ತೀರ್ಥಹಳ್ಳಿ [ಡಿ.16]: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ಹಣಗೆರೆಕಟ್ಟೆಯಿಂದ ಬೆಜ್ಜವಳ್ಳಿ ಮೂಲಕ ತೀರ್ಥಹಳ್ಳಿ ಕಡೆಗೆ ಗಾಂಜಾ ತೆಗೆದುಕೊಂಡು ಹೋಗುವ ವೇಳೆ ಕಳ್ಳರು ಮಾದಕ ವಸ್ತು ವ್ಯಾಪಾರಿಗಳು ಸಿಕ್ಕಿ ಬಿದ್ದಿದ್ದಾರೆ. 

ಸ್ಕೂಟಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಫಕೀರಪ್ಪ [45], ಸಿರಾಜುದ್ದಿನ್, ಅನಿಲ್[21] ಎನ್ನುವ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ರಾಜಾರೋಷವಾಗಿ ಬಸ್ಸಲ್ಲೇ ಇದನ್ನ ಸಾಗಿಸ್ತಿದ್ದ ಮಹಿಳೆ ಅರೆಸ್ಟ್..

ಆಕ್ಟಿವಾ ಸ್ಕೂಟಿಯಲ್ಲಿ ಪ್ಲಾಸ್ಟಿಂಕ್ ಚೀಲದಲ್ಲಿ 1310 ಗ್ರಾಂ ತೂಕದ 20 ಸಾವಿರಕ್ಕೂ ಅಧಿಕ ಮೌಲ್ಯದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.