪಾರ್ಟಿ ಯುವಕರನ್ನು ಆಕರ್ಷಿಸುತ್ತೇವೆ ಎನ್ನುತ್ತಾರೆ. ಆದರೆ ಖರ್ಗೆ ಅಂತ ಹಿರಿಯರನ್ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಕಾಂಗ್ರೆಸ್ ಯುವಕರಿಗೆ ಯಾವ ಆದ್ಯತೆ ನೀಡುತ್ತೆ ಕಾದು‌ನೋಡಬೇಕು. ಕರ್ನಾಟಕದಲ್ಲಿ  ಕಾಂಗ್ರೆಸ್ನ ಮೂರನೇ ಬಣ ಉದಯವಾಗುತ್ತೆ ಸಿದ್ದರಾಮಯ್ಯ ಗುಂಪು, ಡಿಕೆ ಶಿವಕುಮಾರ್ ಗುಂಪು ಜೊತೆಗೆ ಖರ್ಗೆಯವರ ಗುಂಪು ಉದಯವಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

ಅಕ್ಟೋಬರ್‌ 1ರಿಂದ ಮತ್ತೆ ಗ್ರಾಹಕರಿಗೆ ತಟ್ಟಲಿದೆ ವಿದ್ಯುತ್ ಹೊರೆ

ಕಾಮನ್ ಸಿಎಂ ಬಗ್ಗೆ ಮಾತನಾಡುವ ನೈತಿಕತೆ, ಕಾಂಗ್ರೆಸ್ ಗಿಲ್ಲ: ಕಾಂಗ್ರೆಸಿಗೆ ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ 5 G ವೇಗದಲ್ಲಿ ಭ್ರಷ್ಟಾಚಾರ ಮಾಡಿದೆ. ಭ್ರಷ್ಟಾಚಾರ ಕಾಂಗ್ರೆಸ್ನ ಟ್ರೇಡ್ ಮಾರ್ಕ್. ಭ್ರಷ್ಟಾಚಾರ ಮಾಡಿ ಕಾಂಗ್ರೆಸ್ ನಾಯಕರು ಜಾಮೀನಿನ ಮೇಲೆ ಇದ್ದಾರೆ. ಈಗ ಭ್ರಷ್ಟಾಚಾರದ ಬಗ್ಗೆ ಟಿ-ಶರ್ಟ್ ಗಳನ್ನು ಹಾಕಿಕೊಂಡು ನಾಟಕ ಮಾಡುತ್ತಿದ್ದಾರೆ. ಯಾವುದೇ ವಿಚಾರ ಸ್ಪಷ್ಟತೆ ಇಲ್ಲದೆ ಭಾರತ ಜೋಡೋ ಯಾತ್ರೆ ನಡೆಸುತ್ತಿದ್ದಾರೆ.

 

ಶನಿವಾರದಿಂದಲೇ ವಿದ್ಯುತ್‌ ದರ ಮತ್ತೆ ಏರಿಕೆ: 6 ತಿಂಗಳಲ್ಲಿ 2ನೇ ಬಾರಿ ದುಬಾರಿ

ಈ ದೇಶದಲ್ಲಿ ಎರಡು ಧ್ವಜದ ಸಂಸ್ಕೃತಿ ಮಾಡಿದ್ದೇ ಕಾಂಗ್ರೆಸ್. ಭಾರತಕ್ಕೊಂದು ಧ್ವಜ ಕಾಶ್ಮೀರಕ್ಕೊಂದು ಧ್ವಜ ಮಾಡಿದ್ದು ಕಾಂಗ್ರೆಸ್. ಭಾರತವನ್ನು ವಿಭಜಿಸುವ ಎಲ್ಲಾ ಪ್ರಯತ್ನ ಮಾಡಿದ ಪಕ್ಷ ಕಾಂಗ್ರೆಸ್. ಭಾರತ ಜೋಡೋ ಅನ್ನುವ ಶಬ್ದಕ್ಕೂ ಕಾಂಗ್ರೆಸ್ಗೂ ಸಂಬಂಧವೇ ಇಲ್ಲ. ಕಾಂಗ್ರೆಸ್ ಕಾರ್ಯಕರ್ತರನ್ನು ಮೊದಲು ಜೋಡಿಸಿ. ಕಾಂಗ್ರೆಸಿಗೆ ನಮ್ಮ ಕಾಮನ್ ಮ್ಯಾನ್ ಸಿಎಂ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ರಾಜ್ಯದಲ್ಲಿ ನಡೆಯುತ್ತಿರುವ 21 ದಿನಗಳ ಯಾತ್ರೆಗೆ ಜನ ಬೆಂಬಲ ಇಲ್ಲ ಎಂದು ಸುನೀಲ್ ಹೇಳಿದ್ದಾರೆ.

Follow Us:
Download App:
  • android
  • ios