ಕಾರಿನಲ್ಲಿ ಗಾಂಜಾತಂದು ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ  ಇವರಿಂದ ಭಾರಿ ಮೊತ್ತದ ಗಾಂಜಾ ವಶಕ್ಕೆ ಪಡೆದ ಪೊಲೀಸರು

ಶಿವಮೊಗ್ಗ (ಸೆ.12): ಕಾರಿನಲ್ಲಿ ಗಾಂಜಾತಂದು ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದು ಇವರಿಂದ ಭಾರಿ ಮೊತ್ತದ ಗಾಂಜಾ ವಶಕ್ಕೆ ಪಡೆಯಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಶಿವಮೊಗ್ಗದ ಕಲ್ಲೂರು ಗ್ರಾಮದ ಚಾನಲ್ ಬಳಿ ತುಂಗಾನಗರ ಠಾಣೆ ಪೋಲಿಸರು ಇಂದು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಈ ವೇಳೆ ನಾಲ್ವರು ಪರಾರಿಯಾಗಿದ್ದಾರೆ.

ಕಲ್ಲೂರು ಗ್ರಾಮದ ಚಾನಲ್ ಬಳಿ ಗಾಂಜಾ ಮಾರಾಟಗಾರರು ಪ್ರತಿದಿನ ಬರುತ್ತಿದ್ದರು. ಕಾರಿನಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಈ ಬಗ್ಗೆ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಡಿವೈಎಸ್ಪಿಪ್ರಶಾಂತ್‌ ಮುನ್ನೋಳಿ ಮಾರ್ಗದರ್ಶನದಲ್ಲಿ , ಇನ್ಸ್‌ಪೆಕ್ಟರ್‌ ದೀಪಕ್ ಮತ್ತು ಸಿಬ್ಬಂದಿ ಖಚಿತ ಮಾಹಿತಿಯನ್ನಾದರಿಸಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

5 ವರ್ಷದ ಹಿಂದೆ ಬಿಹಾರದಿಂದ ಬಂದು ಗಾಂಜಾ ಮಾರಿ 3 ಕೋಟಿ, ಫ್ಲಾಟ್ ಮಾಡಿದ್ದವನ ಆಸ್ತಿ ಜಪ್ತಿ!

ಪ್ಲಂಬರ್‌ ಕೆಲಸ ಮಾಡುತ್ತಿದ್ದ ಶೇಖ್ ಅಹಮದ್ , ಮೊಹಮದ್ ಮುಸ್ತಫಾ , ಪೇಂಟರ್ ಅಲ್ಲಾಭಕ್ಷಿ ಎಂಬ ಮೂವರನ್ನು ಬಂಧಿಸಲಾಗಿದ್ದು, ಪೊಲೀಸರು ದಾಳಿ ನಡೆಸುತ್ತಿದ್ದಂತೆ ರಾಹಿಲ್ , ಕುರಂ , ತಾಸೀರ್ , ಮಾಡ್ಲರ್‌ ಶಾರೂ ಪರಾರಿಯಾಗಿದ್ದಾರೆ.

ಬಂಧಿತರಿಂದ ಪೊಲೀಸರು ಎರಡು ಕೆಜಿ 120 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಇದರ ಮೌಲ್ಯದ ಸುಮಾರು 80 ಸಾವಿರ ರೂ . ಎಂದು ಅಂದಾಜಿಸಲಾಗಿದೆ . ಘಟನೆಗೆ ಬಳಕೆ ಮಾಡಿಕೊಂಡಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ .